ADVERTISEMENT

ಆಗಸ್ಟ್‌ನಲ್ಲಿ ನೂತನ ತಾಲ್ಲೂಕು ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:11 IST
Last Updated 21 ಜುಲೈ 2017, 6:11 IST

ಕನಕಗಿರಿ: ನವಲಿ, ಹುಲಿಹೈದರ ಮತ್ತು ಕನಕಗಿರಿ ಹೋಬಳಿಯ ಮಳೆಯಾಶ್ರಿತ ಪ್ರದೇಶಗಳನ್ನು ಸೇರಿಸಿ ಕನಕಗಿರಿ ತಾಲ್ಲೂಕು ರಚನೆ ಮಾಡಲಾಗುವುದು ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲ್ಲೂಕು ಕಚೇರಿ ಉದ್ಘಾಟನೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು,
‘ನೂತನ ತಾಲ್ಲೂಕಿಗೆ ಇಡೀ ಹೋಬಳಿ ಪ್ರದೇಶದ ಗ್ರಾಮಗಳನ್ನು ಸೇರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ತಾವರಗೇರಾ ಮತ್ತು ವೆಂಕಟಗಿರಿ, ಹಿರೇವಂಕಲಕುಂಟಿ, ಇರಕಲಗಡ ಹೋಬಳಿಯ ಯಾವುದೇ ಒಂದು ಗ್ರಾಮ ಸಹ ನೂತನ ಕನಕಗಿರಿ ತಾಲ್ಲೂಕಿಗೆ ಸೇರಿಸುವುದಿಲ್ಲ’ ಎಂದು ಹೇಳಿದರು.

‘ಅಗಸ್ಟ್‌ 15ಕ್ಕೆ ಹೊಸ ತಾಲ್ಲೂಕುಗಳನ್ನು ಅಸ್ತಿತ್ವಕ್ಕೆ ತರಬೇಕೆಂಬ ಬೇಡಿಕೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಗಿದೆ.  ಒಂದು ತಾಲ್ಲೂಕಿಗೆ ₹ 25 ಕೋಟಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ’ ಎಂದು ತಂಗಡಗಿ ಹೇಳಿದರು.

ADVERTISEMENT

ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಕನಕಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ  ಮತ್ತು  ಶಾಸಕ ಶಿವರಾಜ ತಂಗಡಗಿ ಅವರು ಕನಕಗಿರಿಗೆ ನೂತನ ತಾಲ್ಲೂಕು ಸ್ಥಾನಮಾನ ನೀಡಿ ಬಹು ವರ್ಷಗಳ ಬೇಡಿಕೆ ಈಡೇರಿಸಿದ್ದಾರೆ’ ಎಂದು ತಿಳಿಸಿದರು.  

ತಾಲ್ಲೂಕು ಪಂಚಾಯಿತಿ ಸದಸ್ಯ  ಬಸವರಾಜಸ್ವಾಮಿ, ಮುಖಂಡ ಜಡಿಯಪ್ಪ ಮುಕ್ಕುಂದಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಮಲ್ಲಿಕಾರ್ಜು  ಮಾತನಾಡಿ ನವಲಿ ಹೋಬಳಿಯನ್ನು ಕನಕಗಿರಿ ತಾಲ್ಲೂಕಿಗೆ ಸೇರಿಸುವಂತೆ  ಮನವಿ ಮಾಡಿಕೊಂಡರು, ತಾಲ್ಲೂಕು ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ ದುರ್ಗಾದಾಸ  ಯಾದವ. ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ದೊಡ್ಡಯ್ಯಸ್ವಾಮಿ ಅರವಟಗಿಮಠ, ಗಂಗಾಧರಸ್ವಾಮಿ, ಪಿಕಾರ್ಡ್‌ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ಚನ್ನಬಸಯ್ಯಸ್ವಾಮಿ, ಪಿಕಾರ್ಡ್‌ ಬ್ಯಾಂಕ್ ನಿರ್ದೇಶಕ ಸಿದ್ದೇಶ್ವರ ಮಾತನಾಡಿದರು.  

ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ,  ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಉಪಾಧ್ಯಕ್ಷ  ಮಂಜುನಾಥ ಗಡಾದ, ಮುಖ್ಯಾಧಿಕಾರಿ ಎಸ್.ವೈ.ಸಂಕನಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ಸಿದ್ದಪ್ಪ ನಿರ್ಲೂಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಬಸಂತಗೌಡ, ಸದಸ್ಯ ಮಲ್ಲಿಕಾರ್ಜುನಗೌಡ, ಎಪಿಎಂಸಿ ನಿರ್ದೇಶಕ ರಾಮಚಂದ್ರ ನಾಯಕ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.