ADVERTISEMENT

ಜನಪದ ಕಲೆ ಉಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 6:32 IST
Last Updated 28 ಆಗಸ್ಟ್ 2017, 6:32 IST
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಬಿ.ಎ. ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಜೀವನಸಾಬ್‌ ಬಿನ್ನಾಳ ಸೇರಿದಂತೆ ಕಲಾವಿದರನ್ನು ಸನ್ಮಾನಿಸಲಾಯಿತು
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಬಿ.ಎ. ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಜೀವನಸಾಬ್‌ ಬಿನ್ನಾಳ ಸೇರಿದಂತೆ ಕಲಾವಿದರನ್ನು ಸನ್ಮಾನಿಸಲಾಯಿತು   

ಕನಕಗಿರಿ: ಇಂದಿನ ಕಂಪ್ಯೂಟರ್ ಯುಗದಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಇತರ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗದೆ ಜನಪದ ಕಲೆ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜನಪದ ಕಲಾವಿದ ಜೀವನಸಾಬ್‌ ಬಿನ್ನಾಳ ಹೇಳಿದರು.

ಇಲ್ಲಿನ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಬಿ.ಎ. ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರು ದುಶ್ಚಟಗಳಿಗೆ ಬಲಿಯಾಗದೇ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಇಳಕಲ್‌ನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗರಾಜ ಮುದುಗಲ್ ಮಾತನಾಡಿ, ಯುವಕರು ಜಾತಿ ಮತಗಳಿಗೆ ಸೀಮಿತರಾಗದೆ ಮಾನವ ಕುಲವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.

ADVERTISEMENT

ಪ್ರಾಧ್ಯಾಪಕರಾದ ಡಾ.ರಾಮಣ್ಣ ಎ, ಶೋಭಾ ಎಸ್. ವಗ್ಗಾ, ಪ್ರಥಮ ದರ್ಜೆ ಸಹಾಯಕ ಶಾಮೀದ್, ಉಪನ್ಯಾಸಕ ಬಾಳಪ್ಪ ಸೂಳೆಕಲ್ ಬಸವರಾಜ ತಿಪ್ಪನಾಳ, ಶಿಫಾ ಅನೀಸ್ ನಿರೂಪಿಸಿದರು. ಜಯಶ್ರೀ, ಪಾರ್ವತಿ, ವಡಿಕೇಮ್ಮ, ರಜಿಯಾ, ಬಸವರಾಜ ಬೆಣ್ಣೆ, ಸಾಹಿತಿ ಇಮಾಮಸಾಹೇಬ್‌ ಹಡಗಲಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ವೆಂಕಟೇಶ ಬಿ, ಸರ್ಪ್‌ರಾಜ ಆಹ್ಮದ, ವಿದ್ಯಾರ್ಥಿಗಳಾದ ಹೊನ್ನುರಸಾಬ್‌, ಗೌರಮ್ಮ, ಅರುಣಾ, ಅನ್ನಪೂರ್ಣ. ರಾಜಸಾಬ್‌, ಇಬ್ರಾಹಿಂಸಾಬ್‌, ಹನುಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.