ADVERTISEMENT

ಬತ್ತಿದ ಮಸ್ಕಿ ಜಲಾಶಯ; ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:19 IST
Last Updated 21 ಏಪ್ರಿಲ್ 2017, 6:19 IST

ಮಸ್ಕಿ: 7,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸಮೀಪದ ಮಾರಲದಿನ್ನಿ ಬಳಿ ನಿರ್ಮಿಸಿರುವ 0.5 ಟಿಎಂಸಿ ಅಡಿ ಸಾಮರ್ಥ್ಯದ ಮಸ್ಕಿ ಜಲಾಶಯ ಸಂಪೂರ್ಣ ಬತ್ತಿದೆ.ಆದ್ದರಿಂದ ಕುಡಿಯುವ ನೀರಿಗಾಗಿ ಈ ಭಾಗದ ಜನರು ಹಾಗೂ ಜಾನು ವಾರುಗಳು ಪರಿತಪಿಸುತ್ತಿವೆ. ಜಲಾಶ ಯದ ನೀರನ್ನೇ ನಂಬಿರುವ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರು ಕಂಗಲಾಗಿ ಗುಳೆ ಹೊಗುತ್ತಿದ್ದಾರೆ.

ಜಲಾಶಯದಲ್ಲಿದ್ದ ಅಲ್ಪ ಪ್ರಮಾಣದ ನೀರನ್ನು ತಿಂಗಳ ಹಿಂದೆ ಹಿಂಗಾರು ಬೆಳೆಗೆ ಬಿಡಲಾಗಿತ್ತು. ಉಳಿದ ನೀರು ಬಿಸಿಲಿನ ತಾಪಕ್ಕೆ ಆವಿಯಾಗಿ ಜಲಾಶಯ ಬರಿದಾಗಿದೆ.‘ಮಸ್ಕಿ ಜಲಾಶಯ ಈ ಭಾಗದ ಸುಮಾರು 18ಕ್ಕೂ ಹೆಚ್ಚು ಗ್ರಾಮಗಳ ರೈತರ ಜೀವನಾಡಿಯಾಗಿದೆ. ಹಿಂದೆ ಯಾವತ್ತೂ ಜಲಾಶಯ ಈ ರೀತಿ ಖಾಲಿಯಾಗಿರಲಿಲ್ಲ. ಇದು ರೈತರ ಆತಂಕ ಕ್ಕೆ ಕಾರಣವಾಗಿದೆ’ ಎಂದು ಅಚ್ಚುಕಟ್ಟು ಪ್ರದೇಶದ ರೈತ ಶರಣಗೌಡ ಕಾಟಗಲ್‌ ಹೇಳಿದರು.

‘ಕುಷ್ಟಗಿ, ಗಜೇಂದ್ರಗಡ ತಾಲ್ಲೂಕು ಗಳಲ್ಲಿ ಮಳೆಯಾದರೆ ಮಾತ್ರ ಜಲಾಶಯಕ್ಕೆ ನೀರು ಬರುತ್ತಿದೆ. ಮಳೆ ಕೊರತೆಯಿಂದಾಗಿ ಜಲಾಶಯ ತುಂಬ ಲಿಲ್ಲ. ಅಲ್ಲದೆ ಜಲಾಶಯ ಬರಿದಾ ಗಿದ್ದರಿಂದ ಯೋಜನೆ ವ್ತಾಪ್ತಿಯ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್‌, ಬೆಲ್ಲದಮರಡಿ, ದಿಗ್ಗನಾಯಕಭಾವಿ ಸೇರಿ ದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾ ಗಿದೆ.   ಈ ಭಾಗದ ಜಾನುವಾರು ಗಳಿಗೂ ಕುಡಿ ಯಲು ನೀರಿಲ್ಲದಂತಾಗಿದೆ’ ಎಂದರು.
ಜಲಾಶಯ ಬರಿದಾಗಿರುವುದರಿಂದ ಹೂಳು ತೆಗೆಸಲು ಸರ್ಕಾರ ಮುಂದಾ ಗಬೇಕು. ಇದರಿಂದ ಮುಂದಿನ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.