ADVERTISEMENT

ಮಗನನ್ನು ಪೊಲೀಸರು ಕೊಂದಿದ್ದಾರೆ: ಆರೋಪ

ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆನಂದ್‌ ಸಾವು; ತಾಯಿಯ ಅಳಲು

​ಪ್ರಜಾವಾಣಿ ವಾರ್ತೆ
Published 11 ಮೇ 2017, 9:06 IST
Last Updated 11 ಮೇ 2017, 9:06 IST
ಮಂಡ್ಯ: ‘ನನ್ನ ಮಗನಿಗೆ ಸಾಯುವಂತಹ ಕಾಯಿಲೆ ಇರಲಿಲ್ಲ. ಮೊನ್ನೆ ಬಂದಾಗ ಪೈಲ್ಸ್‌ ಆಗಿದೆ ಅಮ್ಮ ಎಂದಿದ್ದ. ಪೈಲ್ಸ್‌ನಿಂದ ಯಾರೂ ಸಾಯುವುದಿಲ್ಲ. ಪೊಲೀಸರು ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಮೃತಪಟ್ಟ ವಿಚಾರಣಾಧೀನ ಕೈದಿಯ ತಾಯಿ ಜಯಮ್ಮ ಗೋಳಿಟ್ಟರು.
 
ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ತಾಲ್ಲೂಕಿನ ಎಚ್‌. ಮಲ್ಲಿಗೆರೆ ಗ್ರಾಮದ ಯುವಕ ಮೃತಪಟ್ಟಿದ್ದಾನೆ ಎಂಬು ಸುದ್ದಿ ತಿಳಿಯುತ್ತಿದ್ದಂತೆ ಪೋಷಕ ರು ಹಾಗೂ ಗ್ರಾಮಸ್ಥರು ಕಾರಾಗೃಹದ ಎದುರು ಪ್ರತಿಭಟನೆ ನಡೆಸಿದರು.
 
‘ನನ್ನ ತಮ್ಮನಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ. ಆರೋಗ್ಯ ಸರಿ ಇಲ್ಲದ ವಿಷಯವನ್ನು ನಮಗೆ ಮೊದಲೇ ತಿಳಿಸಬೇಕಾಗಿತ್ತು. ಸತ್ತು ಹೋದ ಮೇಲೆ ವಿಷಯ ತಿಳಿಸಿದ್ದಾರೆ. ಇದಕ್ಕೆ ಪೊಲೀಸರೇ ಕಾರಣ’ ಎಂದು ಮೃತ ಕೈದಿಯ ಅಕ್ಕ ಶ್ರುತಿ ಆರೋಪಿಸಿದರು.
 
ಪ್ರತಿಭಟನಾ ಸ್ಥಳಕ್ಕೆ ಸ್ಥಳಕ್ಕೆ ಬಂದ ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಾವಿರ ಕಾರಣವನ್ನು ತಕ್ಷಣ ನೀಡಬೇಕು. ಅನಾರೋಗ್ಯದ ವಿಷಯವನ್ನು ಕೈದಿಯ ಕುಟುಂಬದ ಸದಸ್ಯರಿಗೆ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದರು. 
 
ಈ ಸಂದರ್ಭದಲ್ಲಿ ಎಸ್ಪಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.‘ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ವರದಿ ಬಂದ ನಂತರ ಜೈಲು ಅಧಿಕಾರಿಗಳ ತಪ್ಪಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಸ್ಪಿ ಸುಧೀರ್‌ ಕುಮಾರ್‌  ಎಂದು ಹೇಳಿದರು.
 
‘ಕಳೆದ ವಾರ ಮೂರು ದಿನ ಕೈದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನು ಜೈಲು ದಾಖಲಾತಿಯಲ್ಲಿ ನಮೂ ದಿಸಲಾಗಿದೆ. ಸಿ.ಸಿ ಟಿ.ವಿಯಲ್ಲೂ ದಾಖ ಲಾಗಿದೆ. ಮಂಗಳವಾರ ಆಸ್ಪತ್ರೆಗೆ ದಾಖಲಿ ಸುವಾಗ ಏನಾಗಿದೆ ಎಂಬುದು ತನಿಖೆ ಯಿಂದ ಹೊರಬರಬೇಕಾಗಿದೆ’ ಎಂದರು.
 
‘ಜೈಲಿನಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿಯ ಮೋಟಾರ್‌ ಕೆಟ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ ಮಂಗಳವಾರ ಕೊಳವೆಬಾವಿಯನ್ನು ರಿಪೇರಿ ಮಾಡಿಸ ಲಾಗಿದೆ’ ಎಂದು ಎಸ್ಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.