ADVERTISEMENT

‘ಸಣ್ಣ ಸಣ್ಣ ನಗರಗಳಿಂದ ಸಂಸ್ಕೃತಿ ಉಳಿವು’

ಕರ್ನಾಟಕ ಸಂಘದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:58 IST
Last Updated 9 ಜನವರಿ 2017, 8:58 IST
ರಾಣೆಬೆನ್ನೂರಿನ ಕರ್ನಾಟಕ ಸಂಘದಲ್ಲಿ ನಡೆದ ಅಹೋರಾತ್ರಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದ ಮಹೇಶ ಕುಲಕರ್ಣಿ ಉದ್ಘಾಟಿಸಿದರು.
ರಾಣೆಬೆನ್ನೂರಿನ ಕರ್ನಾಟಕ ಸಂಘದಲ್ಲಿ ನಡೆದ ಅಹೋರಾತ್ರಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದ ಮಹೇಶ ಕುಲಕರ್ಣಿ ಉದ್ಘಾಟಿಸಿದರು.   
ರಾಣೆಬೆನ್ನೂರು: ‘ಇಂದು ಮಹಾನಗರಗಳಲ್ಲಿ ಪಾಶ್ಚ್ಯಾತ್ಯ ಶೈಲಿಯ ಕಾರ್ಯಕ್ರಮಗಳಿಗೆ ಜನರು ಮಾರು ಹೊಗುತ್ತಿದ್ದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯ ಕ್ರಮಗಳೇ ಕಣ್ಮರೆಯಾಗುತ್ತಿವೆ. ರಾಣೆಬೆನ್ನೂರಿನಂತಹ ಸಣ್ಣ ಸಣ್ಣ ನಗರಗಳೇ ನಾಡಿನ ಸಂಸ್ಕೃತಿ- ಪರಂಪರೆಗಳನ್ನು ಉಳಿಸಿವೆ’ ಎಂದು ಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದ ಮಹೇಶ ಕುಲಕರ್ಣಿ ಹೇಳಿದರು. 
 
ನಗರದ ಕರ್ನಾಟಕ ಸಂಘ ಮತ್ತು ಹಬ್ಬಳ್ಳಿಯ ಭಾರತೀಯ ಸಂಗೀತ ಸೇವಾ ಟ್ರಸ್ಟ್ ಸಂಯುಕ್ತವಾಗಿ ಶನಿವಾರ ರಾತ್ರಿ ಇಲ್ಲಿನ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ದಿ.ಉತ್ತರಾಚಾರ್ ಕಮ್ಮಾರ ಮತ್ತು ಕೊಟ್ರೇಶ ಕವಳಾಸ್ತ್ರಮಠ ಸ್ಮರಣಾರ್ಥ ಆಯೋಜಿಸಿದ್ದ ನಾಲ್ಕನೆಯ ವರ್ಷದ ಅಹೋರಾತ್ರಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸ್ವರಾಂಜಲಿ (ಸಂಗೀತ ಸುಧೆ –2017)ಯನ್ನು ಉದ್ಘಾಟಿಸಿ ಮಾತನಾಡಿದರು. 
 
ಕಾರ್ಪೋರೇಷನ್ ಬ್ಯಾಂಕಿನ ಶಾಖಾ ಪ್ರಬಂಧಕ ಪುಟ್ಟರಾಜು ಮಾತನಾಡಿ ದರು.ಸಹನಾ ಸುಧೀಂದ್ರರಾವ್ ಅವರು  ಕಥಕ್ ಶೈಲಿಯ ನೃತ್ಯ ಪ್ರದರ್ಶಿಸಿದರು.
ಇದೇ ವೇಳೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾನಗಲ್‌ನ ನರಸಿಂಹ ಕೋಮಾರ, ಹಾವೇರಿಯ ವಾಣಿ ಕಣೇಕಲ್, ಹೊಸರಿತ್ತಿಯ ಗುಡ್ಡಪ್ಪ ಮರೋಳ ಹಾಗೂ ಸ್ಥಳೀಯ ಸಂಗೀತ ಕಲಾವಿದರಾದ ನಾಗಪ್ಪ ಐರಣಿ, ಕರೇಗೌಡ ಗುರುಲಿಂಗಪ್ಪಗೌಡ್ರ, ಪಿ.ಎಂ. ಸಿದ್ದರಾಜು ಅವರನ್ನು ಸನ್ಮಾನಿಸ ಲಾಯಿತು. 
 
ಕರ್ನಾಟಕದ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಭಾರತೀಯ ಸಂಗೀತ ಸೇವಾ ಟ್ರಸ್ಟ್‌ನ ಶ್ರೀಪಾದ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೇಜಸ್ವಿನಿ ಶ್ರೀಹರಿ (ಮಳಗಿ), ಗಿರಿಜಾ ಹಿರೇಮಠ, ಪಾಂಡುರಂಗ ಭಟ್ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತದ ಸಾರಸ್ವತ ಲೋಕವನ್ನು ನಿರ್ಮಿಸಿದರು. 
 
ಸಂಕಪ್ಪ ಮಾರನಾಳ ಸ್ವಾಗತಿಸಿದರು. ಕಾರ್ಯದರ್ಶಿ ಷಣ್ಮುಖ ಕೌಷಿಕ್ ಕಾರ್ಯಕ್ರಮ ನಿರೂಪಿಸಿದರು.
 
**
ಪುಣೆಯಲ್ಲಿನಡೆಯುತ್ತಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಿಂತುಹೋಗಿದೆ. ಆದರೆ, ರಾಣೆಬೆ ನ್ನೂರಿನಲ್ಲಿ  ಅಂಥದ್ದೇ ಕಾರ್ಯಕ್ರಮ ನಡೆಸುತ್ತಿರುವುದು  ಅಭಿನಂದನಾರ್ಹ.
-ಮಹೇಶ ಕುಲಕರ್ಣಿ
ಸಂಗೀತ ಕಲಾವಿದ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.