ADVERTISEMENT

ಸಾಲ ಮನ್ನಾ ಮಾಡಲು ಆಗ್ರಹ

ರೋಣದಲ್ಲಿ ರೈತರ ಪ್ರತಿಭಟನೆ: ಚಕ್ಕಡಿ, ಎತ್ತುಗಳೊಂದಿಗೆ ಮೆರವಣಿಗೆ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:27 IST
Last Updated 24 ಮಾರ್ಚ್ 2017, 6:27 IST
ರೋಣ ಪಟ್ಟಣದ ಮುಲ್ಲಾನಭಾವಿ ವೃತ್ತದ ಬಳಿ ಮಾನವ ಸರಪಳಿ ರಚಿಸಿದ ರೈತರು ಪ್ರತಿಭಟನೆ ನಡೆಸಿದರು
ರೋಣ ಪಟ್ಟಣದ ಮುಲ್ಲಾನಭಾವಿ ವೃತ್ತದ ಬಳಿ ಮಾನವ ಸರಪಳಿ ರಚಿಸಿದ ರೈತರು ಪ್ರತಿಭಟನೆ ನಡೆಸಿದರು   

ರೋಣ: ಪಟ್ಟಣದಲ್ಲಿ ಗುರುವಾರ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಹಲವು ಗ್ರಾಮಗಳಿಂದ ಬಂದಿದ್ದ ರೈತರು ತಮ್ಮ ಜತೆ ನೂರಾರು ಎತ್ತು– ಚಕ್ಕಡಿಗಳನ್ನು ಕಟ್ಟಿಕೊಂಡು ಬಂದಿದ್ದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪ್ರಾರಂಭವಾದ ರೈತರ ಪ್ರತಿಭಟ ನೆಯು ಮುಲ್ಲಾನಬಾವಿ ಕ್ರಾಸ್ ಬಳಿ ತಲುಪಿದಾಗ ಮಾನವ ಸರಪಳಿ ರಚಿಸಿದ ರೈತರು ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ನಂತರ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಸಾಗಿದ ಪ್ರತಿಭಟನೆಯ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಿತು. ಕಚೇರಿಯ ಆವರಣ ದಲ್ಲಿ ರೈತರು ತಾವು ತೆಗೆದುಕೊಂಡು ಬಂದಿದ್ದ ಎತ್ತು ಚಕ್ಕಡಿಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು.

ನಂತರ ರಾಜ್ಯ ರೈತ ಸಂಘದ ಉಪಾ ಧ್ಯಕ್ಷ ಲೋಕನಗೌಡ ಗೌಡರ ಮಾತನಾಡಿ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನ ಹಲವು ಯೋಜನೆಗಳನ್ನು ನೀಡುವು ದಾಗಿ ರೈತರಿಗೆ ಭರವಸೆ ನೀಡುತ್ತಾರೆ. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯು ತ್ತಿದ್ದಂತೆ ತಮಗೆ ಮತ ನೀಡಿ ಗೆಲ್ಲಿಸಿದ ಜನಸಾಮಾನ್ಯರನ್ನು ಹಾಗೂ ರೈತರನ್ನು ಕಣ್ತೆರೆದು ಸಹ ನೋಡುವುದಿಲ್ಲ. ಕಳೆದ ಬಜೆಟ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲವನ್ನು ಮನ್ನ ಮಾಡಿಲ್ಲ.

ಮೂರು ನಾಲ್ಕು ವರ್ಷಗಳ ಬರಗಾಲದಿಂದಾಗಿ ರೈತ ಸಮುದಾಯ ದಿನವಿಡಿ ಕಣೀರಿನಲ್ಲಿ ಕೈತೋಳೆಯು ತ್ತಿದ್ದರೂ ಯಾವು ಸರ್ಕಾರವು ಸಹ ಕಣ್ಣೆತ್ತಿ ನೋಡುತ್ತಿಲ್ಲ ಸರ್ಕಾರಗಳಿಗೆ ರೈತರೆಂದರೆ ಯಾಕಿಷ್ಟು ನಿಷ್ಕಾಳಜಿ ? ರಾಜ್ಯ ಸರ್ಕಾರದ ಬಳಿ ಮಾಂಸದಂಗಡಿಗಳಿಗೆ ಸಹಾಯಧನ ನೀಡಲು ಹಣವಿರುತ್ತದೆ ಆದರೇ ರೈತರ ಸಾಲ ಮನ್ನ ಮಾಡಲು ಹಣವಿರುವುದಿ ಲ್ಲವೇ ? ಎಂದು ಪ್ರಶ್ನಿಸಿದರು.

ಮುಂಗಡ ಪತ್ರವನ್ನು ಮಂಡಿಸುವ ಪೂರ್ವದಲ್ಲಿ ಶೇ 50ರಷ್ಟು ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿ ರೈತರ ಮೂಗಿಗೆ ತುಪ್ಪವನ್ನು ಸವರಿ ಈಗ ರೈತರ ಸಾಲವನ್ನು ಮನ್ನಾ ಮಾಡದೆ ಅನ್ನದಾ ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ.

ಇನ್ನಾದರೂ ಸರ್ಕಾರಗಳು ರೈತರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಶಾಲೆ ಪ್ರಾರಂಭ ಮಾಡಬೇಕು. ಗ್ರಾಮದಲ್ಲಿ ಮೇವು ದೊರೆಯುವಂತೆ ಕ್ರಮವನ್ನು ಕ್ಯಗೊಳ್ಳಬೇಕು. ಅನ್ನದಾತರನ್ನು ಸಾಲ ಗಾರನಲ್ಲವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಅಣ್ಣಪ್ಪಗೌಡ ದೇಸಾಯಿ ಮಾತನಾಡಿ, ಸಾಲಮನ್ನಾ ಮಾತ್ರವಲ್ಲದೆ, ಜಾನುವಾರಗಳಿಗೆ ಗುಣ ಮಟ್ಟದ ಮೇವು ಪೂರೈಕೆ, ಜನ– ಜಾನು ವಾರಗಳಿಗೆ ಕುಡಿಯುವ ನೀರು ಪೂರೈಕೆ, ಅನಧಿಕೃತ ಸಾರಾಯಿ ಅಂಗಡಿಗಳ ತೆರವು, ಬೆಳೆಹಾನಿಗೆ ಪರಿಹಾರ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಚೌಡರಡ್ಡಿ ಮಾತನಾಡಿ ದರು. ಪ್ರತಿಭಟನೆಯಲ್ಲಿ ಹಲವು ರೈತ ಮುಖಂಡರು ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT