ADVERTISEMENT

ಫೇಸ್‌ಬುಕ್‌ನಲ್ಲಿ ಹೆಸರು ದುರುಪಯೋಗ

ರಾಣೆಬೆನ್ನೂರು: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹಮದ್‌ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:07 IST
Last Updated 8 ಮೇ 2018, 13:07 IST

ರಾಣೆಬೆನ್ನೂರು: ‘ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ನನ್ನ ಹೆಸರಿನ ದುರುಪಯೋಗ ಮಾಡಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿ. ಕೋಳಿವಾಡರು ನನ್ನ ಆತ್ಮೀಯರು’ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹಮದ್‌ ಹೇಳಿದರು.

ಇಲ್ಲಿನ ಸಿದ್ಧೇಶ್ವರ ನಗರದಿಂದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಹೊರಟು ನಗರದ ಪ್ರಮುಖ ಬೀದಿಗಳಾದ ಖತೀಬ್‌ಗಲ್ಲಿ, ಸೈಕಲ್‌ಗಾರರಗಲ್ಲಿ, ತಳವಾರ ಓಣಿ, ಇಸ್ಲಾಂಪುರಗಲ್ಲಿ ಮೂಲಕ ಫಾರೆಸ್ಟ್ ಆಫೀಸಿನವರಗೆ ರೋಡ್‌ ಷೋ ನಡೆಸಿದರು. ನಂತರ ಪಾದಯಾತ್ರೆ ಮೂಲಕ ಮನೆ–ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಪರ ಚುನಾವಣೆ ಪ್ರಚಾರ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೋಳಿವಾಡರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ನನ್ನ ಹೆಸರನ್ನು ಬಳಸಿಕೊಂಡು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡರು ಅಪಾರ ಅನುಭವಿಗಳಾಗಿದ್ದು, ಇವರ ದೂರದೃಷ್ಟಿಯಿಂದಾಗಿ ರಾಣೆಬೆನ್ನೂರು ಕ್ಷೇತ್ರ ಅಪಾರ ಅಭಿವೃದ್ಧಿ ಹೊಂದಿದೆ. ಇವರಿಗೆ ಮತ್ತೊಮ್ಮೆ ಮತದಾರರು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಫೇಸ್ ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಕೆಪಿಜೆಪಿ ಪಕ್ಷದ ಕೆಲವು ಸದಸ್ಯರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಸತ್ಯಕ್ಕೆ ಅತ್ಯಂತ ದೂರವಾದುದು. ನನ್ನ ಹೆಸರಿನಲ್ಲಿ ಯಾವುದೇ ಫೇಸ್ ಬುಕ್ ಮತ್ತು ವಾಟ್ಸ್‌ಆ್ಯಪ್‌ ಅಕೌಂಟ್ ಇಲ್ಲ. ನಾನು ಕಳೆದ 37 ವರ್ಷಗಳಿಂದ ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದು. ವಿದ್ಯಾರ್ಥಿ ದೆಸೆಯಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತಾ ಬಂದಿದ್ದೇನೆ ಎಂದರು.

ಆಶಾ ಗುಂಡೇರ, ಪ್ರಕಾಶ ಕೋಳಿವಾಡ, ಕೃಷ್ಣಪ್ಪ ಕಂಬಳಿ, ಮಂಜುನಾಥ ಮಠಪತಿ, ಪೂರ್ಣಿಮಾ ಕೋಳಿವಾಡ, ಏಕನಾಥ ಭಾನುವಳ್ಳಿ, ಬಸವರಾಜ ಹುಚಗೊಂಡರ, ಕಲ ಕೋಟಿ, ಶೇಖಪ್ಪ ಹೊಸಗೌಡ್ರ, ಮಧು ಕೋಳಿವಾಡ, ಶಶಿಧರ ಬಸೆನಾಯಕ, ಕೆ.ಡಿ.ಸಾವುಕಾರ, ತಿರುಪತಿ ಅಜ್ಜನವರ, ಇಶ್ರಾದ ಬಳ್ಳಾರಿ, ಸುರೇಶ ಜಡಮಲಿ, ಅಯೂಬಖಾನ್‌ ಐರಣಿ, ಮಯೂಬ್‌ ಕಿಲ್ಲೇದಾರ, ಶಿವಯೋಗಿ ಹಿರೇಮಠ, ಖಂಡೋಜಿರಾವ್‌, ಇಕ್ಬಾಲ್ ರಾಣೆಬೆನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.