ADVERTISEMENT

ಕಬ್ಬು ಬೆಳೆದು ಮಾದರಿಯಾದ ಮಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 10:51 IST
Last Updated 4 ಮಾರ್ಚ್ 2017, 10:51 IST
ಕುಕನೂರು ಸಮೀಪದ ಇಟಗಿ ಗ್ರಾಮದ ಮಲ್ಲಪ್ಪ ಹಳ್ಳಿಯ ಕಬ್ಬಿನ ಬೆಳೆ
ಕುಕನೂರು ಸಮೀಪದ ಇಟಗಿ ಗ್ರಾಮದ ಮಲ್ಲಪ್ಪ ಹಳ್ಳಿಯ ಕಬ್ಬಿನ ಬೆಳೆ   

ಕುಕನೂರು: ಒಂದೂವರೆ ದಶಕದ ಹಿಂದೆ ಪ್ರಾಯೋಗಿಕವಾಗಿ ಬೆಳೆದ ಕಬ್ಬು ಬೆಳೆ ಇದೀಗ ಬರದ ನಾಡ ಭರವಸೆಯ ಬೆಳೆಯಾಗಿ ಬೆಳೆಗಾರರ ಆರ್ಥಿಕ ಸ್ಥಿತಿಗತಿಗಳ ಸ್ಥಾನಮಾನ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಮೀಪದ ಇಟಗಿ ಗ್ರಾಮದ ಮಲ್ಲಪ್ಪ ಬಸಪ್ಪ ಹಳ್ಳಿ ಎಂಬ ರೈತ ವಿನೂತನ ಅನ್ವೇಷಣೆ ಮೂಲಕ ಯಶಸ್ಸು ಕಂಡಿದ್ದಾರೆ.

ಬಿತ್ತನೆ ಮತ್ತು ನಿರ್ವಹಣೆ: ಜಮೀನನ್ನು ಹದಗೊಳಿಸಿ, ನೀರುಣಿಸಿ 3x3 ಅಂತರದಲ್ಲಿ ಬೀಜಗಳನ್ನು ನಾಟಿ ಮಾಡಲಾಗುತ್ತದೆ. ಎಕರೆಗೆ 30 ಕ್ವಿಂಟಲ್ ಬೀಜ ಬಿತ್ತನೆ ಮಾಡಬೇಕು. ನಾಟಿ ಮಾಡಿದ ದಿನದಿಂದ ಫಸಲು ಬರುವವರೆಗೆ ನೀರುಣಿಸಬೇಕು. ನಾಟಿ ಮಾಡಿದ ಒಂದು ತಿಂಗಳಿನಿಂದ ಮೂರು ತಿಂಗಳ ವರೆಗೆ ಎಕರೆಗೆ ಒಂದು ಕ್ವಿಂಟಲ್‌ ಡಿಎಪಿ ಮತ್ತು ಪೊಟ್ಯಾಷ್‌ ಗೊಬ್ಬರ ನೀಡಬೇಕು.

ಮೊದಲ ವರ್ಷ ಬಿತ್ತನೆ ಮಾಡಿದ ಬಳಿಕ ಕನಿಷ್ಠ ನಾಲ್ಕು ವರ್ಷಗಳ ಕಾಲ ಬಿತ್ತನೆ ಮಾಡುವಂತಿಲ್ಲ. ವೈಜ್ಞಾನಿಕ ಬಿತ್ತನೆ ಮತ್ತು ನಿರ್ವಹಣೆ ಮಾಡಿದ್ದಲ್ಲಿ ನಿರೀಕ್ಷೆಗೂ ಮೀರಿ ಫಸಲು ಪಡೆಯಬಹುದಾದ ಬೆಳೆ ಇದು.

ದರದಲ್ಲಿ ಸ್ಥಿರತೆ: ಕಬ್ಬು ಬೆಳೆಗಾರರಿಗೆ ಕಂಪೆನಿ ಮುಂಗಡವಾಗಿಯೇ ದರ ನಿಗದಿಪಡಿಸುವುದರಿಂದ ಮಾರುಕಟ್ಟೆಯಲ್ಲಿ ಕಬ್ಬು ಬೆಳೆಯ ದರ ಏರಿಳಿತ ಕಂಡರೂ ಇಲ್ಲಿನ ಕೃಷಿಕರ ಕಬ್ಬಿಗೆ ಮಾತ್ರ ಸ್ಥಿರ ದರ ದೊರೆಯುತ್ತಿದೆ.

ಎಕರೆಗೆ 55 ರಿಂದ 60 ಟನ್‌ ಕಬ್ಬು ಫಸಲನ್ನು ತೆಗೆಯುತ್ತಿದ್ದಾನೆ. ಪ್ರತಿ ವರ್ಷವೂ ಟನ್‌ಗೆ ಕನಿಷ್ಠ  ₹ 2,500 ದರ ನಿಗದಿ ಮಾಡಲಾಗುತ್ತಿದೆ, ಹೀಗಾಗಿ ಎಕರೆಗೆ ಕನಿಷ್ಠ ₹1.20 ಲಕ್ಷ ಲಾಭ ಪಡೆಯುತ್ತಿದ್ದೇನೆ ಎನ್ನುತ್ತಾರೆ ಬೆಳೆಗಾರ ಮಲ್ಲಪ್ಪ ಬಸಪ್ಪ ಹಳ್ಳಿ. ‘ಕಬ್ಬು ಉತ್ತಮವಾಗಿ ಬೆಳೆದರೆ ಜೀವನವೇ ಸಿಹಿಯಾಗಿ ಬೆಳೆದ ರೈತನ ಬದುಕು ಹಸನಾಗುವುದು’ ಎನ್ನುತ್ತಾರೆ ರೈತ ಕನಕಪ್ಪ.

‘ಕಷ್ಟಪಟ್ಟು ದುಡಿಯುವ ರೈತರ ನೆರವಿಗೆ ತೋಟಗಾರಿಕೆ ಇಲಾಖೆಯ  ಅಧಿಕಾರಿಗಳು ಬರುವುದಿಲ್ಲ ಸರ್ಕಾರದ ಸೌಲಭ್ಯಗಳನ್ನು ಶ್ರೀಮಂತ ರೈತರಿಗೆ ಒದಗಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ರೈತ ಹನುಮಂತಪ್ಪ.
-ಮಂಜುನಾಥ ಅಂಗಡಿ

*
ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸಲು  ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ಬಹುತೇಕ ರೈತರು ಅದರ ಪರಿವಿಲ್ಲದೇ ಯಶಸ್ವಿ  ಬೆಳೆಗಳನ್ನು ಬೆಳೆದಿದ್ದಾರೆ.
-ಎನ್‌.ಮಾರುತಿ,
ಗ್ರಾಮಸ್ಥ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.