ADVERTISEMENT

‘ಶಾಶ್ವತ ಸುಖ ಗುರುವಿನ ಸತ್ಸಂಗದಿಂದ ಮಾತ್ರವೇ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:44 IST
Last Updated 2 ಫೆಬ್ರುವರಿ 2017, 5:44 IST
‘ಶಾಶ್ವತ ಸುಖ ಗುರುವಿನ ಸತ್ಸಂಗದಿಂದ ಮಾತ್ರವೇ ಸಾಧ್ಯ’
‘ಶಾಶ್ವತ ಸುಖ ಗುರುವಿನ ಸತ್ಸಂಗದಿಂದ ಮಾತ್ರವೇ ಸಾಧ್ಯ’   

ರಾಣೆಬೆನ್ನೂರು: ‘ಮಾನವ ಕಾಯಾ, ವಾಚಾ, ಮನಸ್ಸಿನಿಂದಾಗುವ ಪಾಪ ಮತ್ತು ಪುಣ್ಯ ಕರ್ಮಗಳು ದುಃಖ ಮತ್ತು ಶಾಂತಿಗೆ ಕಾರಣವಾಗುತ್ತವೆ. ಅವುಗಳಿಂದ ಮುಕ್ತಿ ಪಡೆದು ಶಾಶ್ವತ ಸುಖ ಪಡೆಯುವುದು ಗುರುವಿನ ಸತ್ಸಂಗದಿಂದ ಮಾತ್ರ ಸಾಧ್ಯ’ ಎಂದು ಹಂಪಿ ಹೇಮಕೂಟದ ಹಾಗೂ ಬಳ್ಳೂರಿನ ಸಿದ್ಧಾರೂಢ ಮಠದ ವಿದ್ಯಾನಂದಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮೀಜಿ ಅವರ 3ನೇ ವರ್ಷದ ಮಹಾರಥೋತ್ಸವ ಅಂಗವಾಗಿ 17ನೇ ವರ್ಷದ ವೇದಾಂತ ಪರಿಷತ್ತಿನ ಎರಡನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.ವೇದಾಂತ ಪರಿಷತ್ ಸಭೆಯ ಚಿಂತನೆಗಾಗಿ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ನೀತಿ ಕ್ರಿಯಾಚರ್ಯ ಸ್ಥಲ- 3ನೇ ಪದದ ‘ಆವಬಲವಿಡಿದಳುಕದಖಿಳ ದುರಿತ ವೆಸಗಿ ಜಿವಿಸವೆ ಮಜದು ಸುರಲೆ ಮಾನವ’ ಎಂಬ ವಿಷಯ ಕುರಿತು ಮಠದ ಪೀಠಾಧಿಪತಿ ಮಲ್ಲಯ್ಯ ಸ್ವಾಮೀಜಿ, ಚಿಕ್ಕಮುಳವಳ್ಳಿಯ ಸಿದ್ಧಾ ರೂಢಮಠದ ಶಂಕರಾನಂದ ಶ್ರೀಗಳು, ಬದ್ನಿಯ ಪ್ರಭಾನಂದ ಶ್ರೀಗಳು, ಸಚ್ಚಿದಾನಂದ ಶ್ರೀಗಳು, ಸುಳ್ಯೆದ ಸಿದ್ಧಾರೂಢಮಠದ ರಾಮಾನಂದ ಶ್ರೀಗಳು, ಚೌಟಗಿಯ ಲಿಂಗಯ್ಯ ಶ್ರೀಗಳು ತಮ್ಮ ಉಪದೇಶಾಮೃತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.