ADVERTISEMENT

ರುದ್ರಭೂಮಿ ಅಭಿವೃದ್ಧಿಗೆ ₹ 10 ಲಕ್ಷ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:51 IST
Last Updated 5 ಮೇ 2017, 8:51 IST

ಸೋಮವಾರಪೇಟೆ:  ಹಾನಗಲ್ಲು ಬಾಣೆಯ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಮುಜರಾಯಿ ಇಲಾಖೆ ₹ 10 ಲಕ್ಷ ಮಂಜೂರು ಮಾಡಿದ್ದು, ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ.ದೀಪಕ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಕೀರ್ತನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಎಚ್.ಎನ್.ತಂಗಮ್ಮ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ  ಅವರು ಪರಿಶೀಲನೆ ನಡೆಸಿದರು.

ಹಾನಗಲ್ಲು ಬಾಣೆ, ಆಲೇಕಟ್ಟೆ, ಕಲ್ಲಾರೆ, ಕಾನ್ವೆಂಟ್ ಬಾಣೆ, ಹಾನಗಲ್ಲು, ಕಪ್ಪೆಗುಂಡಿ ಸೇರಿ ಇತರ ಗ್ರಾಮಗಳಿಗೆ ಒಳಪಡುವ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ತಯಾರಿಸಿದ ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ. ರುದ್ರಭೂಮಿಯಲ್ಲಿ ಸುಸಜ್ಜಿತ ಶೆಡ್, ಬೇಲಿ, ಗೇಟ್, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದರು.

ಚೌಡೇಶ್ವರಿ ಸೇವಾಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಗಿರೀಶ್, ಪ್ರಮುಖರಾದ ಚಂದ್ರು, ಸುರೇಶ್, ಲೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.