ADVERTISEMENT

ಕ್ಷುಲ್ಲಕ ಕಾರಣ; ಮದುವೆಯಲ್ಲಿ ಗಲಾಟೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:37 IST
Last Updated 12 ಮೇ 2017, 10:37 IST
ಸೋಮವಾರಪೇಟೆ: ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಜರುಗಿದ ಮದುವೆ ಸಮಾರಂಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಮಹಿಳೆ ಸೇರಿ ಆರು ಮಂದಿ ಗಾಯಗೊಂಡರು.
 
ಮದುವೆ ನಂತರ ಸಂಜೆ ವಧುವನ್ನು ತಡೆದು, ಕುಣಿಯಲು ಕೆಲವರು ಮುಂದಾಗಿದ್ದು ಘಟನೆಗೆ ಕಾರಣವಾಗಿದೆ.  ಕೆಲ ಯುವಕರು ಪಾನಮತ್ತರಾಗಿ ದ್ದರು ಎನ್ನಲಾಗಿದೆ. ಕುರ್ಚಿಯಲ್ಲಿ ಬಡಿದಾಡಿದ್ದು, ಕೆಲವರ ಮುಖದಲ್ಲಿ ರಕ್ತ ಹರಿದಿದೆ. ಕೊಡವ ಸಮಾಜ ಆವರಣ ಗೊಂದಲಮಯವಾಗಿದೆ.
 
ಗಲಾಟೆ ತಡೆಯಲು ಹೋದ ಮಹಿಳೆಯರ ಮೇಲೂ ಹಲ್ಲೆ ನಡೆದಿದೆ. ರಸ್ತೆಯಲ್ಲಿ ನಿಂತವರಿಗೂ ಪಾನಮತ್ತ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
 
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಕೆ.ಬಾಡಗ ಗ್ರಾಮದ ವಧು ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಸಮೀಪದ ಮಂಕ್ಯಾ ಗ್ರಾಮದ ವರನ ಮದುವೆ ನಡೆದಿತ್ತು.
 
ಸುನಂದಾ, ಎಂ.ಪಿ.ನಾಣಿಯಪ್ಪ, ಟಿ.ಜೆ.ಪ್ರಸನ್ನ, ಕುಶಾಲಪ್ಪ, ಸುಬ್ಬಯ್ಯ ಗಾಯಗೊಂಡಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವೀಣ್, ಭವಿಷ್, ಮಾದಪ್ಪ ಹಲ್ಲೆ ಮಾಡಿದರೂ ಎಂದು ಆರೋಪಿಸಲಾ ಗಿದ್ದು, ಕೆಲವರನ್ನು ವಶಕ್ಕೆ ಪಡೆದಿರುವ ಪಟ್ಟಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಹಲ್ಲೆಕೋರರು ಪರಾರಿಗೆ ಯತ್ನಿಸಿದ್ದು, ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.