ADVERTISEMENT

ಉತ್ತರ ಕರ್ನಾಟಕ ‌ನಿರ್ಲಕ್ಷ್ಯ: ವಿ.ಪಿ.ಲಿಂಗನಗೌಡ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 9:47 IST
Last Updated 5 ಜುಲೈ 2018, 9:47 IST
ವಿ.ಪಿ.ಲಿಂಗನಗೌಡ್ರ
ವಿ.ಪಿ.ಲಿಂಗನಗೌಡ್ರ    

ಹುಬ್ಬಳ್ಳಿ: ಮುಖ್ಯಮಂತ್ರಿ ‌ಎಚ್.ಡಿ.ಕುಮಾರಸ್ವಾಮಿ ‌ಮಂಡಿಸಿದ ಬಜೆಟ್‌ನಲ್ಲಿ ಉತ್ತರ‌ ಕರ್ನಾಟಕವನ್ನು ‌ಸಂಪೂರ್ಣವಾಗಿ‌ ನಿರ್ಲಕ್ಷಿಸಲಾಗಿದೆ ಎಂದು ‌ಇಲ್ಲಿನ ಕರ್ನಾಟಕ ‌ವಾಣಿಜ್ಯೋದ್ಯಮ ಸಂಸ್ಥೆ ‌(ಕೆಸಿಸಿಐ) ಅಧ್ಯಕ್ಷ ವಿ.ಪಿ.ಲಿಂಗನಗೌಡ್ರ ಟೀಕಿಸಿದರು.

ಬಜೆಟ್ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಎಲೆವೆಟೆಡ್ ಕಾರಿಡಾರ್ ಅಭಿವೃದ್ಧಿಗೆ ಸಾವಿರಾರು ಕೋಟಿ, ಹಾಸನದ ವರ್ತುಲ‌ ರಸ್ತೆಗೆ ₹ 300 ಕೋಟಿ ಕೊಡುವ ಕುಮಾರಸ್ವಾಮಿ ಅವರು ಹುಬ್ಬಳ್ಳಿಯ ‌ಗಬ್ಬೂರು ಬೈಪಾಸ್ ರಸ್ತೆ ಅಭಿವೃದ್ಧಿ ಹಾಗೂ ಕಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ‌ ಗಮನ ಹರಿಸಿಲ್ಲ ಎಂದರು.

ನಾವು ಪ್ರತ್ಯೇಕ ಉತ್ತರ ಕರ್ನಾಟಕ ‌ಕೇಳುವುದಿಲ್ಲ. ಉತ್ತರ ಕರ್ನಾಟಕದನಿರ್ಲಕ್ಷ್ಯ ‌ಹೀಗೆಯೇ ‌ಮುಂದುವರಿದರೆ ಪ್ರತ್ಯೇಕತೆಯ ಕೂಗು‌ ಬಲವಾಗುತ್ತದೆಎಂದು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.