ADVERTISEMENT

‘ಅಧ್ಯಾತ್ಮ ಚಿಂತನೆ ಅಳವಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 11:18 IST
Last Updated 30 ನವೆಂಬರ್ 2017, 11:18 IST

ಶಕ್ತಿನಗರ: ‘ಜೀವನದಲ್ಲಿ ಧಾರ್ಮಿಕ ವಿಚಾರ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ’ ಎಂದು ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ದೇವಸೂಗೂರಿನ ಸೂಗೂ ರೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಈಚೆಗೆ ನಡೆದ ‘ಶ್ರೀ ಸೂಗೂರಸ್ವಾಮಿ ಉಯ್ಯಾಲ’ ಎಂಬ ತೆಲುಗು ಪುಸ್ತಕ ಬಿಡುಗಡೆ ಹಾಗೂ ಮಾಸಿಕ ಶಿವಾನುಭವದ 33ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಔದ್ಯೋಗಿಕ ಮತ್ತು ಗಣಕೀಕರಣದ ಇಂದಿನ ದಿನಮಾನಗಳಲ್ಲಿ ಜನರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದಾರೆ. ಸುಖ, ಶಾಂತಿ ಮತ್ತು ನೆಮ್ಮದಿ ಮರೀಚಿಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಅನ್ನದಾಸೋಹದಂತೆ ಜ್ಞಾನದಾಸೋಹ ಎಂಬ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಗ್ರಾಮದ ಹಿರಿಯ ಮುಖಂಡ ಸಿದ್ರಾಮಪ್ಪ ಮಾಲಿಪಾಟೀಲ್‌ಗೌಡ ಮಾತನಾಡಿದರು. ಸೂಗೂರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮರುಳಾರಾಚಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶ್ರೀ ಸೂಗೂರಸ್ವಾಮಿ ಉಯ್ಯಾಲ ಎಂಬ ತೆಲುಗು ಪುಸ್ತಕ ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಸಾಹಿತಿ ರಮೇಶಬಾಬು ಯಾಳಗಿ,ಗಂಗಾಧರಗೌಡ, ದೇವಸ್ಥಾನದ ವ್ಯವಸ್ಥಾಪಕ ನವೀನ್, ಶ್ರೀಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.