ADVERTISEMENT

ಕೊಡಗಿನ ಹಾಕಿ: ಸಿ.ಡಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 4:59 IST
Last Updated 15 ಏಪ್ರಿಲ್ 2017, 4:59 IST

ಮಡಿಕೇರಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿರುವ ಕೊಡಗಿನ ಹಾಕಿ ಸಂಬಂಧಿಸಿದ ಸಿ.ಡಿ.ಯನ್ನು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಸಂಸ್ಕೃತಿ, ಆಚಾರ ವಿಚಾರ ಗಳನ್ನು ದೆಹಲಿಯವರೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘ ನೀಯ. ಪೂರ್ವ ತಯಾರಿ ಹಾಗೂ ಉತ್ತಮ ಯೋಜನೆಗಳನ್ನು ಇಟ್ಟು ಕೊಂಡು ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್‌. ತಮ್ಮಯ್ಯ ಯಶಸ್ವಿ ಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.

ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವರಲ್ಲಿ ಕೊಂಚ ಸೋಮಾರಿತನವಿದ್ದು, ಎಲ್ಲಾ ಸವಾಲುಗಳನ್ನು ಸ್ವೀಕರಿಸಲು ಕೊಡವ ಬಾಂಧವರು ಮುಂದೆ ಬರಬೇಕು ಎಂದು ಹೇಳಿದರು.ಕೊಡಗಿನಲ್ಲಿ 21 ವರ್ಷಗಳಿಂದ ನಡೆಯತ್ತಿರುವ ಕೊಡವ ಕೌಟುಂಬಿಕ ಹಾಕಿ ಕುರಿತಂತೆ ಸಿ.ಡಿ. ಹೊರ ತರಲಾಗಿದೆ.  ನಾಗೇಶ್ ಕಾಲೂರು, ಚಿತ್ರ ನಾಣಯ್ಯ ಸಾಹಿತ್ಯ ಬರೆದಿದ್ದು, ಮೊಣ್ಣಂಡ ಶೋಭಾ ನಾಣಯ್ಯ, ತ್ಯಾಗರಾಜ್ ಅಪ್ಪಯ್ಯ ಸಂಗೀತ ನೀಡಿದ್ದಾರೆ. ಶ್ರೀದೇವಿ ಕುಳೇನೂರ್, ನೆಲ್ಲಮ್ಕಡ ಸಾಗರ್ ಮಾಚಯ್ಯ, ಚೆಕ್ಕೇರ ಪಂಚಮ್, ಮತ್ತಿತರರು ರಾಗ ಸಂಯೋಜನೆ ಮಾಡಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಮಾಹಿತಿ ನೀಡಿದರು.

ADVERTISEMENT

ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.ಕೌಟುಂಬಿಕ ಹಾಕಿ 17ರಿಂದ ಆರಂಭಮಡಿಕೇರಿ:ನಾಪೋಕ್ಲುವಿನಲ್ಲಿ 21ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯು ಇದೇ 17ರಿಂದ ಆರಂಭಗೊಳ್ಳಲಿದ್ದು ಉದ್ಘಾಟನೆ ದಿವಸ ರೆಸ್ಟ್‌ ಆಫ್‌ ಇಂಡಿಯಾ, ಸೇನೆಯ ಕೂರ್ಗ್‌ ರಿಜಿಮೆಂಟ್‌ ಹಾಗೂ ಕರ್ನಾಟಕ ಹಾಕಿ ತಂಡವು ಪ್ರದರ್ಶನ ಪಂದ್ಯದಲ್ಲಿ ಆಡಲಿವೆ.

ರೆಸ್ಟ್ ಆಫ್‌ ಇಂಡಿಯಾ ತಂಡವು ವಿ.ಆರ್‌. ರಘುನಾಥ್‌ ನಾಯಕತ್ವದಲ್ಲಿ ಆಡಲಿದೆ. ಉಳಿದಂತೆ ಜಗದೀಪ್‌ ದಯಾಳ್‌, ನಿರ್ಮಲ್‌ ಚಿಣ್ಣಪ್ಪ, ವಿಕ್ರಂಕಾಂತ್‌, ವಿ.ಎಸ್‌. ವಿನಯ್‌, ಎ.ಬಿ. ಚೆಯ್ಯಣ್ಣ, ಕೆ.ಎಸ್‌. ಅಪ್ಪಣ್ಣ, ಕೆ.ಪಿ. ಸೋಮಯ್ಯ, ಜಿ.ಎನ್‌. ಪೃಥ್ವಿರಾಜ್‌, ಪಿ. ಸೋಮಣ್ಣ, ಪಿ.ಎಲ್‌. ತಿಮ್ಮಣ್ಣ, ಎಂ.ನಿತಿನ್‌ ತಿಮ್ಮಯ್ಯ, ಕೆ.ಎ. ನೀಲೇಶ್‌, ಕೆ.ಎಂ. ಸೋಮಣ್ಣ, ಪಿ.ಆರ್‌. ಅಯ್ಯಪ್ಪ, ಎಂ.ಜಿ. ಪೂಣಚ್ಚ, ಪಿ.ಮುತ್ತಣ್ಣ, ಬಿ.ಜೆ. ಕಾರ್ಯಪ್ಪ ಪ್ರದರ್ಶನ ಪಂದ್ಯದಲ್ಲಿ ರೆಸ್ಟ್‌ ಆಫ್‌ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕರ್ನಾಟಕ ಇಲೆವೆನ್‌ ತಂಡವನ್ನು ಜೆ.ಪಿ. ಕುಶ (ನಾಯಕ), ಶರತ್‌ ಸೋಮಣ್ಣ (ಗೋಲ್‌ ಕೀಪರ್‌), ಕೆ.ಟಿ. ಕಾರ್ಯಪ್ಪ, ಸೋನು ಪೊನ್ನಣ್ಣ, ಕೆ.ಕೆ. ಭರತ್‌, ಎಚ್‌.ಎಸ್‌. ಅಭಿಷೇಕ್‌, ಸಿರಾಜ್‌, ಎಂ.ಎಸ್‌. ಬೋಪಣ್ಣ, ರತನ್‌ ಮುತ್ತಣ್ಣ, ಬಿ.ಬಿ. ಮಾಚಯ್ಯ, ಕೆ.ಟಿ. ಕುಂಜಪ್ಪ, ಆಭರಣ್‌, ರಾಹಿಲ್‌, ಹೊನ್ನೂರುಸ್ವಾಮಿ, ಶೇಷೇಗೌಡ ಪ್ರತಿನಿಧಿಸಲಿದ್ದಾರೆ.ಕೂರ್ಗ್‌ ರಿಜಿಮಂಟ್‌ ತಂಡದ ಆಟಗಾರರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಹಾಕಿ ಉತ್ಸವ ಸಮಿತಿಯ ನಿರ್ದೇಶಕ ಬಿದ್ದಾಟಂಡ ಎಸ್‌. ತಮ್ಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.