ADVERTISEMENT

ಕಳೆ ತೆಗೆಯುವ ಯಂತ್ರ ಆವಿಷ್ಕಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 8:41 IST
Last Updated 13 ಸೆಪ್ಟೆಂಬರ್ 2017, 8:41 IST
ಶನಿವಾರಸಂತೆ ಕೃಷಿಕ ಎ.ಡಿ. ಮೋಹನ್ ಕುಮಾರ್ ನೂತನವಾಗಿ ಆವಿಷ್ಕಾರಗೊಳಿಸಿರುವ ಅರೆ, ಕುಂಟೆ, ಸಾಲು ಮಧ್ಯದಲ್ಲಿ ಕಳೆ ತೆಗೆಯುವ ಯಂತ್ರ
ಶನಿವಾರಸಂತೆ ಕೃಷಿಕ ಎ.ಡಿ. ಮೋಹನ್ ಕುಮಾರ್ ನೂತನವಾಗಿ ಆವಿಷ್ಕಾರಗೊಳಿಸಿರುವ ಅರೆ, ಕುಂಟೆ, ಸಾಲು ಮಧ್ಯದಲ್ಲಿ ಕಳೆ ತೆಗೆಯುವ ಯಂತ್ರ   

ಶನಿವಾರಸಂತೆ: ಕೃಷಿಕರ ಬವಣೆ ನೀಗಿಸಲು ಸ್ಥಳೀಯ ಕೃಷಿಕ ಎ.ಡಿ. ಮೋಹನ್ ಕುಮಾರ್ ಅವರು ಗದ್ದೆಯಲ್ಲಿ, ಅರೆ, ಕುಂಟೆ, ಸಾಲು ಮಧ್ಯದಲ್ಲಿ ಕಳೆ ತೆಗೆಯುವ ನೂತನ ಯಂತ್ರವೊಂದನ್ನು ಆವಿಷ್ಕಾರಗೊಳಿಸಿದ್ದಾರೆ.

35 ಕೆ.ಜಿ ತೂಕವಿರುವ ಯಂತ್ರಕ್ಕೆ ಕೇವಲ ಗಂಟೆಗೆ 850 ಎಂ.ಎಲ್.ನಿಂದ 1 ಲೀ. ಪೆಟ್ರೋಲ್ ಬಳಕೆಯಾಗುತ್ತದೆ. ಯಂತ್ರಕ್ಕೆ ಟಿವಿಎಸ್ ಎಕ್ಸ್ಎಲ್ ಎಂಜಿನ್ ಬಳಸಿದ್ದು ಎಎಫ್‌ಎಚ್‌- ಎಂದು ನಾಮಕರಣ ಮಾಡಲಾಗಿದೆ. ಈ ಯಂತ್ರದ ಬೆಲೆ ₹ 30,000. ಈ ಯಂತ್ರವನ್ನು ಮೋಹನ್ ಕುಮಾರ್ ಸೆ. 14ರ ಗುರುವಾರ ಬೆಳಿಗ್ಗೆ 10–30ಕ್ಕೆ ಸ್ಥಳೀಯ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರದರ್ಶಿಸಲಿದ್ದಾರೆ.

ಅಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಎಸ್. ವಸಂತಕುಮಾರ್ ವಹಿಸುತ್ತಾರೆ. ಯಂತ್ರದ ಪ್ರಾತ್ಯಕ್ಷಿಕೆಯನ್ನು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಎಸ್. ರಾಜಶೇಖರ್ ಉದ್ಘಾಟಿಸುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ.ಪ್ರಕಾಶ್ ಹಾಗೂ ಮಡಿಕೇರಿಯ ತೋಟಗಾರಿಕೆ ಸಹಾಯಕ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ಪಾಲ್ಗೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.