ADVERTISEMENT

ಕಾನೂನು ವಿವಿ ಅಥ್ಲೆಟಿಕ್ಸ್‌: ಎರಡು ದಾಖಲೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 6:47 IST
Last Updated 29 ಏಪ್ರಿಲ್ 2017, 6:47 IST

ಧಾರವಾಡ: ಉಡುಪಿ ವೈಕುಂಠ ಬಾಳಿಗಾ ಕಾಲೇಜಿನ ಪ್ರಜ್ವಲ್ ಶೆಟ್ಟಿ ಹಾಗೂ ರಶ್ಮಿತಾ ಆರ್.ಕಲ್ಮಾಡಿ ಇಲ್ಲಿ ಗುರುವಾರ ಆರಂಭಗೊಂಡ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದಲ್ಲಿ ದಾಖಲೆ ಬರೆದರು.ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಕೂಟದ ಮೊದಲ ದಿನ ಪ್ರಜ್ವಲ್ ಶೆಟ್ಟಿ ಶಾಟ್‌ಪಟ್‌ನಲ್ಲಿ ಮತ್ತು ರಶ್ಮಿತಾ ಕಲ್ಮಾಡಿ ಲಾಂಗ್‌ಜಂಪ್‌ನಲ್ಲಿ ಈ ಸಾಧನೆ ಮಾಡಿದರು.

ಇತರ ಫಲಿತಾಂಶಗಳು: ಪುರುಷರ ವಿಭಾಗದ 1500 ಮೀಟರ್ಸ್ ಓಟ: ಬಸವರಾಜ ನಾಗೋಡ (ಗುರುಸಿದ್ದಪ್ಪ ಕೋತಂಬ್ರಿ ಕಾಲೇಜು, ಹುಬ್ಬಳ್ಳಿ)–1, ಲಕ್ಷಿತ್ ಟಿ.ಎಚ್‌ (ವಿದ್ಯಾವರ್ಧಕ ಕಾಲೇಜು, ಮೈಸೂರು)–2, ಪ್ರತಾಪ ನಾಯ್ಕ (ಸರ್ಕಾರಿ ಕಾಲೇಜು, ಹಾಸನ)–3. ಕಾಲ–4:46.67 ಸೆಕೆಂಡು; ಹೈಜಂಪ್‌: ರಾಘವ ಬಿದ್ದಪ್ಪ (ಕೆ.ಎಲ್.ಇ ಸೊಸೈಟಿ ಕಾಲೇಜು, ಬೆಂಗಳೂರು)–1, ಸಂಪತ್ ಕುಮಾರ್ ಮೇಟಿ (ಕಾನೂನು ಶಾಲೆ, ನವನಗರ)–2, ಮಲ್ಲಿಕಾರ್ಜುನ ಎನ್‌.ಕೆ (ಕಾನೂನು ಶಾಲೆ)–3. ಎತ್ತರ–1.69 ಮೀಟರ್ಸ್‌; ಶಾಟ್‌ಪಟ್‌: ಪ್ರಜ್ವಲ್‌ ಶೆಟ್ಟಿ (ವೈಕುಂಠ ಬಾಳಿಗಾ ಕಾಲೇಜು, ಉಡುಪಿ)–1, ಜೋಬಿ ಜಾಯ್‌ (ವಿವೇಕಾನಂದ ಕಾಲೇಜು, ಪುತ್ತೂರು)–2, ಗುರುರಾಜ ಭಂಡಾರಿ (ಸೇಠ್ ಶಂಕರಯ್ಯ ಲಹೋಟಿ ಕಾಲೇಜು, ಕಲಬುರ್ಗಿ)–3. ಅಂತರ–10.80 ಮೀ. ಮಹಿಳಾ ವಿಭಾಗ: 1500 ಮೀ.ಓಟ: ರಕ್ಷಿತಾ ಪಿ (ವಿವೇಕಾನಂದ ಕಾಲೇಜು, ಪುತ್ತೂರು)–1, ಶ್ರುತಿ ಎ.ಕೆ (ಶ್ರೀನಿವಾಸಶೆಟ್ಟಿ ಕಾಲೇಜು ಚಿಕ್ಕಮಗಳೂರು)–2, ಸುಧಾ ಎಚ್‌ (ಆರ್.ಎಲ್.ಕಾಲೇಜು, ದಾವಣಗೆರೆ)–3. ಕಾಲ–7:04.93 ಸೆಕೆಂಡು; ಡಿಸ್ಕಸ್ ಥ್ರೋ: ಅನುಕ್ತಿ ಶೆಟ್ಟಿ (ಎಸ್.ಡಿ.ಎಂ ಕಾಲೇಜು, ಮಂಗಳೂರು)–1, ನಯನಶ್ರೀ (ವಿವೇಕಾನಂದ ಕಾಲೇಜು, ಪುತ್ತೂರು)–2, ನಿಶ್ಮಿತಾ (ವೈಕುಂಠ ಬಾಳಿಗಾ ಕಾಲೇಜು, ಉಡುಪಿ)–3. ದೂರ–31.47 ಮೀ.; ಲಾಂಗ್‌ಜಂಪ್‌: ರಶ್ಮಿತಾ ಆರ್.ಕಲ್ಮಾಡಿ (ವೈಕುಂಠ ಬಾಳಿಗಾ ಕಾಲೇಜು)–1, ರವೀನಾ ವಿವಿ (ಎಸ್.ಡಿ.ಎಂ ಕಾಲೇಜು, ಮಂಗಳೂರು)–2, ದೀಪಾ ಎಚ್‌ (ಬೆಲ್ಲದ ಕಾಲೇಜು ಬೆಳಗಾವಿ)–3. ದೂರ–4.01 ಮೀಟರ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT