ADVERTISEMENT

ರೈತ ಕುಟುಂಬಗಳಿಗೆ ನೆರವು ನೀಡಿ

ಮಹಾದಾಯಿ ಧರಣಿ: ಮೃತ ರೈತ ಕಲ್ಲಪ್ಪನಿಗೆ ಶ್ರದ್ಧಾಂಜಲಿ, ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:13 IST
Last Updated 2 ಮಾರ್ಚ್ 2017, 5:13 IST

ನರಗುಂದ: ರಾಜ್ಯದಲ್ಲಿ ರೈತರು ತಮ್ಮ ಜೀವನ ಸಾಗಿಸಲು ನಿತ್ಯ ಹೋರಾಟ ಮಾಡಬೇಕಿದೆ. ಜತೆಗೆ ಎಲ್ಲರ ಬೇಡಿಕೆ ಗಳಿಗಾಗಿ ನಡೆದ ಹೋರಾಟದಲ್ಲೂ ಭಾಗವಹಿಸುತ್ತಾರೆ. ನೀರಾವರಿ ಯೋಜನೆ ಗಳಿಗಂತೂ ತಮ್ಮ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಇದರಿಂದ ನೂರಾರು ರೈತರು ಸಾವಿಗೀಡಾಗಿದ್ದಾರೆ.

ಆತ್ಮಹತ್ಯೆಗೆ ಶರಣರಾಗುತ್ತಿದ್ದಾರೆ. ಇದರಿಂದ ಇವರ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಆದ್ದರಿಂದ ಎರಡು ಸರ್ಕಾರಗಳು ರೈತರ ನೆರವಿಗೆ  ಬರಬೇಕೆಂದು ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ  ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 595ನೇ ದಿನ ಬುಧವಾರ ಅವರು ಮಾತನಾಡಿದರು. ರೈತರೇ ರಾಷ್ಟ್ರದ ಬೆನ್ನೆಲುಬು ಕೇವಲ ಮಾತಾಗಿದೆ. ಅವರ ಎಲುವು ಮುರಿ ಯಲು ರಾಜಕಾರಣಿಗಳು ಸಿದ್ಧರಾಗಿ ದ್ದಾರೆ.  ಅವರ ಸಾಲವನ್ನು ಮನ್ನಾ ಮಾಡುತ್ತಿಲ್ಲ. 

ಆರ್‌ಟಿಇ  ಅಡಿ ರೈತರ ಮಕ್ಕಳಿಗೆ ಆದ್ಯತೆ ನೀಡಿರುವುದು ಸ್ವಾಗತ. ಆದರೆ ಅವರ ಉನ್ನತ ವ್ಯಾಸಂಗಕ್ಕೆ ಉಚಿತ ಅವಕಾಶ ಕಲ್ಪಿಸಬೇಕು. ಸರ್ಕಾರಿ ನೌಕರರು  ಸೇವೆಯಲ್ಲಿದ್ದಾಗ ನಿಧನರಾ ದಾಗ ಅವರ  ಕುಟುಂಬಕ್ಕೆ ನೌಕರಿ ಕೊಡುತ್ತಾರೆ.

ರೈತ ಸತ್ತರೆ ಯಾರು ಏನು ಕೊಡುತ್ತಾರೆ? ಎಂದು ಆಕ್ರೋಶ ವ್ಯಕ್ತಪ ಡಿಸಿದರು. ಕೂಡಲೇ ರಾಜ್ಯ ಸರ್ಕಾರ ಇಂಥಹ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಿ ಸಹಾಯಹಸ್ತ ಚಾಚಬೇಕೆಂದು ಒತ್ತಾಯಿಸಿದರು.

ಚಂದ್ರಗೌಡ ಪಾಟೀಲ ಮಾತನಾಡಿ, ಅಳಗವಾಡಿ ರೈತರ ಕಲ್ಲಪ್ಪ ಸುಳ್ಳದರ ಮಹಾದಾಯಿಗಾಗಿ ಜೈಲು ವಾಸ ಅನು ಭವಿಸಿದ್ದರು. ಅವರ ನಿಧನದಿಂದ ಒಬ್ಬ ದಿಟ್ಟ ಹೋರಾಟಗಾರರನ್ನು ಕಳೆದು ಕೊಂಡಂತಾಗಿದೆ. ಇವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು ಎಂದರು. ರಾಜ್ಯ ಸರಕಾರ ರೈತರ ಕೃಷಿ ಸಾಲವನ್ನು ಮನ್ನಾ  ಮಾಡಬೇಕು. 

ಬರಗಾಲ ನಿರ್ವ ಹಿಸುವಲ್ಲಿ ಸರ್ಕಾರ ವಿಫಲವಾಗಿವೆ. ಇದಕ್ಕಾಗಿಯೇ ಹೋರಾಟ ಮಾಡುವ ದು:ಸ್ಥಿತಿ ಎದುರಾಗಿದೆ. ಜಾನುವಾರು ಗಳಿಗೆ ಮೇವಿಲ್ಲ. ಮಹಾದಾಯಿ ಅನು ಷ್ಠಾನದಲ್ಲಿ ಪ್ರತಿ ಹಂತದಲ್ಲೂ ರಾಜ ಕಾರಣಿಗಳು ನಮ್ಮನ್ನು ಸತಾಯಿಸುತ್ತಲೇ ಬಂದಿದ್ದಾರೆ. ಇದು ಸಲ್ಲದು ಎಂದರು.

ಶ್ರೀಶೈಲ ಮೇಟಿ ಮಾತನಾಡಿ,  ಮೃತ ರೈತರ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ಮಹಾದಾಯಿ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರ ನೀಡಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಮೃತ್ಯುಂಜಯ ಹಿರೇ ಮಠ, ಎಸ್‌.ಕೆ.ಗಿರಿಯಣ್ಣವರ, ವೆಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ಟರ, ಭೀಮಪ್ಪ ದಿವಟಗಿ, ಎಲ್‌.ಬಿ. ಮುನೇ ನಕೊಪ್ಪ, ಎಸ್.ಬಿ.ಕೊಣ್ಣೂರು, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು ವಿರೂ ಪಾಕ್ಷ ಪಾರಣ್ಣವರ, ಚನ್ನಬಸು ಹುಲ ಜೋಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT