ADVERTISEMENT

ಮೈಸೂರು– ಚೆನ್ನೈ ವಿಮಾನ ಸಂಚಾರ ಶುರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:33 IST
Last Updated 21 ಸೆಪ್ಟೆಂಬರ್ 2017, 6:33 IST

ಮೈಸೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಮೂಲಕ ಸಂಪರ್ಕ ಕಲ್ಪಿಸುವ ‘ಹೆಲಿಟ್ಯಾಕ್ಸಿ’ ಸೇವೆಗೆ ಬೇಡಿಕೆ ಸೃಷ್ಟಿಯಾಗಿದೆ. ಸದ್ಯದಲ್ಲೇ ಇದು ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದರು.

ಮೈಸೂರು– ಚೆನ್ನೈ ವಿಮಾನ ಯಾನ ಸೇವೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ರೀತಿಯ ಬೇಡಿಕೆ ಮೈಸೂರಿನಲ್ಲೂ ಕಂಡು ಬಂದರೆ ರಸ್ತೆ ಸಾರಿಗೆಯ ದರದಲ್ಲೇ ‘ಹೆಲಿಟ್ಯಾಕ್ಸಿ’ ಸೇವೆಯನ್ನು ಇಲ್ಲಿನ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

‘ಉಡಾನ್’ 2ನೇ ಹಂತದ ಯೋಜನೆಯಡಿ ಮೈಸೂರಿಗೆ ಮತ್ತೊಂದು ವಿಮಾನಯಾನ ಸೇವೆ ಆರಂಭವಾಗಲಿದೆ. ಇದೇ ರೀತಿ ರಾಜ್ಯದ ಇತರ ನಗರಗಳಾದ ಬಳ್ಳಾರಿ, ಬೆಳಗಾವಿ ನಗರಗಳಲ್ಲೂ ವಿಮಾನಯಾನ ಸೇವೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.