ADVERTISEMENT

ಸಮಾನತೆ; ಅಂಬೇಡ್ಕರ್‌ ಶ್ರೇಷ್ಠ ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:46 IST
Last Updated 15 ಏಪ್ರಿಲ್ 2017, 5:46 IST

ಚನ್ನರಾಯಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಡಾ. ಬಾಬು ಜಗಜೀವನರಾಂ ಅವರು ಶೋಷಿತ ಜನಾಂಗದ ಆಶಾಕಿರಣ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌, ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೊಂದವರ್ಗಕ್ಕೆ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ನೀಡಿದ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಬಾಬು ಜಗಜೀವನರಾಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಆಹಾರ ಭದ್ರತೆಯಲ್ಲಿ ಸ್ವಾವಲಂಭನೆ ಸಾಧಿಸಿತು ಎಂದರು.

ಚಾಮರಾಜನಗರ ಜಿಲ್ಲೆ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಸಹ ಪ್ರಾಧ್ಯಾಪಕ ಬಿ.ಪಿ.ಎನ್.ನಾಗರಾಜು, ಪ್ರೊಬೇಷನರಿ ಐಎಎಸ್ ಅಧಿಕಾರಿ ಎಂ.ರೋಷನ್‌ ಮಾತನಾಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಕುಮಾರಿ, ಯೋಗೀಶ್‌, ಆರ್‌.ರಂಗಯ್ಯ, ಮಲ್ಲಮ್ಮ, ರಂಗಯ್ಯ, ಗವಿರಂಗಯ್ಯ, ಲಕ್ಷ್ಮಮ್ಮ, ಸಂಪತ್‌, ಪುಟ್ಟ ಸ್ವಾಮಿ ಅವರನ್ನು ಸನ್ಮಾನಿಸ ಲಾಯತು. ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ, ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ADVERTISEMENT

ಪುರಸಭಾಧ್ಯಕ್ಷ ಕೆ.ಜೆ.ಸುರೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ವೇತಾಆನಂದ್‌, ಮಂಜುಳಾಶಂಕರ್‌, ಸಿ.ಎನ್‌. ಪುಟ್ಟಸ್ವಾಮಿಗೌಡ, ದೇವಮ್ಮ ಗವಿರಂಗಯ್ಯ, ಸಿ. ಮಂಜೇಗೌಡ, ಶ್ರೇಯಸ್‌ ಎಂ.ಪಟೇಲ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯಾಚಂದ್ರೇ ಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ಸುದರ್ಶನ್‌, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಇದ್ದರು.

ಇದಕ್ಕೂ ಮುನ್ನ ಜನಪದ ಕಲಾತಂಡದೊಂದಿಗೆ ಅಂಬೇಡ್ಕರ್‌, ಬಾಬುಜಗಜೀವನರಾಂ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಶಾಸಕ ರಾದ ಬಾಲಕೃಷ್ಣ, ಎಂ.ಎ.ಗೋಪಾಲ ಸ್ವಾಮಿ, ದಲಿತ ಮುಖಂಡರು ಭಾಗವಹಿಸಿದ್ದರು.

ಪುಷ್ಪ ನಮನ

ಚನ್ನರಾಯಪಟ್ಟಣ: ಪಟ್ಟಣದ ಮೈಸೂರು ವೃತ್ತದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.ಅಂಬೇಡ್ಕರ್‌ ಭಾವಚಿತ್ರಕ್ಕೆ ಶಾಸಕ ಸಿ.ಎನ್‌.ಬಾಲಕೃಷ್ಣ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಎಂ.ರೋಷನ್‌, ಪುಷ್ಪ ನಮನ ಸಲ್ಲಿಸಿದರು.ಪುರಸಭಾಧ್ಯಕ್ಷ ಕೆ.ಜೆ.ಸುರೇಶ್‌, ದಲಿತಮುಖಂಡರಾದ ಕೆ.ಎನ್‌. ನಾಗೇಶ್‌, ಲಕ್ಷ್ಮಯ್ಯ, ಎನ್‌.ಬಿ.ಮಂಜಣ್ಣ, ಚಂದ್ರಪ್ಪ, ರವೀಂದ್ರ, ಸಿ.ಕೆ.ಗೋಪಾಲ ಕೃಷ್ಣ, ಎಂ.ಪುಟ್ಟಸ್ವಾಮಿ, ಕೆ.ಬಿ. ವೆಂಕಟೇಶ್‌, ಬಿ.ರೇಣುಕಾನಂದ ಇದ್ದರು.

ಅಂಬೇಡ್ಕರ್‌ ಸ್ಮರಣೆ ಸದಾ ಇರಲಿ

ಹಿರೀಸಾವೆ: ಡಾ.ಬಿ.ಆರ್.ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನದಿಂದ ಇಂದು ನಾವು ಉತ್ತಮ ಬದುಕು ನಡೆಸುತ್ತಿದ್ದೇವೆ ಎಂದು ಹಿರೀಸಾವೆ ಆಸ್ಪತ್ರೆಯ ಡಾ.ವೈಶಾಖ್ ಹೇಳಿದರು.ಇಲ್ಲಿನ ವಿವಿಧ ದಲಿತಪರ ಸಂಘಟನೆಗಳು ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ ಮುಖಂಡ ಸೋಸಲಗೆರೆ ಶ್ರೀನಿವಾಸ್ ಮಾತನಾಡಿ, ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಜಾತಿ ನಿಂದನೆ ಆದಾಗ ಮಾತ್ರ ಅಂಬೇಡ್ಕರ್್ ಅವರ ನೆನಪು ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಯೋಧ ಎಚ್.ಎಂ. ದೊರೆ ಸ್ವಾಮಿ ಮಾತನಾಡಿದರು. ಛಲವಾದಿ ಮಹಾಮಂಡಲದ ತಾಲ್ಲೂಕು ಅಧ್ಯಕ್ಷ ಎಚ್.ಎ, ಜಯಣ್ಣ, ಡಾ.ಜಿ.ಪರಮೇಶ್ವರ ಯುವಕ ಸಂಘದ ಅಧ್ಯಕ್ಷ ಎಚ್.ಜಿ. ಮಂಜುನಾಥ್, ಡಿಎಸ್ಎಸ್ ಸಂಘಟನಾ ಕಾರ್ಯದರ್ಶಿ ಬೊಮ್ಮೇನಹಳ್ಳಿ ಬಿ.ಸಿ. ರುದ್ರೇಶ್, ಹೊಸಹಳ್ಳಿ ಅಣ್ಣಯ್ಯ, ಡಿಎಸ್ ಎಸ್ ನುಗ್ಗೇಹಳ್ಳಿ ಹೋಬಳಿ ಸಂಚಾಲಕ ಬದ್ದೀಕೆರೆ ಬಸವರಾಜು, ಬಿಎಸ್‌ಪಿಯ ತಾಲ್ಲೂಕು ಘಟಕದ ಅಧ್ಯಕ್ಷೆ ಮುಳ್ಳುಕೆರೆ ಮಂಜುಳಾ, ಹಿರಿಯರಾದ ಪುಟ್ಟ ಸ್ವಾಮಯ್ಯ, ಶಿಕ್ಷಕ ಸಂಘದ ಹೋಬಳಿ ನಿರ್ದೇಶಕ ಬಿ.ಸಿ. ಮಂಜೇ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.