ADVERTISEMENT

ಸ್ಥಳ ನಿಗದಿಗೊಳಿಸಲು ಬೀದಿ ಬದಿ ವ್ಯಾಪಾರಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:46 IST
Last Updated 8 ನವೆಂಬರ್ 2017, 6:46 IST

ದಾವಣಗೆರೆ: ನಗರದ ಸಿ.ಜಿ.ಆಸ್ಪತ್ರೆ ಹಿಂಭಾಗದ ಕಾಂಪೌಂಡ್‌ನಲ್ಲಿ 7 ಅಡಿ ಉದ್ದ X7 ಅಡಿ ಅಗಲದ ವಿಸ್ತೀರ್ಣದಲ್ಲಿ ಮಳಿಗೆ ನಿರ್ಮಿಸಿಕೊಡಬೇಕು ಎಂದು ಬಾಪೂಜಿ ಆಸ್ಪತ್ರೆ ರಸ್ತೆ ಬದಿ ವ್ಯಾಪಾರಿಗಳು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು 30–40 ವರ್ಷಗಳಿಂದ ಬಾಪೂಜಿ ರಸ್ತೆ ಮುಂಭಾಗದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ಈ ವ್ಯಾಪಾರದಿಂದಲೇ ಆಗುತ್ತಿದೆ. ಈಗ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈಗ ಸುಮಾರು 3–4 ದಿನಗಳಿಂದ ಅಂಗಡಿಗಳನ್ನು ಬಂದ್‌ ಮಾಡಿ, ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಟ್ಟಿದ್ದೇವೆ.

ಇದನ್ನೇ ನಂಬಿರುವ ನಮಗೆ ಜೀವನ ನಿರ್ವಹಣೆ ತುಂಬಾ ತೊಂದರೆಯಾಗುತ್ತಿರುವುದರಿಂದ ನಮಗೆ ಶಾಶ್ವತ ಪರಿಹಾರವಾಗಿ ಸಿ.ಜಿ.ಆಸ್ಪತ್ರೆ ಹಿಂಭಾಗದಲ್ಲಿ ಮಳಿಗೆ ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ನಿಮ್ಮ ಅಧಿಕಾರಾವಧಿಯಲ್ಲೇ ಸ್ಥಳ ನಿಗದಿಗೊಳಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಿಕೊಡಬೇಕು ಎಂದು ಸಚಿವರನ್ನು ಆಗ್ರಹಿಸಿದರು. ಈ ಸಂದರ್ಭ ಬೀದಿ ಬದಿ ವ್ಯಾಪಾರಿಗಳಾದ ರಸೂಲ್‌ಸಾಬ್, ಕೆ.ನಾಗರಾಜ, ಎಚ್‌.ಮಂಜಪ್ಪ, ಶಶಿಕಲಾ, ಸಿಂಧು, ಷೇಕ್‌ ಅಹಮದ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.