ADVERTISEMENT

ಸಂಧಾನ ವಿಫಲ: ಧರಣಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:22 IST
Last Updated 25 ಏಪ್ರಿಲ್ 2017, 5:22 IST

ಗಜೇಂದ್ರಗಡ: ಸಮರ್ಪಕ ಮರಳು ಪೂರೈಕೆಗೆ ಒತ್ತಾಯಿಸಿ ಇಲ್ಲಿಯ ಪುರಸಭೆ ಆವರಣದಲ್ಲಿ ಭಾನುವಾರದಿಂದ ಆಮ ರಣ ಉಪವಾಸ ಆರಂಭಿಸಲಾಗಿದ್ದು, ಹೋರಾಟಗಾರರೊಡನೆ ಅಧಿಕಾರಿಗಳು ಸೋಮವಾರ ನಡೆಸಿದ ಸಂಧಾನ ಸಭೆ ವಿಫಲಗೊಂಡಿತು. ಹೀಗಾಗಿ ಉಪವಾಸ ಮುಂದುವರಿದಿದೆ. ಗದಗ ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ ಭೇಟಿ ನೀಡಿ, ‘ಸಮಸ್ಯೆಯನ್ನು ಮೂರು ದಿನಗಳಲ್ಲಿ ಬಗೆಹರಿಸಲಾಗುವುದು. ಆದ್ದರಿಂದ ಉಪವಾಸ ಸತ್ಯಾಗ್ರಹ ಕೈಬಿಡಬೇಕು’ ಎಂದು ಮನವಿ ಮಾಡಿಕೊಂಡರು.

ಇದಕ್ಕೊಪ್ಪದ ಸತ್ಯಾಗ್ರಹಿಗಳು ವಾಗ್ವಾದದಲ್ಲಿ ತೊಡಗಿದರು. ಕಳೆದ ಆರು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿ ದ್ದರೂ ಕಣ್ತೆರೆಯದ ಅಧಿಕಾರಿಗಳು, ಹೋರಾಟ ಮಾಡಿದಾಗ ಮಾತ್ರ ಇತ್ತ ಹಾಯುತ್ತಾರೆ. ಬಂಡವಾಳಶಾಹಿಗಳಿಂದ ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟದೆ, ಅಮಾಯಕ ಕಾರ್ಮಿಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿತ್ಯವೂ ಸಾಕಷ್ಟು ಮರಳು ಮಾಯ ವಾಗುತ್ತಿದೆ. ಮರಳನ್ನು ಮಾಫಿಯಾ ಕೈಗೆ ನೀಡಿ, ಅಲ್ಲಿಂದ ತರುವ ಹುನ್ನಾರ ನಡೆಸ ಲಾಗುತ್ತಿದೆ. ಇದರ ಹಿಂದೆ ಅನೇಕ ಕಾಣದ ಕೈಗಳಿವೆ. ಅನೇಕ ತಾಲ್ಲೂಕು, ಜಿಲ್ಲಾ ಸಭೆಗಳು ನಡೆದಾಗ ಕಾರ್ಮಿ ಕರನ್ನು ಕರೆಯುವುದಿಲ್ಲ. ಕಾರ್ಮಿಕರು ಉಪವಾಸ ಕುಳಿತರೆ, ಅದು ತಮಗೆ ಏನೂ ಸಂಬಂಧವೇ ಇಲ್ಲವೆನ್ನುವಂತೆ ಜಿಲ್ಲಾಧಿಕಾರಿ ವರ್ತಿಸುತ್ತಿದ್ದಾರೆ. ಅವರಿಗೆ ಇಲ್ಲಿ ಬಂದು ಸಮಸ್ಯೆ ಆಲಿಸಲು ಹಿಂಜ ರಿಕೆ ಏಕೆ?  ಇಲ್ಲಿ ಏನಾದರೂ ಅನಾ ಹುತವಾದರೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ  ಜವಾಬ್ದಾರರಾಗಬೇಕಾ ಗುತ್ತದೆ’ ಎಂದು ಸತ್ಯಾಗ್ರಹಿಗಳು ಎಚ್ಚರಿಸಿದರು.

ADVERTISEMENT

ಸಮಸ್ಯೆ ಬಗೆಹರಿಸಲು ಮೂರು ದಿನ ಅವಕಾಶ ಕೊಡುವಂತೆ ಉಪವಿಭಾಗಾಧಿಕಾರಿ ಕೇಳಿದರೂ ಪಟ್ಟು ಬಿಡದ  ಧರಣಿ ನಿರತರು ತಮಗೆ ಮೂರು ದಿನದ ಪಾಸ್ ನೀಡುವಂತೆ ಒತ್ತಾಯಿಸಿದರು.‘ಭೂಗರ್ಭ ಇಲಾಖೆಯ ಅಧಿಕಾರಿಗಳು ಈಗ ಮುಖ ತೋರಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಸಮಸ್ಯೆ ಬಗೆಹರಿಯುವತನಕ  ನಾವು ಉಪವಾಸ ಮಾಡುತ್ತೇವೆ’ ಎಂದು ಸತ್ಯಾ ಗ್ರಹಿಗಳು ತಮ್ಮ ಪಟ್ಟನ್ನು ಸಡಲಿಸದೇ ಉಪವಾಸ ಮುಂದುವರಿಸಿದರು.  ಆಗ ಮೇಲಧಿಕಾರಿಗಳ ಜೊತೆ ಚರ್ಚಿಸುವು ದಾಗಿ ಹೇಳಿದ ಅಧಿಕಾರಿಗಳು ವಾಪಸ್‌ ಹೋದರು.

ಮಾರುತಿ ಚಿಟಗಿ, ರಫೀಕ್ ಯಲ ಬುಣಸಿ, ರೇಣಪ್ಪ ಇಂಗಳೆ, ಯಲ್ಲಪ್ಪ ಕಲ್ಗುಡಿ, ಗಂಗಾಧರ ಅಂಗಡಿ, ಮಹ ಮ್ಮದ ನಾಲಬಂದ್‌, ಷಣ್ಮುಖಸಾ ರಂಗ್ರೇಜಿ, ಬಾಲು ರಾಠೋಡ, ಯಮ ನೂರಪ್ಪ ಲಕ್ಕಲಕಟ್ಟಿ ಮುಂತಾದ 20 ಜನರು ಸೋಮವಾರ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ರಾಜೀನಾಮೆಗೆ ಆಗ್ರಹ: ಸಮರ್ಪಕ ಮರಳು ಪೂರೈಕೆ ವಿಷಯದಲ್ಲಿ ಶಾಸಕ ಜಿ.ಎಸ್. ಪಾಟೀಲ ವಿಫಲರಾಗಿದ್ದು,  ಅವರು ರಾಜೀನಾಮೆ ನೀಡಬೇಕು ಎಂದು ರೋಣ ಪುರಸಭೆ ಸದಸ್ಯ ಎಂ.ಎಸ್. ಹಡಪದ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.