ADVERTISEMENT

ಸಹಾಯಧನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:50 IST
Last Updated 21 ಏಪ್ರಿಲ್ 2017, 7:50 IST

ರಾಣೆಬೆನ್ನೂರು: ಅಂತ್ಯಸಂಸ್ಕಾರ ನೆರವು ಯೋಜನೆಗೆ ಅರ್ಜಿಸಿ ಸಲ್ಲಿಸಿ ಒಂದು ವರ್ಷ ಕಳೆದರೂ ಸಹಾಯಧನ ಬಿಡು ಗಡೆ ಆಗದಿರುವ ಸರ್ಕಾರದ ವಿಳಂಭ ನೀತಿ ಖಂಡಿಸಿ ಮೇ 8ರಂದು ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆ ಸಲಾಗುವುದು ಎಂದು ತಾಲ್ಲೂಕು ಹುಲ್ಲ ತ್ತಿಯ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಕೆರೂಡಿ ತಿಳಿಸಿದ್ದಾರೆ.

ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರು ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ₹ 5ಸಾವಿರ ಸಹಾಯ ಧನ ನಿಗದಿ ಮಾಡಿ ಘೋಷಣೆ ಮಾಡಿದೆ. ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿ 48 ಗಂಟೆ ಒಳಗೆ ಅರ್ಜಿ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರ ಆದೇಶಿಸಿದೆ.

ರಾಣೆಬೆನ್ನೂರು ತಾಲ್ಲೂಕಿನಿಂದ 510 ಅರ್ಜಿಗಳು ಸಲ್ಲಿಕೆಯಾಗಿದ್ದು, 24 ಅರ್ಜಿಗಳಿಗೆ ಮಾತ್ರ ಸಹಾಯಧನ ವಿತ ರಣೆ ಮಾಡಿದ್ದಾರೆ. 486 ಅರ್ಜಿಗಳು ಸಹಾಯಧನ ವಿತರಣೆಯಾಗದೇ ಹಾಗೇ ಬಾಕಿ ಉಳಿದಿವೆ.ಜಿಲ್ಲೆಯಾದ್ಯಂತ ಹಾವೇರಿ 353, ಬ್ಯಾಡಗಿ 45, ಹಿರೇಕೆರೂರು 495, ಸವ ಣೂರು 57, ಶಿಗ್ಗಾಂವ 143. ಹಾನಗಲ್‌ 362 ಅರ್ಜಿಗಳು ಬಾಕಿ ಉಳಿದಿವೆ. ಒಟ್ಟು 2835 ಅರ್ಜಿಗಳು ಸಲ್ಲಿಕೆಯಾಗಿವೆ. 873 ಅರ್ಜಿಗಳಿಗೆ ಸಹಾಯ ಧನ ವಿತರಿಸಿದ್ದು, 1441 ಅರ್ಜಿಗಳು ಬಾಕಿ ಉಳಿದಿವೆ ಎಂದು ಕೆರೂಡಿ ದೂರಿದರು.

ADVERTISEMENT

ಮೇಲ್ಕಾಣಿಸಿ ಎಲ್ಲ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಹಕ್ಕು ಅಧಿನಿಯಮದ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಲಾಗಿದೆ. ಬಾಕಿ ಉಳಿ ದಿರುವ ಸಹಾಯ ಧನ ಬಿಡುಗಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.ಮೃತ ವ್ಯಕ್ತಿಯ ಕುಟುಂಬದವರಿಗೆ ಅರ್ಜಿಸಿದ ತಕ್ಷಣ ಪರಿಶೀಲನೆ ನಡೆಸಿ ಹಣ ಬಿಡುಗಡೆ ಮಾಡಿದರೆ ಮೃತ ವ್ಯಕ್ತಿಯ ವಿಧಿ ವಿಧಾನ ನಡೆಸಲು ಸಹಕಾರ ಸಿಕ್ಕಂತಾಗುತ್ತದೆ. ಅರ್ಜಿ ಸಲ್ಲಿಸಿ ವರ್ಷ ಗತಿಸಿದರೂ ಸಹಾಯಧನ ಬಿಡುಗಡೆ ಮಾಡಿಲ್ಲ. ಸಂತ್ರಸ್ತರು ದಿನವೂ ತಹಶೀ ಲ್ದಾರ್ ಕಚೇರಿಗೆ ಅಲೆದಾಡು ವಂತಾಗಿದೆ.

ಸರ್ಕಾರ ಅಂತ್ಯ ಸಂಸ್ಕಾರದ ಯೋಜ ನೆಗಳಿಗೆ ಅನುದಾನ ಬಿಡುಗಡೆ ಮಾಡಿ ಯೋಜನೆಯ ಉದ್ದೇಶವನ್ನು ಜನತೆಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆಗಳ ಬಗ್ಗೆ ಗ್ರಾಮ ಪಂಚಾಯ್ತಿ ಯಲ್ಲಿ ಸಾರ್ವಜನಿಕರ ತಿಳಿವಳಿಕೆಗಾಗಿ ಮಾಹಿತಿಗಾಗಿ ಬೋರ್ಡ್‌ ಹಾಕಬೇಕು ಎಂದು ಒತ್ತಾಯಿಸಿದರು. ಪ್ರಕಾಶ ಕೆರೂಡಿ, ರಾಜು ಓಲೇಕಾರ, ಮಾಲತೇಶ ವಡ್ಡರ, ಪರಮೇಶ ಕೆ. ರವಿ ಕೆರೂಡಿ, ಅರುಣ ಕಡೇಚಕರ, ಹಾಲೇಶ ಬಸಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.