ADVERTISEMENT

ಬೆಳಗುತ್ತಿ ಹೋಬಳಿ ರೈತರಿಗೆ ರಾಜ್ಯಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 4:46 IST
Last Updated 24 ಜೂನ್ 2017, 4:46 IST
ಬೆಳಗುತ್ತಿ ಹೋಬಳಿ ರೈತರಿಗೆ ರಾಜ್ಯಪ್ರಶಸ್ತಿ ಪ್ರದಾನ
ಬೆಳಗುತ್ತಿ ಹೋಬಳಿ ರೈತರಿಗೆ ರಾಜ್ಯಪ್ರಶಸ್ತಿ ಪ್ರದಾನ   

ನ್ಯಾಮತಿ: ಸಮೀಪದ ಬೆಳಗುತ್ತಿ ಹೋಬಳಿ ಕೃಷಿ ಸಂಪರ್ಕ ಕೇಂದ್ರ ವ್ಯಾಪ್ತಿಯ ರೈತರು 2014–15ನೇ ಸಾಲಿನಲ್ಲಿ ಶೇಂಗಾ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ರಾಮೇಶ್ವರ ಗ್ರಾಮದ ಆರ್‌.ಡಿ.ಶಿವಮೂರ್ತಿ ಒಂದು ಹೆಕ್ಟೇರಿಗೆ 37.61, ಬೆಳಗುತ್ತಿ ಗ್ರಾಮದ ಟಿ.ಮಲ್ಲೇಶಪ್ಪ 32.70 ಕ್ವಿಂಟಲ್‌ ಶೇಂಗಾ ಬೆಳೆದು ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ಬೆಳಗುತ್ತಿಯ ಟಿ.ಆರ್‌.ಚಂದ್ರಪ್ಪ 31.71 ಕ್ವಿಂಟಲ್‌ ಶೇಂಗಾ ಬೆಳೆದು ತೃತೀಯ ಬಹುಮಾನ ಪಡೆದರು. ಅವರನ್ನು ಜೂನ್‌ 21ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ  ಬೈರೇಗೌಡ ಅವರು ಸನ್ಮಾನಿಸಿದ್ದಾರೆ ಎಂದು ಸಹಾಯಕ ಕೃಷಿ ಅಧಿಕಾರಿ ಆರ್‌.ಟಿ. ಕರಲಿಂಗಪ್ಪನವರ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.