ADVERTISEMENT

ನೋಂದಣಿಯಾದ ಪಡಿತರ ಚೀಟಿಗೆ ಸೀಮೆಎಣ್ಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:10 IST
Last Updated 6 ಮಾರ್ಚ್ 2017, 10:10 IST

ಮಡಿಕೇರಿ: ನಗರದಲ್ಲಿ ಹೊಸದಾಗಿ ಪಡಿತರ ಚೀಟಿ ಕೆಲಸ ಕಾರ್ಯ ನಿರ್ವಹಿಸಲು ಪ್ರಾಂಚೈಸಿ ತೆರೆಯಲು ಅರ್ಜಿ ಸಲ್ಲಿಸಲು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಕೋರಿದೆ.

ಗ್ರಾಮಾಂತರ ಪ್ರದೇಶದ ಅನಿಲ ಹೊಂದಿರುವ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 1 ಲೀಟರ್ ಸೀಮೆಎಣ್ಣೆ ವಿತರಣೆ ಮಾಡಲು ಸರ್ಕಾರ ಆದೇಶಿಸಿದೆ.

ಸೀಮೆಎಣ್ಣೆ ಪಡೆಯಲು ಇಚ್ಛಿಸುವ ಪಡಿತರ ಚೀಟಿದಾರರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯೊಂದಿಗೆ  ನೋಂದಣಿ ಮಾಡಿಕೊಳ್ಳಲು ಕೋರಿದೆ.

ನೋಂದಣಿ ಮಾಡಿಕೊಂಡ ಪಡಿತರ ಚೀಟಿಗಳಿಗೆ ಮಾರ್ಚ್‌ನಿಂದ ಸೀಮೆಎಣ್ಣೆ ವಿತರಿಸಲಾಗುವುದು. 2017ರ ಫೆಬ್ರುವರಿಯಿಂದ ಇದುವ ರೆಗೂ ಆಧಾರ್ ಸಂಖ್ಯೆ ನೀಡದಂತಹ ಪಡಿತರ ಚೀಟಿಗಳಿಗೆ ಮತ್ತು ಪಡಿತರ ಚೀಟಿಯಲ್ಲಿರುವ ಸದಸ್ಯರಿಗೂ ಅಕ್ಕಿಯನ್ನು (ಒಬ್ಬರಿಗೆ 5 ಕೆ.ಜಿ) ವಿತರಣೆ ಮಾಡಲಾಗಿದೆ. ಹೆಚ್ಚುವರಿ ಅಕ್ಕಿಯನ್ನು ಪಡೆಯದವರು ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಅಕ್ಕಿಯನ್ನು ಪಡೆಯಲು ಈ ಮೂಲಕ ತಿಳಿಸಿದೆ.

ADVERTISEMENT

ಹೊಸದಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಬಗೆ: ಸರ್ಕಾರವು ಹೊಸ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ನೀಡಲು ಈಗಾಗಲೇ ಆದೇಶ ನೀಡಿದ್ದು, ಅರ್ಹ ಫಲಾನುಭವಿಗಳು ಯಾವುದೇ ಖಾಸಗಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಅಥವಾ ನಗರ ಪ್ರದೇಶದ ವ್ಯಾಪ್ತಿಯ ಲ್ಲಿರುವ ಪಡಿತರ ಚೀಟಿಗಳ ಕೆಲಸವನ್ನು ನಿರ್ವಹಿಸುತ್ತಿರುವ ಬಯೋ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಬಹದು.

ಗ್ರಾಮಾಂತರ ಪ್ರದೇಶಗಳಲ್ಲಿ ಆಯಾಯ ಗ್ರಾಮ ಪಂಚಾಯಿತಿಯ ಕಚೇರಿಗಳಲ್ಲಿ ಮತ್ತು ಪಡಿತರ ಚೀಟಿ ಕೆಲಸ ನಿರ್ವಹಿಸುತ್ತಿರುವ ಬಯೋ ಕೇಂದ್ರಗಳಲ್ಲಿ ಆನ್‌ ಲೈನ್ ಮೂಲಕ ಆಧಾರ್ ಕಾರ್ಡ್‌ನ ಪ್ರತಿ ಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಅರ್ಜಿಗಳನ್ನು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಆಯಾಯ ಗ್ರಾಮ ಪಂಚಾಯಿತಿಗಳಿಗೆ ಅರ್ಜಿಗಳನ್ನು ತಮ್ಮ ಶಿಫಾರಸ್ಸಿನೊಂದಿಗೆ ಹಿಂದಿರುಗಿಸಬೇಕಾಗುತ್ತದೆ.

ಈ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಪಿ.ಡಿ.ಒಗಳು ಬೆಂಗಳೂರಿನ ಪಡಿತರ ಚೀಟಿಗಳ ಮುದ್ರಣಾ ಕೇಂದ್ರಕ್ಕೆ ಆನ್‌ಲೈನ್‌ನ ಮೂಲಕ ಕಳುಹಿಸಿದ ನಂತರ ಹೊಸ ಪಡಿತರ ಚೀಟಿ ಮುದ್ರಣಗೊಂಡು ಸ್ಪೀಡ್‌ಪೋಸ್ಟ್ ಮೂಲಕ 15 ದಿನಗಳ ನಂತರ ಅರ್ಜಿದಾರರ ಮನೆಗೆ ಕಳುಹಿಸಲ್ಪಡುತ್ತದೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪಡಿತರ ಚೀಟಿಗಳ ಕೆಲಸ ಕಾರ್ಯಗಳು, ಆಹಾರ ಧಾನ್ಯಗಳ ಕೂಪನ್ ಡೌನ್‌ಲೋಡ್, ಅಪ್‌ಲೋಡ್ ಮಾಡುವ ಕೆಲಸಗಳನ್ನು ನಿರ್ವಹಿಸಲು ಆಸಕ್ತರಿದ್ದಲ್ಲಿ ಉಪ ನಿರ್ದೇಶಕರ ಕಚೇರಿ, ಆಹಾರ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ – ಇಲ್ಲಿಗೆ ಅರ್ಜಿ ಸಲ್ಲಿಸಬಹುದು.  

ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಚೇರಿಯಿಂದ ಪಡೆಯ ಬೇಕು. ಕಂಪ್ಯೂಟರ್ ಬಾರ್‌ಕೋಡ್, ಬಯೋಮೆಟ್ರಿಕ್ ಡಿವೈಸ್ ಪ್ರಿಂಟರ್ ಮುಂತಾದ ಸಾಮಗ್ರಿಗಳು ಹೊಂದಿರಬೇಕು.

₹100 ಛಾಪ ಕಾಗದದಲ್ಲಿ ಕರಾರು ಪತ್ರ ಮಾಡಬೇಕು. ಉಪ ನಿರ್ದೇಶಕರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ₨ 1,000 ಡಿ.ಡಿ.ಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ: 08272 229457ಕ್ಕೆ ಕರೆ ಮಾಡಬ ಹುದು ಎಂದು ಆಹಾರ, ನಾಗರಿಕ ಸರಬ ರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.