ADVERTISEMENT

ವಚನ ಸಿದ್ಧಾಂತದ ಮೂಲಕ ಸುಧಾರಣೆ

ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ದೇವರ ದಾಸಿಮಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:17 IST
Last Updated 14 ಏಪ್ರಿಲ್ 2017, 8:17 IST

ಮಡಿಕೇರಿ:  ವಚನ ಸಿದ್ಧಾಂತದ ಮೂಲಕ ಸಾಮಾಜಿಕ ಸುಧಾರಣೆಗೆ ಶ್ರಮಿಸಿದವರಲ್ಲಿ ದೇವರ ದಾಸಿಮಯ್ಯ ಪ್ರಮುಖರು ಎಂದು ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

10ನೇ ಶತಮಾನದಲ್ಲಿ ವಚನ ಕಾರರಲ್ಲಿ ದೇವರ ದಾಸಿಮಯ್ಯ ಅವರು ಪ್ರಮುಖರು. ವಚನಗಳ ಮೂಲಕ ಆಡುಭಾಷೆಯಲ್ಲಿ ಜನರಿಗೆ ಅರ್ಥೈಸುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯನ್ನು ತರಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇವರ ವಚನಗಳ ಸಿದ್ಧಾಂತ ಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕು ಎಂದು ಪ್ರತಿಪಾದಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ದೇವರ ದಾಸಿಮಯ್ಯ ಸಮಾ ನತೆಯ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ವಚನಗಳ ಮೂಲಕ ನೀಡಿದವರು. ಇವರ ವಚನಗಳಲ್ಲಿ ಸಮಾಜದಲ್ಲಿ ಸಮಾನತೆ ತರಬೇಕು ಎಂಬ ಉದ್ದೇಶಗಳಿದ್ದವು ಇಂತಹ ವಚನ ಗಳನ್ನು ಅಧ್ಯಯನ ಮಾಡಿ ಮಹಾನ್ ವ್ಯಕ್ತಿಗಳು ನೀಡಿ ದಂತಹ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.

ದೇವರ ದಾಸಿಮಯ್ಯ ಅವರು 176 ವಚನಗಳನ್ನು ಬರೆದಿದ್ದಾರೆ. ವಚನ ಕಾರರು ಜಾತ್ಯತೀತ ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮ, ಸಮಾನವೆಂದು ವಚನ ಗಳ ಮೂಲಕ ಪ್ರತಿಪಾದಿಸುವಲ್ಲಿ ದಾಸಿ ಮಯ್ಯ ಮೊದಲಿಗರು ಎಂದು ಸಾಹಿತಿ ಕಣಿವೆ ಭಾರದ್ವಾಜ್ ಆನಂದತೀರ್ಥ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್‌ ಸಾಗರ್‌, ರಾಜ್ಯ ನೇಕಾರರ ಸಮುದಾಯ ಗಳ ಒಕ್ಕೂಟದ ನಿರ್ದೇಶಕ ಡಿ.ಕೆ. ತಿಮ್ಮಪ್ಪ, ನೇಕಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ.ಪಾಂಡುರಂಗ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಅಧ್ಯಕ್ಷ ಬಿ.ಎನ್. ಪ್ರಕಾಶ್, ಭಾರತೀ ರಮೇಶ್, ಡಿ.ಕೆ. ತಿಮ್ಮಪ್ಪ ಹಾಗೂ ಟಿ.ಕೆ.ಪಾಂಡುರಂಗ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.