ADVERTISEMENT

‘ವರನಟ’ ರಾಜ್‌ಕುಮಾರ್‌ ಜನ್ಮ ದಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:31 IST
Last Updated 25 ಏಪ್ರಿಲ್ 2017, 5:31 IST

ಹುಬ್ಬಳ್ಳಿ: ‘ವರನಟ’ ಡಾ.ರಾಜ್‌ಕುಮಾರ್‌ ಅವರ ಜನ್ಮ ದಿನವನ್ನು ಅಭಿಮಾನಿಗಳು ನಗರದ ವಿವಿಧೆಡೆ ಸೋಮವಾರ ಸಂಭ್ರಮದಿಂದ ಆಚರಿಸಿದರು.

ಚಲವಾದಿಗೆ ಪ್ರಶಸ್ತಿ: ಶಿವಾನಂದ ಮುತ್ತಣ್ಣವರ ನೇತೃತ್ವದಲ್ಲಿ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದಿಂದ ಇಲ್ಲಿನ ವೀರಾಪುರ ಓಣಿಯಲ್ಲಿ ರಸಮಂಜರಿ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಸಂಘದಿಂದ ಈ ವರ್ಷದಿಂದ ಪ್ರಥಮ ಬಾರಿಗೆ ಕೊಡಮಾಡಿರುವ ‘ಡಾ.ರಾಜ್‌ಕುಮಾರ್‌’ ಪ್ರಶಸ್ತಿಯನ್ನು ಗಾಯಕ ಗುರುರಾಜ ಚಲವಾದಿ ಅವರಿಗೆ ನೀಡಿ ಗೌರವಿಸಲಾಯಿತು. ಬಳಿಕ ಗುರು ಚಲವಾದಿ ಹಾಗೂ ಗಾನ ತರಂಗ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

‘ರಾಜ್‌ ನುಡಿನಮನ’ ಕಾರ್ಯಕ್ರಮವನ್ನು ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ ಉದ್ಘಾಟಿಸಿ, ಮಾತನಾಡಿದರು. ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ,ಡಿಸಿಪಿ ಜಿನೇಂದ್ರ ಖನಗಾವಿ, ಮಲ್ಲಿಕಾರ್ಜುನ ಬಾಲದಂಡಿ ಕಾರ್ಯಕ್ರಮದಲ್ಲಿದ್ದರು. ಬೆಳಿಗ್ಗೆ ಸಿದ್ಧಾರೂಢಮಠದಲ್ಲಿ ಅಭಿಮಾನಿಗಳು ರಾಜ್‌ಕುಮಾರ್ ಹೆಸರಿನಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರಾಜ್‌ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಸಿಹಿ ಹಂಚಿದರು.

ಪುಷ್ಪ ನಮನ:   ಹುಬ್ಬಳ್ಳಿ ಆಟೊ ರಿಕ್ಷಾ ಮಾಲಿಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ  ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.ಡಾ. ರಾಜ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜಯಕಾರ ಹಾಕಿದರು. ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಪದಾಧಿಕಾರಿಗಳಾದ ಮುಸ್ತಾಕ್‌ ಕರ್ಜಗಿ, ಚಿದಾನಂದ ಸವದತ್ತಿ, ಬಸವರಾಜ ಉಣಕಲ್‌, ಪರಶುರಾಮ ಪೂಜಾರ, ಹನುಮಂತ ಮುಳಗುಂದ, ರಫೀಕ್‌ ಕುಂದಗೋಳ, ಅಪ್ಪಣ್ಣ ಬ್ಯಾಡಗಿ ಇದ್ದರು.

ಪ್ರೇಕ್ಷಕರಿಗೆ ಪಲಾವ್‌: ಇಲ್ಲಿನ ‘ಅಪ್ಸರಾ’ ಚಿತ್ರಮಂದಿರದಲ್ಲಿ ರಾಜ್‌ ಅಭಿಮಾನಿಗಳು ಪ್ರೇಕ್ಷಕರಿಗೆ ಪಲಾವ್‌, ಸಿಹಿ ಹಂಚಿದರು. ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ, ರಾಜ್‌ ಪರ ಘೋಷಣೆ ಹಾಕಿದರು. ರಾಘು ವದ್ದಿ, ಆನಂದ ಡಂಗಿ, ಕಲ್ಲಪ್ಪ ಶಿರಕೋಳ, ರಾಜು ಗೊಬ್ಬರಗುಂಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.