ADVERTISEMENT

ಫುಟ್‌ಪಾತ್‌ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ

ಟೈಲ್ಸ್‌ ಅಳವಡಿಕೆ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ

ಕೆ.ಎಸ್.ಸುನಿಲ್
Published 26 ಸೆಪ್ಟೆಂಬರ್ 2016, 9:07 IST
Last Updated 26 ಸೆಪ್ಟೆಂಬರ್ 2016, 9:07 IST
ಫುಟ್‌ಪಾತ್‌ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ
ಫುಟ್‌ಪಾತ್‌ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ   

ಹಾಸನ: ನಗರದ ಹಲವು ಕಡೆ ಫುಟ್‌ಪಾತ್‌ ಅತಿಕ್ರಮಣವಾಗಿರುವುದು ಪಾದಚಾರಿಗಳ ಸಂಚಾರಕ್ಕೆ ತೊಡಕು ಉಂಟಾಗಿದೆ. ಪಾದಚಾರಿ ಮಾರ್ಗದಲ್ಲಿ ಅಂಗಡಿ, ಹೋಟೆಲ್‌, ಗ್ಯಾರೇಜ್‌ಗಳ ಮಾಲೀಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸಿರುವುದು ನಗರಸಭೆಗೂ ತಲೆ ನೋವಾಗಿದೆ.

ನಗರದ ಬಿ.ಎಂ.ರಸ್ತೆಯ ಎರಡೂ ಬದಿ ಫುಟ್‌ಪಾತ್‌ ಮೇಲೆ ಕೆಲವರು ಪಾನಿಪುರಿ, ಕಬ್ಬಿನ ಹಾಲು ಹಾಗೂ ಇತರೆ ಸಣ್ಣಪುಟ್ಟ ವ್ಯಾಪಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಡೇರಿ ವೃತ್ತದಿಂದ ತಣ್ಣೀರುಹಳ್ಳದವರೆಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪುಟ್‌ಪಾತ್ ನಿರ್ಮಿಸ ಲಾಗಿದೆ. ಆದರೆ ಮಾರ್ಗದ ಉದ್ದಕ್ಕೂ  ತಲೆ ಎತ್ತಿರುವ ಶೋ ರೂಂ, ಗ್ಯಾರೇಜು ಗಳು, ಚಿನ್ನಾಭರಣ ಅಂಗಡಿ, ಹೋಟೆಲ್, ಬೀದಿ ಬದಿ ವ್ಯಾಪಾರಿಗಳು ಇದನ್ನು ಅತಿಕ್ರಮಣ ಮಾಡಿ ಕೊಂಡಿದ್ದಾರೆ.

ಸಂಚಾರ ದಟ್ಟಣೆ ತಡೆಯಲು ಪೊಲೀಸ್ ಇಲಾಖೆ ಶ್ರಮ ವಹಿಸುತ್ತಿದೆಯಾದರೂ ಪಾದಚಾರಿ ಮಾರ್ಗದಲ್ಲಿ ನಿಲ್ಲಿಸುವ ಬೈಕ್‌, ಕಾರುಗಳನ್ನು ತೆರವುಗೊಳಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಗಾಂಧಿ ಬಜಾರ್‌ನಿಂದ ತಣ್ಣೀರು ಹಳ್ಳದವರೆಗೆ ಅಧಿಕ ಸಂಖ್ಯೆಯಲ್ಲಿ ಗ್ಯಾರೇಜುಗಳಿವೆ.   ರಿಪೇರಿಗೆ ಬರುವ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಫುಟ್‌ಪಾತ್‌ ಮೇಲೆ ನಿಲ್ಲಿಸಲಾಗುತ್ತದೆ. ಹೀಗಾಗಿ, ಸಾರ್ವಜನಿಕರು ಈ ಮಾರ್ಗ ದಲ್ಲಿ ಓಡಾಡಲು ಪ್ರಯಾಸ ಪಡಬೇಕು.

ತಣ್ಣೀರು ಹಳ್ಳ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಅಂಗಡಿ ಹಾಗೂ ಹೋಟೆಲ್‌ಗಳು ಸಹ ಫುಟ್‌ಪಾತ್‌ ಅತಿಕ್ರಮಣ ಮಾಡಿಕೊಂಡಿವೆ. ಕೆಲ ಅಂಗಡಿ ಮಾಲೀಕರು ಫುಟ್‌ಪಾತ್‌ ಮೇಲೆ ಗುಣಮಟ್ಟದ ಟೈಲ್ಸ್‌ಗಳನ್ನು ಅಳವಡಿಸಿದ್ದಾರೆ. ಮತ್ತೆ ಕೆಲವರು ವಾಹನಗಳ ನಿಲುಗಡೆ ತಾಣ ಮಾಡಿಕೊಂಡಿದ್ದಾರೆ.   

‘ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿ ರುವವರ ವಿರುದ್ಧ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಜರುಗಿಸ ಬೇಕು. ಅದೇ ರೀತಿ ಪಾದ ಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫುಟ್‌ಪಾತ್‌ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ಆಕಾಶ್ ಆಗ್ರಹಿಸಿದ್ದಾರೆ.

ಗೊಂಬೆ ಮಾರಾಟ, ಗೃಹೋಪ ಯೋಗಿ ವಸ್ತುಗಳನ್ನು ಫುಟ್‌ಪಾತ್‌್ ಮೇಲೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ವಸ್ತು ಖರೀದಿಸಲು ನಿಂತಾಗ ಇತರರಿಗೆ ತೊಂದರೆ ತಪ್ಪಿದಲ್ಲ. ಪೃಥ್ವಿ ಚಿತ್ರ ಮಂದಿರ ಸಮೀಪದ ಪಾದಚಾರಿ ಮಾರ್ಗದಲ್ಲಿ ಕಬ್ಬಿನ ಹಾಲು, ಎಳೆನೀರು ಮಾರಾಟ ಮಾಡ ಲಾಗುತ್ತಿದೆ. ‘ಖಾಸಗಿ ಉದ್ದಿಮೆ ದಾರರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ.

ಫುಟ್‌ಪಾತ್‌ ಮೇಲೆ ವಾಹನ ನಿಲ್ಲಿಸುವುದು, ಸಣ್ಣ ಪುಟ್ಟ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಆಗಿದೆ. ಶೀಘ್ರದಲ್ಲಿಯೇ ಸಂಚಾರ ಪೊಲೀಸರ ಜತೆ ಚರ್ಚಿಸಿ ತೆರವು ಗೊಳಿಸಲು ಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.