ADVERTISEMENT

‘ಪಾತಾಳ ಗಂಗೆ– ಅವೈಜ್ಞಾನಿಕ ಯೋಜನೆ’

​ಪ್ರಜಾವಾಣಿ ವಾರ್ತೆ
Published 21 ಮೇ 2017, 7:08 IST
Last Updated 21 ಮೇ 2017, 7:08 IST

ಮುಂಡರಗಿ: ಭೂಮಿಯ ಆಳದಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಿ ನೀರು ತರುಲು ಉದ್ದೇಶಿಸಿರುವ ರಾಜ್ಯ ಸರ್ಕಾ ರದ  ‘ಪಾತಾಳ ಗಂಗೆ’ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ತಕ್ಷಣ ಅದನ್ನು ಕೈಬಿಡಬೇಕು ಎಂದು ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಹಲವಾಗಲಿ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾತಾಳ ಗಂಗೆ ಯೋಜನೆಯ ಮೂಲಕ ರಾಜ್ಯ ಸರ್ಕಾರ ನಿಸರ್ಗದ ವಿರುದ್ಧ ಈಜಲು ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಭೂಮಿಯ 300 ಅಡಿ ಆಳದವರೆಗೆ ಕೊಳವೆ ಬಾವಿ ಕೊರೆಯಿಸಿದರೆ ಉಪ್ಪು ಹಾಗೂ ಪ್ಲೋರೊಶಿಸ್‌ ಅಂಶವಿರುವ ನೀರು ದೊರೆಯುತ್ತದೆ. ಪಾತಾಳ ಗಂಗೆ ಯೋಜನೆಯ ಅಡಿಯಲ್ಲಿ ಸರ್ಕಾರ ಸಾವಿ ರಾರು ಅಡಿ ಆಳದವರೆಗೆ ಭೂಮಿಯನ್ನು ಕೊರೆದು ನೀರು ತರಲು ಉದ್ದೇಶಿಸಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಭೂಮಿಯ ಅತೀ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸುವುದರಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತದೆ ಎಂದು ಭೂವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಭೂಮಿಯ ಆಳ ದಲ್ಲಿರುವ ನೀರನ್ನು ಹೊರಗೆ ತಗೆಯು ವುದರಿಂದ ಭೂಕಂಪ, ಜ್ವಾಲಾಮುಖಿ ಹಾಗೂ ಮತ್ತಿತರ ಪ್ರಕೃತಿ ವಿಕೋಪಗಳು ಘಟಿಸಲಿವೆ ಎಂದು ಸ್ಪಷ್ಟಪಡಿಸುತ್ತಾರೆ. ವಿಜ್ಞಾನಿಗಳ ಎಚ್ಚರಿಕೆಯನ್ನು ಕಡೆಗಣಿಸಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರು ಹಟಕ್ಕೆ ಬಿದ್ದವರಂತೆ ಪಾತಳ ಗಂಗೆ ಯೋಜನೆ ಅನುಷ್ಠಾನ ಗೊಳಿಸಲು ಮುಂದಾಗಿರುವ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.

ನಿವೃತ್ತ ತಹಶೀಲ್ದಾರ್ ಟಿ.ಎಲ್‌. ನಾಯಕ್ ಮಾತನಾಡಿ, ಮೋಡ ಬಿತ್ತನೆ ಯಂತಹ ಕಾರ್ಯಕ್ರಮಗಳು ನಿರುಪ ಯುಕ್ತ ಎಂದು ಈಗಾಗಲೆ ಸಾಬೀತಾಗಿದೆ. ಈಗ ಎಚ್‌.ಕೆ.ಪಾಟೀಲರು ಪಾತಳ ಗಂಗೆ ಯಂತಹ ಪರಿಸರ– ಜನ ವಿರೋಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿ ಸುವ ಮೂಲಕ ಪರಿಸರ ನಾಶ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಭೂಮಿಯ ಆಳ ಬಗೆದು ಪಾತಾಳ ದಲ್ಲಿ ಇರುವ ನೀರನ್ನು ಹೊರತಗೆಯಲು ಮುಂದಾದರೆ ಸಾರ್ವಜನಿಕರು ಒಂದಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ಶಿವನ ಗೌಡ ಗೌಡ್ರ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಶಿರೋಳ ಕೆರೆ ಕಾಲುವೆ ಅಭಿವೃದ್ಧಿಗೆ ₹ 80 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿ ಒಂದು ವರ್ಷ ಕಳೆದರೂ ಇದು ವರೆಗೂ ಕೆರೆ ಕಾಲುವೆಗಳು ಅಭಿವೃದ್ಧಿ ಆಗಿಲ್ಲ ಎಂದು ತಿಳಿಸಿದರು.

ರೈತ ಮುಖಂಡರಾದ ಹನುಮಪ್ಪ ಲಕ್ಕುಂಡಿ, ಪರುಶುರಾಮ ಚೌಟಗಿ,  ಪರ ಸಪ್ಪ ತ್ಯಾಪಿ, ರಮೇಶ ಬೀಡನಾಳ, ಕಾಶಪ್ಪ ಮಕ್ತುಂಪುರ, ಲಕ್ಷ್ಮಣ ತಳವಾರ, ಹನು ಮಂತ ಪೂಜಾರ, ಮರಿಯಪ್ಪ ವಾಲಿ ಕಾರ, ರಾಜು, ಶರತ್ ಮೇವುಂಡಿ, ಮಂಜುನಾಥ ಬೆಣ್ಣಿಹಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.