ADVERTISEMENT

‘ಪರ್ಲ್ಸ್‌’ ಪ್ರತಿನಿಧಿಗಳಿಂದ ಪ್ರತಿಭಟನೆ

ಗ್ರಾಹಕರ ಹಣ ಹಿಂತಿರುಗಿಸಿ, ಪ್ರತಿನಿಧಿಗಳನ್ನು ರಕ್ಷಿಸುವಂತೆ ತಹಸೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:09 IST
Last Updated 2 ಮಾರ್ಚ್ 2017, 5:09 IST

ನರಗುಂದ: ‘ಪರ್ಲ್ಸ್‌’ ಅಗ್ರೊಟೆಕ್‌ ಕಾರ್ಪೋರೇಷನ್‌ ಲಿಮಿಟೆಡ್‌ ಗ್ರಾಹಕರ ಮತ್ತು ಪ್ರತಿನಿಧಿಗಳ ಹಿತರಕ್ಷಣಾ ಸಮಿತಿ ಸದಸ್ಯರು  ಗ್ರಾಹಕರ ಹಣ ಹಿಂತಿರುಗಿಸಿ, ಪ್ರತಿನಿಧಿಗಳ ರಕ್ಷಣೆ ಮಾಡುವಂತೆ ಆಗ್ರ ಹಿಸಿ ಮಂಗಳವಾರ ಕಂಪೆನಿ ವಿರುದ್ಧ ಪ್ರತಿ ಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪುರಸಭೆಯಿಂದ ಹೊರಟ ಬೃಹತ್‌ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಸಂಚರಿಸಿ ಪಿಎ ಸಿಎಲ್‌ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕ ಹಾಗೂ ಹಿತರಕ್ಷಣಾ ಸಮಿತಿ ಸದಸ್ಯರು ಸಾಮಾನ್ಯ ವರ್ಗದ ಗ್ರಾಹಕರು ಕೂಲಿ  ಮಾಡಿ ಉಳಿತಾಯದ ಹಣವನ್ನು ಪರ್ಲ್ಸ್‌ ಕಂಪೆನಿಯಲ್ಲಿ ತೊಡಗಿಸಿದ್ದಾರೆ. ಆದರೆ ಅವಧಿ ಮುಗಿದರೂ ಕಂಪೆನಿ ಯಿಂದ ಹಣ ಮರಳಿ ಬಂದಿಲ್ಲ. ಪ್ರತಿನಿಧಿ ಗಳು ನೂರಾರು ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿದ್ದಾರೆ.

ಅವರು ಕಂಪೆನಿ ಧೋರಣೆಯಿಂದ ನಿತ್ಯ ಸಂಚರಿಸದಂತಾಗಿದೆ. ಜತೆಗೆ ಹಣ ನೀಡದಿದ್ದರೆ ಗ್ರಾಹಕರು ಪ್ರತಿನಿಧಿಗಳ ವಿರುದ್ಧ ಪೊಲೀಸರಗೆ ದೂರು ನೀಡುವುದಾಗಿ ಬೆದರಿಕೆ ಹಾಕು ತ್ತಿದ್ದು, ಇದರಿಂದ ಗ್ರಾಹಕರು, ಪ್ರತಿನಿಧಿ ಗಳ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕಂಪೆನಿಯಿಂದ ಹಣ ಮರಳಿ ಸುವಂತೆ ಮಾಡಲು ಪ್ರಧಾನಮಂತ್ರಿ, ಲೋಧಾ ಸಮಿತಿಯ ಸದಸ್ಯರು ಹಾಗೂ ರಾಜ್ಯದ ಮುಖ್ಯಮಂತ್ರಿ ಕಂಪೆನಿ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್‌.ಕರಾಂಡೆ, ವಿ.ಬಿ.ಗುಡ್ಡ ನ್ನವರ, ರಮೇಶ ಬಾಳಿಕಾಯಿ ಪಿ.ಬಿ. ಶ್ರೀಹರಿ, ಎನ್‌.ವಿ.ಚಿಂಚೋಳಿ, ಪಿ.ವಿ. ಡಂಬಳ, ಎಸ್‌.ವಿ.ಚಿಕ್ಕನಗೌಡ್ರ, ನಾಗರತ್ನ ಹಿರೇಮಠ, ಎಸ್‌.ವಿ.ಚಿಕ್ಕಮಠ, ವೀರಪ್ಪ ಚಾಕಲಬ್ಬಿ ಚನ್ನವ್ವ ಕರಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.