ADVERTISEMENT

ಹಾಸನ ತಂಡಕ್ಕೆ ಸಮಗ್ರ ಪ್ರಶಸ್ತಿ

ರಾಜ್ಯ ಮಟ್ಟದ ಕಿವುಡರ ಕ್ರೀಡಾ ಸ್ಪರ್ಧೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2018, 15:39 IST
Last Updated 29 ಜುಲೈ 2018, 15:39 IST
ರಾಜ್ಯ ಮಟ್ಟದ ಕಿವುಡರ ಕ್ರೀಡಾ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಹಾಸನ ತಂಡಕ್ಕೆ ಶಾಸಕ ಪ್ರೀತಂ ಜೆ ಗೌಡ ಬಹುಮಾನ ವಿತರಿಸಿದರು.
ರಾಜ್ಯ ಮಟ್ಟದ ಕಿವುಡರ ಕ್ರೀಡಾ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಹಾಸನ ತಂಡಕ್ಕೆ ಶಾಸಕ ಪ್ರೀತಂ ಜೆ ಗೌಡ ಬಹುಮಾನ ವಿತರಿಸಿದರು.   

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನ ನಡೆದ ರಾಜ್ಯ ಮಟ್ಟದ ಕಿವುಡರ ಕ್ರೀಡಾ ಸ್ಪರ್ಧೆಗೆ ಭಾನುವಾರ ವರ್ಣರಂಜಿತ ತೆರೆ ಬಿತ್ತು.

ಕ್ರೀಡಾಕೂಟದಲ್ಲಿ 21 ಜಿಲ್ಲೆಗಳಿಂದ 536 ಕ್ರೀಡಾಪಟುಗಳು ಭಾಗವಹಿಸಿದ್ದರು. ಒಟ್ಟು 67 ಸ್ಪರ್ಧೆಗಳು ನಡೆದವು. ಹಾಸನ ತಂಡ ಒಟ್ಟು 146 ಪಾಯಿಂಟ್‌ಗಳೊಂದಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 140 ಅಂಕದೊಂದಿಗೆ ಮೈಸೂರು ತಂಡ ದ್ವಿತೀಯ ಸ್ಥಾನ, 130 ಅಂಕ ಪಡೆದು ತುಮಕೂರು ತೃತೀಯ ಸ್ಥಾನ ಪಡೆಯಿತು.

ವಾಲಿಬಾಲ್‌ ಪಂದ್ಯದಲ್ಲಿ ಮೈಸೂರು ತಂಡ ಪ್ರಥಮ, ಧಾರವಾಡ ದ್ವಿತೀಯ ಹಾಗೂ ದಕ್ಷಿಣ ಕನ್ನಡ ತೃತೀಯ ಸ್ಥಾನ ಪಡೆಯಿತು.

ADVERTISEMENT

ಕೊನೆ ದಿನ ಸೀನಿಯರ್‌, ಜೂನಿಯರ್‌, ಸಬ್‌ ಜೂನಿಯರ್‌ ಬಾಲಕ, ಬಾಲಕಿಯರ ವಿಭಾಗದಲ್ಲಿ 100 ಮೀ, 200 ಮೀಟರ್ ಓಟದ ಸ್ಪರ್ಧೆ ಹಾಗೂ ವಾಲಿಬಾಲ್‌ ಫೈನಲ್‌ ಪಂದ್ಯ ನಡೆಯಿತು. ಉದ್ದ ಜಿಗಿತ, ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಪ್ರೀತಂ ಜೆ.ಗೌಡ, ಶ್ರವಣಮಾಂದ್ಯರ ಸಂಘಕ್ಕೆ ಸರ್ಕಾರದ ವತಿಯಿಂದ ಅಗತ್ಯ ನೆರವು ಕೊಡಿಸಲಾಗುವುದು. ಸಂಘದ ಚಟುವಟಿಕೆಗಾಗಿ ಕಚೇರಿ ತೆರೆಯಲು ಅವಕಾಶ ಕಲ್ಪಿಸಿಕೊಡಲಾವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.