ADVERTISEMENT

‘ಒತ್ತಡದ ಬದುಕಿನಿಂದ ವ್ಯತಿರಿಕ್ತ ಪರಿಣಾಮ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:47 IST
Last Updated 18 ಏಪ್ರಿಲ್ 2017, 5:47 IST

ಧಾರವಾಡ:  ‘ಇಂದಿನ ಒತ್ತಡದ ಬದುಕು ಪ್ರತಿ ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಗಮನಹರಿಸಬೇಕು’ ಎಂದು ಮನಸೂರ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಹೇಳಿದರು.ಇಲ್ಲಿನ ಸೈದಾಪೂರದ ಮಸಜೀದಗಲ್ಲಿಯಲ್ಲಿ ಇಸ್ಮಾಯಿಲ್ ತಮಾಟಗಾರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾವು ಸೇವಿಸುವ ಆಹಾರ, ಕಲುಷಿತ ವಾತಾವರಣ, ಅವ್ಯವಸ್ಥಿತ ಜೀವನ ಕ್ರಮಗಳು ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿವೆ. ಗೊತ್ತಿಲ್ಲದೆ ಹಲವು ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಅವಶ್ಯ’ ಎಂದು ಹೇಳಿದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿ, ‘ಕಾಯಿಲೆ ಮನುಷ್ಯನಿಗೆ ಬರುವುದು ಸಹಜ. ಆದರೆ ರೋಗಗಳು ಉಲ್ಬಣಗೊಳ್ಳುವ ಮುಂಚೆಯೇ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಜ್ಞರಿಂದ ಅಗತ್ಯ ಸಲಹೆ ಪಡೆಯಲು ಮರೆಯಬಾರದು. ರೋಗ ಬರುವುದಕ್ಕಿಂತ ಆರಂಭದಲ್ಲಿಯೇ ಅದನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು ಜಾಣತನ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುತವಲ್ಲಿ ದಾದಾಹಯಾತ್ ನರಗುಂದ, ಮೆಹಮೂದ್‌ ಬೆಳಗಾಂವ, ಮುನ್ನಾ ಕೆಲಗೇರಿ, ಮಹ್ಮದ್ ಅಸ್ಲಂ ರಾಯದುರ್ಗ, ಎಂ.ಎಸ್.ಮುನವಳ್ಳಿ, ಖ್ವಾಜಾ ಚೌಧರಿ, ಎಂ.ಎ.ನವಲೂರ, ರಸೂಲ್ ನದಾಫ್, ಮುನೀರ್ ಸೌದಾಗರ್‌, ಮಂಜು ಮಾನೆ, ಲಿಯಾಕತ್ ಜಮಾದಾರ್, ಹಬೀಬ್ ಘೋಡೆಸವಾರ, ಅನ್ವರ್ ಹರಪನಹಳ್ಳಿ, ಯುಸೂಫ್ ಮಕಾನದಾರ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.