ADVERTISEMENT

ಸುಲೇಪೇಟ: 49.4 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:41 IST
Last Updated 6 ಸೆಪ್ಟೆಂಬರ್ 2017, 5:41 IST
ಚಿಂಚೋಳಿ ತಾಲ್ಲೂಕು ಸುಲೇಪೇಟ ದಸ್ತಾಪುರ ಮಧ್ಯೆ ರಸ್ತೆಯಲ್ಲಿ ಉದ್ದು ರಾಶಿಗೆ ಮಳೆ ಅಡ್ಡಿಯಾಗಿದ್ದರಿಂದ ಉದ್ದಿನ ಕಾಡು ತಾಡಪತ್ರಿಯಿಂದ ಮುಚ್ಚಿರುವುದು
ಚಿಂಚೋಳಿ ತಾಲ್ಲೂಕು ಸುಲೇಪೇಟ ದಸ್ತಾಪುರ ಮಧ್ಯೆ ರಸ್ತೆಯಲ್ಲಿ ಉದ್ದು ರಾಶಿಗೆ ಮಳೆ ಅಡ್ಡಿಯಾಗಿದ್ದರಿಂದ ಉದ್ದಿನ ಕಾಡು ತಾಡಪತ್ರಿಯಿಂದ ಮುಚ್ಚಿರುವುದು   

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದಲ್ಲಿ ಸೋಮವಾರ ಭಾರಿ ಮಳೆ ಸುರಿದಿದೆ. ಸುಲೇಪೇಟ 49.4 ಮಿ.ಮೀ ಹಾಗೂ ನಿಡಗುಂದಾ 53.4, ಕುಂಚಾವರಂ 6.4, ಕೋಡ್ಲಿ 6 ಮಿ.ಮೀ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ಮಳೆಯಿಂದಾಗಿ ಉದ್ದು ಹಾಗೂ ಹೆಸರು ರಾಶಿಗೆ ಅಡಚಣೆಯಾಗಿದೆ. ಮಂಗಳವಾರ ಚದುರಿದಂತೆ ಮಳೆಯಾಗಿದೆ. ಇದರಿಂದ ರಾಶಿ ಮಾಡಲು ರಸ್ತೆ ಮೇಲೆ ಹಾಕಿದ್ದು ಉದ್ದು, ಹೆಸರಿನ ಕಾಡು ತಾಡಪತ್ರಿಯಿಂದ ಮುಚ್ಚಿಟ್ಟಿರುವುದು ಕುಡಳ್ಳಿಯಿಂದ ಚಿಂಚೋಳಿವರೆಗೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಾಣಬಹುದಾಗಿದೆ.

ಚಂದನಕೇರಾ 18 ಮಿ.ಮೀ, ಹಲಚೇರಾ 17.5, ಮೋಘಾ 41.5, ಪಸ್ತಪುರ 34, ರುಮ್ಮನಗೂಡ 41.5, ಗಡಿಕೇಶ್ವಾರ 22, ಹೊಡೇಬೀರನಹಳ್ಳಿ 43, ಕರ್ಚಖೇಡ್‌ 100, ಕೆರೋಳ್ಳಿ 16, ಶಿರೋಳ್ಳಿಯಲ್ಲಿ 21.5 ಮಿ.ಮೀ ಮಳೆ ದಾಖಲಾಗಿದೆ ಎಂದು ವಿವರಿಸಿದ್ದಾರೆ.

ADVERTISEMENT

ಕಳವಳ: ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅರೆಬರೆ ಮಳೆಯಿಂದ ಕೈಗೆ ಬಂದ ಬೆಳೆಯನ್ನು ನಿರಂತರ ಸುರಿಯುತ್ತಿರುವ ಮಳೆ ಆಹುತಿ ಪಡೆಯುತ್ತಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.