ADVERTISEMENT

‘ಖಾತ್ರಿ’ಯಾಗದ ಉದ್ಯೋಗ; ಅಳಲು

ಉದ್ಯೋಗ ನೀಡಬೇಕೆಂಬ ನಿರ್ದೇಶನವಿದ್ದರೂ ಜಾಬ್ ಕಾರ್ಡ್‌ದಾರರಿಗೆ ಉದ್ಯೋಗವಿಲ್ಲ

ಬಸವರಾಜ ಸಂಪಳ್ಳಿ
Published 11 ಜನವರಿ 2017, 6:49 IST
Last Updated 11 ಜನವರಿ 2017, 6:49 IST
‘ಖಾತ್ರಿ’ಯಾಗದ ಉದ್ಯೋಗ; ಅಳಲು
‘ಖಾತ್ರಿ’ಯಾಗದ ಉದ್ಯೋಗ; ಅಳಲು   

ಶಿರಗುಪ್ಪಿ(ಹುಬ್ಬಳ್ಳಿ): ಬರದಿಂದ ಕಂಗೆ­ಟ್ಟಿ­ರುವ ಶಿರಗುಪ್ಪಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ದೊರೆಯದ ಕಾರಣಕ್ಕೆ ಕೃಷಿ ಕೂಲಿಕಾರ್ಮಿಕರು ಪರಿತಪಿಸ­ತೊಡಗಿದ್ದಾರೆ.

ಕೂಲಿಕಾರ್ಮಿಕ ಮಹಿಳೆಯರು ಕಡಿಮೆ ಕೂಲಿಗೆ ರೈತರ ಹೊಲದಲ್ಲಿ ಮೆಣ­ಸಿ­ನಕಾಯಿ ಸ್ವಚ್ಛಮಾಡಲು, ಹತ್ತಿ ಬಿಡಿಸಲು ಹೋಗುತ್ತಿದ್ದಾರೆ. ಪುರುಷರು ಕೆಲಸ ಅರಸಿ ಹುಬ್ಬಳ್ಳಿ ನಗರಕ್ಕೆ ಹೋಗುತ್ತಿದ್ದಾರೆ.

‘ಪಂಚಾಯ್ತಿ­ಯಲ್ಲಿ ಉದ್ಯೋ­ಗ ಕೆಲಸ ಸಿಗದ ಕಾರಣಕ್ಕೆ ರೈತರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿ­ದ್ದೇವೆ. ದಿನಕ್ಕೆ ರೂ 100 ಕೊಡುತ್ತಾರೆ. ಈ ಕೂಲಿ ಯಾವುದಕ್ಕೂ ಸಾಲುವುದಿಲ್ಲ’ ಎಂದು ಗ್ರಾಮದ ಕೂಲಿಕಾರ್ಮಿಕರಾದ ಮಹಾ­ದೇವಪ್ಪ ಮುಂದಿನಮನಿ, ಮಲ್ಲಮ್ಮ ದಿವಾನದ ಅಲವತ್ತುಕೊಂಡರು.

ಯಾರೊಬ್ಬರೂ ಕೆಲಸ ಕೇಳುತ್ತಿಲ್ಲ: ‘ಗ್ರಾಮದಲ್ಲಿ 855 ಜಾಬ್‌ ಕಾರ್ಡ್‌ಗಳಿವೆ. ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ 9,998 ಜನರಿಗೆ ಉದ್ಯೋಗ ನೀಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಚಿತ್ರಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದೆ. ಶೀಘ್ರದಲ್ಲೇ ಗ್ರಾಮದ ಗಟಾರ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾ­ಗು­ವುದು’ ಎಂದು ಹೇಳಿದರು.
‘ಇದುವರೆಗೂ ಯಾರೊಬ್ಬರೂ ಕೆಲಸ ಕೇಳಿಕೊಂಡು ಪಂಚಾಯಿತಿಗೆ ಬಂದಿಲ್ಲ. ಕೆಲಸ ಕೇಳಿಕೊಂಡು ಬಂದರೆ ನೀಡುತ್ತೇವೆ. ಸದ್ಯ ಯಾವುದೇ ಕೆಲಸ ನಡೆಯುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.