ADVERTISEMENT

ನರಗುಂದದಲ್ಲಿ ಮಹದಾಯಿ ಕಿಚ್ಚು; ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 7:12 IST
Last Updated 22 ಜುಲೈ 2017, 7:12 IST
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಹದಾಯಿ ಧರಣಿ ವೇದಿಕೆಯಲ್ಲಿ ಮಾತನಾಡಿದರು. ಉಪವಾಸ ನಿರತರು ಇದ್ದಾರೆ
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಹದಾಯಿ ಧರಣಿ ವೇದಿಕೆಯಲ್ಲಿ ಮಾತನಾಡಿದರು. ಉಪವಾಸ ನಿರತರು ಇದ್ದಾರೆ   

ನರಗುಂದ: ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ, ಇಲ್ಲಿನ ಧರಣಿ ವೇದಿಕೆಯಲ್ಲಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಶುಕ್ರವಾರ ರೈತ ಸಂಘಟನೆಗಳು, ವಿದ್ಯಾರ್ಥಿಗಳು, ಮಹಿಳೆಯರಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ರೈತ ಹುತಾತ್ಮ ದಿನಾಚರಣೆಯನ್ನು ಕರಾಳ ದಿನವಾಗಿ ಆಚರಿಸಿದ ಪ್ರತಿಭಟನಾಕಾರರು, ಟಯರ್‌ಗೆ ಬೆಂಕಿ ಹಚ್ಚಿ, ಐದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದರು. ಮಹದಾಯಿ– ಮಲಪ್ರಭೆ ಒಕ್ಕೂಟದ ಸದಸ್ಯರಿಂದ ಉರುಳು ಸೇವೆ ನಡೆಯಿತು. ಮಹದಾಯಿ– ಮಲಪ್ರಪಭಾ  ಒಕ್ಕೂಟದ ಸದಸ್ಯರು ಹಾಗೂ ಯಾವಗಲ್‌ ಗ್ರಾಮದ ರೈತರು ಪುರಸಭೆಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಕೈಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿವಾಜಿ ವೃತ್ತದ ಬಳಿ ಬೀಡು ಬಿಟ್ಟರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ ಅಡ್ಡಗಟ್ಟಿದರು: ಮಧ್ಯಾಹ್ನದ ಹೊತ್ತಿಗೆ ಚಾಲಕನೊಬ್ಬ ಬಸ್‌ ಚಲಾಯಿಸಲು ಮುಂದಾ ದಾಗ, ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೆಲವು ಪ್ರತಿಭಟನಾಕಾರರು ಅಡ್ಡಗಟ್ಟಿ ದರು. ಪೊಲೀಸರ ವಾಹನಗಳು ಸಂಚಾರಕ್ಕೆ ಮುಂದಾದಾಗಲೂ ತಡೆಯಲು ಮುಂದಾದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ, ಪೊಲೀಸರು– ಪ್ರತಿಭಟನಾ ಕಾರರ ನಡುವೆ ವಾಗ್ವಾದ  ನಡೆಯಿತು. ನಂತರ ರೈತ ಮುಖಂಡರ ಮಧ್ಯ ಪ್ರವೇಶದಿಂದ ಮತ್ಎ ವಾತಾವರಣ ಸಹಜ ಸ್ಥಿತಿಗೆ ಬಂತು. 

ADVERTISEMENT

ಬೆಳಿಗ್ಗೆ 11 ಗಂಟೆಯವರೆಗೆ ಬಸ್‌ ಸಂಚಾರ ಇತ್ತು.  ನಂತರ ರೈತರ ಪ್ರತಿಭಟನೆ ಆರಂಭವಾಗು ತ್ತಲೇ ಸ್ಥಗಿತಗೊಂಡಿತು. ಖಾಸಗಿ ವಾಹನಗಳ ಸಂಚಾರವೂ ಇರಲಿಲ್ಲ.
ವಿಠ್ಠಲ ಜಾಧವ, ವಿನೋದ ಒಡ್ಡರ, ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ ಇದ್ದರು.

ಎಬಿವಿಪಿ ಸದಸ್ಯರು ನಂದೀಶ ಮಠದ ನೇತೃತ್ವದಲ್ಲಿ ಬೈಕ್‌ ರಾಲಿಯೊಂದಿಗೆ ಪ್ರತಿಭಟನೆ ಕೈಗೊಂಡು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಸಿದ್ದು ಹೂಗಾರ, ಅಕ್ಷಯ ಜೋಶಿ, ಗೌರೀಶ ಪಾಟೀಲ, ಮುತ್ತು ಹೂಗಾರ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ  ಹನಮಂತ ಅಬ್ಬಿಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರೈತ ವೀರಗಲ್ಲಿಗೆ ಮಾಲಾ ರ್ಪಣೆ ಸಲ್ಲಿಸಿದರು. ನಬೀಸಾಬ್ ಕಿಲ್ಲೆದಾರ, ನಿಂಗನಗೌಡ ಮಾಲಿ ಪಾಟೀಲ, ಹನಮಂತ ಪೂಜಾರಿ, ಬಸವರಾಜ ಮೇಟಿ ಇದ್ದರು.

ಸೊಬರದಮಠ ಅವರಿಗೆ ಬೆಂಬಲ ಸೂಚಿಸಿ ಶುಕ್ರವಾರದಿಂದ ಹನಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಟ್ಟಿ, ವೀರಣ್ಣ ಸೊಪ್ಪಿನ, ಯಲ್ಲಪ್ಪ ಗುಡದೇರಿ, ಸುಭಾಸ  ಗಿರಿಯಣ್ಣವರ, ಯೋಗೇಶ ಕುರಿ, ಚನ್ನಬಸಪ್ಪ ಹುಲಜೋಗಿ, ನಾಗರತ್ನ ಸವಳಭಾವಿ, ಅನಸವ್ವ ಶಿಂಧೆ, ಚನ್ನವ್ವ ಕರಜಗಿ ಉಪವಾಸ ಕೈಗೊಂಡರು.

ಸಿ.ಎಂ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿ: ಧರಣಿ ವೇದಿಕೆಗೆ ಭೇಟಿ ನೀಡಿದ ಕೂಡಲ ಸಂಗಮದ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಸೊಬರದಮಠ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

‘ಸಿ.ಎಂ ಸಿದ್ದರಾಮಯ್ಯ ಅವರು ಕೂಡಲೇ ಸರ್ವ ಪಕ್ಷದ ಸಭೆ ಕರೆಯಬೇಕು.  ರಾಜ್ಯದ 28 ಸಂಸದರಿಗೆ ಆಹ್ವಾನ ನೀಡಬೇಕು. ಜತೆಗೆ ದೆಹ ಲಿಗೆ ನಿಯೋಗ ಕರೆದುಕೊಂಡು ಹೋಗಿ, ಮಧ್ಯ ಸ್ಥಿಕೆ ವಹಿಸುವಂತೆ ಪ್ರಧಾನಿ ಅವರ ಮೇಲೆ ಒತ್ತಡ ಹೇರಬೇಕು’ ಎಂದರು.

ಮಧು ಬಂಗಾರಪ್ಪ ಭೇಟಿ; ಸಿ.ಎಂ ಜತೆ ಮಾತು ಕತೆ: ಜೆಡಿಎಸ್‌ನ ಮಧು ಬಂಗಾರಪ್ಪ ಅವರು ಧರಣಿ ವೇದಿಕೆಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ, ವೇದಿಕೆಯಿಂದಲೇ ಸಿ.ಎಂ ಸಿದ್ದರಾಮಯ್ಯನವರ ಜತೆಗೆ ದೂರವಾಣಿ ಮೂಲಕ ಮಾತನಾಡಿದರು.

ಸೊಬರದಮಠ ಅವರ ಜತೆ ಮಾತನಾಡಿದ ಸಿ.ಎಂ  ಉಪವಾಸ ಕೈ ಬಿಡುವಂತೆ ಮತ್ತೆ ಮನವಿ ಮಾಡಿದರು. ಆಗ ಸೊಬರದಮಠ ಅವರು ‘ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿ ಸ್ಪಷ್ಟ ನಿರ್ಧಾರ ಹೊರಬೀಳುವವರೆಗೂ ಉಪ ವಾಸ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಧು ಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.