ADVERTISEMENT

ಚಿಂತನ– ಮಂಥನ ಶಿಬಿರ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 9:21 IST
Last Updated 25 ಜೂನ್ 2014, 9:21 IST

ಮೈಸೂರು: ಭಾರತೀಯ ಸಾಂಸ್ಕೃತಿಕ ಪರಿಷತ್ತು, ಸುತ್ತೂರು ಮಠ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ವತಿಯಿಂದ ಸುತ್ತೂರು ಶ್ರೀಕ್ಷೇತ್ರದಲ್ಲಿ ಜೂನ್ 26ರಿಂದ ಜುಲೈ 4ರವರೆಗೆ ಚಿಂತನ– ಮಂಥನ ಶಿಬಿರವನ್ನು ಏರ್ಪಡಿಸಲಾಗಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಭಾಗವಹಿಸುವರು.

ಶಿಬಿರದಲ್ಲಿ ‘ಭಾರತೀಯ ಸಂಸ್ಕೃತಿಯನ್ನು ಸಮೃದ್ಧ­ಗೊಳಿಸಿದ ಮಹಾನುಭಾವರು’ ಕುರಿತು ಚಿಂತನೆ ನಡೆಯಲಿದೆ. ವ್ಯಾಸ ಮಹರ್ಷಿ, ಭಗವಾನ್ ಬುದ್ಧ, ಭಗವಾನ್ ಮಹಾವೀರ, ಪತಂಜಲಿ ಮಹರ್ಷಿ, ಕಪಿಲ ಮಹರ್ಷಿ, ತಿರುವಳ್ಳುವರ್, ನಾರಾಯಣ ಗುರು, ಬಸವಣ್ಣ, ಅಕ್ಕಮಹಾದೇವಿ, ಸಂತ ತುಳಸೀದಾಸ, ವಲ್ಲಭಾಚಾರ್ಯ, ನಿಂಭಾರ್ಕಾಚಾರ್ಯ, ಜ್ಞಾನೇಶ್ವರ, ರಾಮದಾಸ, ಚೈತನ್ಯ ಮಹಾಪ್ರಭು, ಕನಕದಾಸ, ಪುರಂದರದಾಸ, ಗುರುನಾನಕ್, ದಯಾನಂದ ಸರಸ್ವತಿ, ಮಹರ್ಷಿ ಅರವಿಂದ, ಸ್ವಾಮಿ ನಾರಾಯಣ, ರಮಣ ಮಹರ್ಷಿ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ ಅವರನ್ನು ಕುರಿತ ಉಪನ್ಯಾಸ ಇರಲಿದೆ.

ಶತಾವಧಾನಿ ಆರ್. ಗಣೇಶ್, ವಿದ್ವಾನ್ ಎಚ್.ವಿ. ನಾಗರಾಜರಾವ್, ಪ್ರೊ.ಎಸ್. ಶಿವಾಜಿ ಜೋಯಿಸ್, ಡಾ.ಹಂಪ ನಾಗರಾಜಯ್ಯ, ಪ್ರೊ.ಉಮಾಕಾಂತ ಭಟ್, ಪ್ರೊ.ಚೆ. ರಾಮಸ್ವಾಮಿ, ಸ್ವಾಮಿ ಸತ್ಯಾನಂದತೀರ್ಥ, ಸಿದ್ಧರಾಮಸ್ವಾಮಿ, ಮಲ್ಲಯ್ಯ ಸ್ವಾಮಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ಜಯತೀರ್ಥಾಚಾರ್ಯ ಮಳಗಿ, ಗುರುನಾಥ ಮಹಾರಾಜ ಸಂಗದರಿ, ಸ್ತೋಕ ಕೃಷ್ಣದಾಸ್, ಡಾ.ಎ.ವಿ. ನಾವಡ, ಡಾ.ಎ.ವಿ. ನಾಗಸಂಪಿಗೆ, ಚಿರಂಜೀವಿ ಸಿಂಗ್, ಶ್ರುತಿಪ್ರಿಯಾ, ಪ್ರೊ.ನಂದನ್ ಪ್ರಭು, ಸಾಧು ಸರಳ್‌ಜೀವನ್‌ದಾಸ್, ಸ್ವಾಮಿ ಆದಿತ್ಯಾನಂದ, ಪ್ರೊ.ಎಚ್.ಎನ್. ಮುರಳೀಧರ್, ಡಾ.ಸಿ.ಪಿ. ರಾಮಶೇಷ್ ಅವರು ಉಪನ್ಯಾಸ ನೀಡಲಿದ್ದು, ಸಂವಾದ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.