ADVERTISEMENT

ಫಸಲ್ ಬಿಮಾ ಯೋಜನೆ: ಅಧಿಸೂಚಿತ ಬೆಳೆಗಳ ವಿವರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:06 IST
Last Updated 21 ನವೆಂಬರ್ 2017, 9:06 IST

ಕಲಬುರ್ಗಿ: ಜಿಲ್ಲೆಯಲ್ಲಿ 2017–18ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿತ ತಾಲ್ಲೂಕುವಾರು ಮುಖ್ಯ ಬೆಳೆಗಳ ವಿವರಗಳನ್ನು ಪ್ರಕಟಿಸಲಾಗಿದೆ.

ಹಿಂಗಾರು ಹಂಗಾಮು‌ ವಿವರ:
ಅಫಜಲಪುರ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಮಳೆಯಾಶ್ರಿತ ಸೂರ್ಯಕಾಂತಿ ಮತ್ತು ಕುಸುಬೆ. ಆಳಂದ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಬೆ.

ಕಲಬುರ್ಗಿ: ಮಳೆಯಾಶ್ರಿತ ಕಡಲೆ, ಜೋಳ, ಸೂರ್ಯಕಾಂತಿ, ನೀರಾವರಿ ಗೋಧಿ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಬೆ. ಚಿಂಚೋಳಿ: ಮಳೆಯಾಶ್ರಿತ ಕಡಲೆ, ಗೋಧಿ, ಜೋಳ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಬೆ.

ADVERTISEMENT

ಚಿತ್ತಾಪುರ: ಮಳೆಯಾಶ್ರಿತ ಕಡಲೆ, ಜೋಳ ಮತ್ತು ಇತರೆ ಬೆಳೆಗಳಾದ ಮಳೆಯಶ್ರಿತ ಕುಸುಬೆ ಮತ್ತು ನೀರಾವರಿ ಭತ್ತ.

ಜೇವರ್ಗಿ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಮಳೆಯಾಶ್ರಿತ ಸೂರ್ಯಕಾಂತಿ ಮತ್ತು ಇತರೆ ಬೆಳೆಗಳಾದ ಮಳೆಯಾಶ್ರಿತ ಕುಸುಬೆ ಮತ್ತು ನೀರಾವರಿ ಮುಸುಕಿನ ಜೋಳ, ಭತ್ತ.

ಸೇಡಂ: ಮಳೆಯಾಶ್ರಿತ ಕಡಲೆ, ಜೋಳ ಮತ್ತು ಇತರೆ ಬೆಳೆಗಳಾದ ಮಳೆಯಾಶ್ರಿತ ಕುಸುಬೆ ಹಾಗೂ ನೀರಾವರಿ ಭತ್ತ.

ಮುಂಗಾರು ಹಂಗಾಮು ವಿವರ: ಅಫಜಲಪುರ: ನೆಲಗಡಲೆ (ಶೇಂಗಾ)-(ನೀರಾವರಿ), ಕಲಬುರ್ಗಿ: ನೆಲಗಡಲೆ (ಶೇಂಗಾ)-(ನೀರಾವರಿ), ಜೇವರ್ಗಿ: ನೀರಾವರಿ ನೆಲಗಡಲೆ (ಶೇಂಗಾ) ಮತ್ತು ಭತ್ತ ಹಾಗೂ ಇತರೆ ಬೆಳೆಯಾದ ನೀರಾವರಿ ಸೂರ್ಯಕಾಂತಿ. ನೀರಾವರಿ ಮತ್ತು ಮಳೆಯಾಶ್ರಿತ ಜೋಳ, ಸೂರ್ಯಕಾಂತಿ, ಮಳೆಯಾಶ್ರಿತ ಕಡಲೆ, ಮಳೆಯಾಶ್ರಿತ ಕುಸುಬೆ ಬೆಳಿಗಳಿಗೆ ನ. 30 ರೊಳಗೆ ನೋಂದಣಿ ಮಾಡಿಕೊಳ್ಳಬೇಕು.

ನೀರಾವರಿ ಭತ್ತ, ನೀರಾವರಿ ಮತ್ತು ಮಳೆಯಾಶ್ರಿತ ಗೋಧಿ ಬೆಳೆಗಳಿಗೆ ಡಿಸೆಂಬರ್ 30ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಬೇಸಿಗೆ ಹಂಗಾಮಿನಲ್ಲಿ ನೀರಾವರಿ ನೆಲಗಡಲೆ (ಶೇಂಗಾ) ಮತ್ತು ಸೂರ್ಯಕಾಂತಿ ಬೆಳೆಗಳಿಗೆ ನೋಂದಣಿ ಮಾಡಲು 2018ರ ಫೆಬ್ರವರಿ 28 ಕೊನೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಎಚ್.ಮೊಕಾಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.