ADVERTISEMENT

ಜನಮನ ಸಳೆದ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 8:46 IST
Last Updated 10 ನವೆಂಬರ್ 2017, 8:46 IST

ಗೋಣಿಕೊಪ್ಪಲು: ‘ದೇವರು ಮನುಷ್ಯರನ್ನು ಸೃಷ್ಟಿಸಿದ. ಆದರೆ, ಮನುಷ್ಯತ್ವವನ್ನು ಸೃಷ್ಟಿಸಲಿಲ್ಲ’ ಎಂಬ ಸಂದೇಶ ಸಾರುವ ನಾಟಕ ಗುರುವಾರ ಪೊನ್ನಂಪೇಟೆ ಅರಣ್ಯ ಕಾಲೇಜಿನ ಆವರಣದಲ್ಲಿ ಅರ್ಥಪೂರ್ಣವಾಗಿ ಮೂಡಿಬಂದಿತು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ 5ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಯುವಸ್ಪಂದನದಲ್ಲಿ ಬ್ರಹ್ಮಾವರ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕ ಜನತೆಗೆ ಸಂದೇಶ ನೀಡಿತು.

ವಿದ್ಯಾರ್ಥಿಗಳು ಧರಿಸಿದ್ದ ವೇಷಭೂಷಣ ಕೂಡ ನಾಟಕಕ್ಕೆ ಅನ್ವರ್ಥವಾಗಿತ್ತು. ಭಾಷೆ, ಸಂಭಾಷಣೆ, ಅಭಿನಯ, ವೇದಿಕೆ ಬಳಕೆ, ಪಕ್ಕವಾದ್ಯ ಮೊದಲಾದವು ನಾಟಕಕ್ಕೆ ಪೂರಕವಾಗಿದ್ದವು.

ADVERTISEMENT

ಬೆಳಿಗ್ಗೆಯಿಂದ ನಡೆದ ಪೇಂಟಿಂಗ್, ಚರ್ಚಾಸ್ಪರ್ಧೆ, ಏಕಪಾತ್ರಾಅಭಿನಯ, ರಸಪ್ರಶ್ನೆ, ಪ್ರಹಸನ, ಆಶುಭಾಷಣ, ಜನಪದ ನೃತ್ಯ, ಪೋಸ್ಟರ್ ಮೇಕಿಂಗ್, ಸಮೂಹ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿದವು. ಚಿತ್ರಕಲೆ, ಏಕಪಾತ್ರಾಭಿನಯದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ ಮೆರೆದರು.

ಪೊನ್ನಂಪೇಟೆ ಅರಣ್ಯ ಕಾಲೇಜು ಸೇರಿದಂತೆ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯ, ಹಿರಿಯೂರು ಹಾಗೂ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯ, ಕತ್ತಲಗೆರೆ ಡಿಪ್ಲೊಮಾ ಕೃಷಿ ಕಾಲೇಜು, ಬ್ರಹ್ಮವಾರ ಡಿಪ್ಲೊಮಾ ಕೃಷಿ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.