ADVERTISEMENT

ತಾಯಿಯ ಪಾತ್ರ ನಿರ್ಣಾಯಕ

ಕಾವ್ಯ-ಕುಂಚ, ರೂಪಕ, ಯೋಗ ಪ್ರದರ್ಶನ; ಲಿಂಗ ತಾರತಮ್ಯ ಕುರಿತು ತೋಂಟದಾರ್ಯ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:24 IST
Last Updated 22 ಮಾರ್ಚ್ 2017, 7:24 IST

ಗದಗ: ಹೆಣ್ಣುಮಕ್ಕಳಲ್ಲಿ ವಿಶೇಷ ಕೌಶಲ ಮತ್ತು ಸಾಮರ್ಥ್ಯಗಳಿವೆ. ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ಲಭಿಸಿದಾಗ ಮಹಾ ಸಾಧಕಿ ಆಗಲು ಸಾಧ್ಯವಾಗುತ್ತದೆ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮಠದಲ್ಲಿ ನಡೆದ 2320ನೇ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶತ ಶತಮಾನಗಳಿಂದ ಹೆಣ್ಣುಮಕ್ಕ ಳನ್ನು ಶಿಕ್ಷಣ, ಸ್ವಾತಂತ್ರ್ಯದಿಂದ ದೂರ ಇಟ್ಟಿದ್ದಾರೆ.

ಸಮಾನ ಸಮಾಜ ನಿರ್ಮಾಣ ಕನಸಿಗೆ ಶರಣರು ಮುನ್ನುಡಿ ಬರೆದರು. ತಾಯಿಯು, ಮಕ್ಕಳನ್ನು ಬೆಳೆಸುವ ಹಂತ ದಲ್ಲೇ ಸಮಾನ ಅವಕಾಶಗಳನ್ನು ನೀಡಿ, ಮನೆಯಿಂದಲೇ ಲಿಂಗ ತಾರತಮ್ಯ ಹೋಗ ಲಾಡಿಸಬೇಕು ಎಂದರು.

ಜೀಜಾಬಾಯಿಯ ಪ್ರಭಾವದಿಂದಲೇ ಶಿವಾಜಿ ಸಮರ್ಥ ರಾಜನಾಗಲು ಸಾಧ್ಯ ವಾಯಿತು. ಈ ಹಿನ್ನೆಲೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿ ತಂದೆ ತಾಯಂದಿರ ಪಾತ್ರ ಗುರುತರವಾದುದು. ಸದಾಚಾರ, ಸಚ್ಚಾರಿತ್ರ್ಯ, ಸತ್ ಚಿಂತನೆಗಳು ಮಕ್ಕಳ ಬೆಳವಣಿಗೆಯ ಅಡಿಪಾಯಗಳಾಗಬೇಕು ಎಂದು ಅವರು ಹೇಳಿದರು.

ಅಕ್ಕಮಹಾದೇವಿ ಯೋಗವಿಜ್ಞಾನದ ಕೇಂದ್ರದ 9ನೇ ವಾರ್ಷಿಕೋತ್ಸವ ಅಂಗ ವಾಗಿ ಕಾವ್ಯಕುಂಚ ಕಾರ್ಯಕ್ರಮ ನಡೆ ಯಿತು. ಕವಯತ್ರಿಯರಾದ ಕವಿತಾ ದಂಡಿನ, ಪ್ರೊ.ಶಕುಂತಲಾ ಸಿಂಧೂರ, ಡಾ.ವೀಣಾ ಹೂಗಾರ, ಡಾ.ತಾರಾ ಬಿ.ಎನ್. ಪ್ರೇಮಾ ಹಂದಿಗೋಳ, ರಶ್ಮಿ ಅಂಗಡಿ, ವಿಜಯಲಕ್ಷ್ಮೀ ಹೊಳ್ಳಿ ಅವರು ಹೆಣ್ಣಿನ ಶೋಷಣೆ, ಭ್ರೂಣಹತ್ಯೆ, ಸಾಮಾ ಜಿಕ ಪಿಡುಗುಗಳ ಕುರಿತು ಕವಿತೆ ವಾಚಿಸಿ ದರು. ಕವಿತೆ ಓದುವ ಸಂದರ್ಭದಲ್ಲಿಯೇ ಕವಿತೆಗೆ ಪೂರಕವಾದ ಚಿತ್ರಗಳನ್ನು ಚಿತ್ರ ಕಲಾವಿದೆ ಪ್ರೇಮಾ ಹಂದಿಗೋಳ ಅವರು ರಚಿಸಿ ಗಮನ ಸೆಳೆದರು.

ಅಕ್ಕಮಹಾದೇವಿ ಯೋಗವಿಜ್ಞಾನ ಕೇಂದ್ರದ ಸದಸ್ಯರು ‘ಹಸಿರು ತೋರಣ’ ಎಂಬ ಕಪ್ಪತ್ತಗುಡ್ಡದ ಮಹತ್ವ ಸಾರುವ ಪರಿಸರ ರೂಪಕವನ್ನು  ಪ್ರದರ್ಶಿಸಿದರು. ನಿರ್ಮಲಾ ಪಾಟೀಲ, ಸುನಂದಾ ಜ್ಞಾನೋ ಪಂತರ, ಗೀತಾ ಹೂಗಾರ, ಶಾಂತಾ ಮುಂದಲಮನಿ, ಸುರೇಖಾ ಪಿಳ್ಳಿ, ಶೈಲಜಾ ಕೊಡೆಕಲ್, ಸುಲೋಚನಾ ಐಹೊಳಿ, ಅಕ್ಕಮಹಾದೇವಿ ಚೆಟ್ಟಿ, ಗಿರಿಜಾ ವಾಲಿ, ಸಂಧ್ಯಾ ಕೋಟಿ ಇದ್ದರು.

ವಿವಿಧ ಪರಿಕರ ಉಪಯೋಗಿಸಿ ಕೊಂಡು ಸುಲಭವಾಗಿ ಮಾಡುವ ಯೋಗ ಚಟುವಟಿಕೆಗಳನ್ನು ಸುಮಂಗಲಾ ಹದ್ಲಿ, ಅಜಿತಾ ಪ್ರಸಾದ, ಜ್ಯೋತಿ ಜ್ಞಾನೋ ಪಂತರ, ಸುನಿತಾ ಹಾವೇರಿ, ಲಿಖಿತಾ ಅಣ್ಣಿಗೇರಿ, ವಿಜಯಲಕ್ಷ್ಮಿ ಮೇಕಳೆ ಅವರು ಯೋಗಾಚಾರ್ಯ ಕೆ.ಎಸ್.ಪಲ್ಲೇದ  ಅವರ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಿದರು.

ಶೈಲಾ ಕೊಡೆಕಲ್ ಧರ್ಮಗ್ರಂಥ ಪಠಣ, ಗಿರಿಜಾ ವಾಲಿ  ವಚನ ಚಿಂತನೆ ನೆರವೇರಿಸಿದರು. ದೀಪ್ತಿ ಪಾಠಕ ಅವ ರಿಂದ ವಚನ ಸಂಗೀತ ಗಾಯನ ನಡೆ ಯಿತು. ಪ್ರೇಮಾಂಜಲಿ ಎಸ್.ಕೆ. ಅವರು ಭಕ್ತಿಗೀತೆಗಳನ್ನು ಹಾಡಿದರು. ಅನ್ನ ಪೂರ್ಣಾ ವರವಿ, ಗೀತಾ ಗುಡೇನಕಟ್ಟಿ, ಕಮಲಾ ಚೆಟ್ಟಿ ಇದ್ದರು.

ನಿರ್ಮಲಾ ಪಾಟೀಲ ಸ್ವಾಗತಿಸಿದರು. ಶಿವಲೀಲಾ ಅಕ್ಕಿ ವರದಿ ವಾಚಿಸಿದರು. ಗಂಗಾಧರ ಹಿರೇಮಠ, ಮಲ್ಲಿಕಾರ್ಜುನ ಐಲಿ, ಶಕುಂತಲಾ ಸಿಂಧೂರ, ವಿವೇಕಾ ನಂದಗೌಡ ಪಾಟೀಲ, ಪ್ರಕಾಶ ಉಗಲಾ ಟದ, ಸಿದ್ಧಲಿಂಗಪ್ಪ ಲಕ್ಕುಂಡಿ, ಬಸವ ರಾಜ ಕಾಡಪ್ಪನವರ, ಉಮೇಶ ನಾಲ್ವಾಡ, ಶಿವನಗೌಡ ಗೌಡರ  ಕಾರ್ಯ ಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.