ADVERTISEMENT

ವರುಣನ ಕೃಪೆಗಾಗಿ ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 9:53 IST
Last Updated 30 ಜೂನ್ 2015, 9:53 IST

ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದಲ್ಲಿ ವರುಣನ ಕೃಪೆಗಾಗಿ ಸೋಮವಾರ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.

ಗ್ರಾಮದ ಎಲ್ಲರೂ ಸೇರಿ ಎರಡು ದಿನ ಮುಂಚೆ ಮನೆ–ಮನೆಗೆ ತೆರಳಿ ಜೋಳ ಪಡೆದು ಬಂದಿದ್ದರು. ಅವನ್ನು ಬಿಸಿ ಜೋಳದ ಸಂಗಟಿ ಸಾರು ಮಾಡಿ ಸಂಜೆ ಅನ್ನಸಂತರ್ಪಣೆ ಮಾಡಿದರು.

ರೈತರು ಬಿತ್ತನೆ ಮಾಡಲು ಬೀಜ ಗೊಬ್ಬರ ಶೇಖರಣೆ ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಇನ್ನೂ ಕೇಲ ರೈತರು ಆಗಿದ್ದಾಗಲಿ ಮುಂದೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ ಇಲ್ಲಯ­ವರೆಗೂ ಅವಶ್ಯಕ ಮಳೆಯಾಗಿಲ್ಲ. ಇದರಿಂದ ರೈತರು ಕಂಗಾಲಾಗಿ­ದ್ದಾರೆ. ಹೀಗಾಗು ದೇವರ ಮೊರೆ ಹೋಗಿದ್ದೇವೆ ಎಂದು ಗ್ರಾಮದ ಪ್ರಗತಿಪರ ರೈತ ಹನಮಂತ ಹಿತ್ತಲಮನಿ ಹೇಳಿದರು.  ಈರಪ್ಪ ಕಂಬಾರ, ಹಸನಪ್ಪ ಮುಜಾವರ, ಭೀಮಪ್ಪ ಹಿತ್ತಲಮನಿ, ಆನಂದಪ್ಪ ಗೂಳಿ, ಬಸಪ್ಪ ವ್ಯಾಪಾರಿ, ಬನ್ನೆಪ್ಪ ಗೂಳಿ, ಪರಸಪ್ಪ ತಳವಾರ, ರವಿ ಹೂಗಾರ, ಕಳಕಪ್ಪ ಗೂಳಿ, ಶರಣಪ್ಪ ಮಾರನಬಸರಿ, ಬಸಪ್ಪ ಬಿಲ್ಲಿನ, ಕಳಕಪ್ಪ ಕಳ್ಳಿಗುಡ್ಡ, ಪರಸಪ್ಪ ಹಿತ್ತಲಮನಿ, ಶರಣಪ್ಪ ಉಪ್ಪಲದಿನ್ನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.