ADVERTISEMENT

ನೆಲ್ಲಮಕ್ಕಡ, ಐಚೆಟ್ಟೀರ ತಂಡ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 9:00 IST
Last Updated 27 ಏಪ್ರಿಲ್ 2015, 9:00 IST

ವಿರಾಜಪೇಟೆ: ಐಚೆಟ್ಟೀರ, ಕಂಬಿರಂಡ, ಪಳಗಂಡ, ನೆಲ್ಲಮಕ್ಕಡ, ಮಚ್ಚಾರಂಡ, ಮೇರಿಯಂಡ, ಕೊಕ್ಕಂಡ, ಚೇಂದಂಡ, ಚಕ್ಕೇರ, ಬೊಳ್ಳಚಂಡ, ಕೇಟೋಳಿರ ಹಾಗೂ ಕೊಟ್ಟಂಗಡ ತಂಡಗಳು ಕುಪ್ಪಂಡ ಕಪ್ ಹಾಕಿ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದವು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಐಚೆಟ್ಟೀರ ತಂಡ 2-1 ಗೋಲುಗಳಿಂದ ಕುಟ್ಟೇಟಿರ ತಂಡವನ್ನು ಸೋಲಿಸಿತು. ವಿಜಯಿ ತಂಡದ ಮೋನು ಅಪ್ಪಯ್ಯ ಹಾಗೂ ಪ್ರತೀಕ್ ಮತ್ತು ಕುಟ್ಟೇಟಿರ ತಂಡದ ಅಯ್ಯಪ್ಪ ಒಂದು ಗೋಲು ಗಳಿಸಿದರು.

ಕಂಬಿರಂಡ ತಂಡ ಟೈಬ್ರೇಕರ್‌ನಲ್ಲಿ 4–1 ಗೋಲುಗಳಿಂದ ಕಾಳಿಮಾಡ ತಂಡ ವನ್ನು ಮಣಿಸಿತು. ನಿಗದಿತ ಅವಧಿಯ ಆಟದಲ್ಲಿ ಕಂಬಿರಂಡ ಮಿಥುನ್ ಹಾಗೂ ಕಾಳಿಮಾಡ ಪರ ಕುಶಾಲಪ್ಪ ಗೋಲು ಗಳಿಸಿದ್ದರಿಂದ ಪಂದ್ಯ ಸಮಬಲ ವಾಯಿತು. ಟೈಬ್ರೇಕರ್‌ನಲ್ಲಿ ಕಂಬಿರಂಡ ಪರ ಮಿಥುನ್, ಉಮೇಶ್ ಹಾಗೂ ಬೋಪಣ್ಣ ಗೋಲು ದಾಖಲಿಸಿದರು.

ಕಳೆದ ಬಾರಿಯ ರನ್ನರ್ ಅಪ್‌ ಪಳಗಂಡ ತಂಡ 2-0 ಗೋಲುಗಳಿಂದ ಬೇರೆರ ತಂಡವನ್ನು ಪರಾಭವಗೊಳಿಸಿತು. ಪಾಲಕಂಡ ತಂಡದ ಪರ ಮಂದಣ್ಣ ಹಾಗೂ ಶ್ಯಾಂ ಗೋಲು ಗಳಿಸಿ ತಂಡಕ್ಕೆ ಜಯ ತಂದಿತ್ತರು.

ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡ ಟೈಬ್ರೇಕರ್‌ನಲ್ಲಿ ಅಪ್ಪಚಿರ ತಂಡವನ್ನು ಮಣಿಸಿ ಮೂರನೇ ಸುತ್ತು ತಲುಪಿತು.  ಮಚ್ಚಾರಂಡ ತಂಡ 2-1 ಗೋಲುಗಳಿಂದ ಶಿವಚಾಳಿಯಂಡ ತಂಡವನ್ನು ಮಣಿಸಿತು.

ಮೇರಿಯಂಡ ಹಾಗೂ ಮದ್ರೀರ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಧಾರಾಕಾರವಾಗಿ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಯುಂಟು ಮಾಡಿತು. ಆಟ ನಿಂತಾಗ ಮೇರಿಯಂಡ ತಂಡ ಒಂದು ಗೋಲಿನಿಂದ ಮುನ್ನಡೆ ಸಾಧಿಸಿತ್ತು. ಆಟ ಮುಂದುವರಿಸಲು ಸಾಧ್ಯವಾಗದ ಕಾರಣ ಮೇರಿಯಂ ತಂಡವನ್ನು ವಿಜಯಿಯೆಂದು ಘೋಷಿಸಲಾಯಿತು.

ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಕೊಕ್ಕಂಡ ತಂಡ 5-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ (ದೇವಣಗೇರಿ) ತಂಡವನ್ನು ಮಣಿಸಿತು. ಚೇಂದಂಡ ತಂಡ 5–2 ಗೋಲು ಗಳಿಂದ ಪಾರುವಂಗಡ ತಂಡವನ್ನು ಮಣಿಸಿ ಮೂರನೆ ಸುತ್ತು ತಲುಪಿತು.

ಚಕ್ಕೇರ ತಂಡ 4-0 ಗೊಲುಗಳಿಂದ ನಂದಿನೆರವಂಡ ತಂಡವನ್ನು ಮಣಿಸಿತು. ಚಕ್ಕೇರ ತಂಡದ ಕಾರ್ಯಪ್ಪ ಎರಡು, ಆದರ್ಶ್ ಹಾಗೂ ಆಕಾಶ್ ತಲಾ ಒಂದು ಗೋಲು ದಾಖಲಿಸಿದರು.  ಬೊಳ್ಳಚಂಡ ತಂಡ 6-0 ಗೋಲುಗಳಿಂದ ಅಪ್ಪಚಟ್ಟೋಳಂಡ ತಂಡವನ್ನು ಮಣಿಸಿ ಮುನ್ನಡೆಯಿತು.  ಕೇಟೋಳಿರ ತಂಡ 2–1 ಗೋಲುಗಳಿಂದ ಚೋಕಿರ ತಂಡದ ಎದುರು, ಕೊಟ್ಟಂಗಡ ತಂಡ 2–1 ಗೋಲುಗಳಿಂದ ಮುಕ್ಕಾಟಿರ (ಭೇತ್ರಿ) ತಂಡದ ಎದುರು ಜಯ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.