ADVERTISEMENT

ಮೇ 9ರಂದು ಬಸವ ಜಯಂತಿ ಆಚರಣೆ

ಸಿದ್ಧತೆಗೆ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:18 IST
Last Updated 4 ಮೇ 2016, 11:18 IST

ರಾಯಚೂರು: ಬಸವ ಜಯಂತಿಯನ್ನು ಮೇ 9ರಂದು ಅದ್ಧೂರಿಯಾಗಿ ಆಚರಣೆ ಮಾಡಲು ಅಗತ್ಯ ಸಿದ್ದತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್‌ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ   ಮಾತನಾಡಿದರು.

ಬಸವೇಶ್ವರ ವೃತ್ತದಲ್ಲಿರುವ ಬಸ ವಣ್ಣನ ಪುತ್ಥಳಿ ಬಳಿ ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಅದೇ ರೀತಿ ಪೊಲೀಸ್‌ ಭದ್ರತೆ ಒದಗಿಸಲು ಡಿವೈಎಸ್‌ಪಿ ಅವರಿಗೆ ಸೂಚನೆ ನೀಡಿದರು.

ಅಂದು ಬೆಳಿಗ್ಗೆ ಮಾಲಾರ್ಪಣೆ ನಂತರ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ ಎಂದರು.

ಸಮಾಜದ ಪದಾಧಿಕಾರಿಗಳು ಮಾತನಾಡಿ, ವಿಶೇಷ ಉಪನ್ಯಾಸಕರಾಗಿ   ಟಿ.ಆರ್‌.ಚಂದ್ರಶೇಖರ ಅವರನ್ನು ಆಹ್ವಾ ನಿಸಲಾಗುವುದು. ಪ್ರತಿಭಾ ಗೋನಾಳ ತಂಡದಿಂದ ವಚನ ಗಾಯನ ಮಾಡಿಸ ಲಾಗುವುದು ಎಂದು ತಿಳಿಸಿದರು.

ಬಸವಣ್ಣ ಅವರ ಭಾವಚಿತ್ರದ ಮೆರ ವಣಿಗೆಯನ್ನು ಸಂಜೆ ವೀರಭದ್ರೇಶ್ವರ ದೇವಸ್ಥಾನದಿಂದ ಪಟೇಲ್‌ ರಸ್ತೆ, ಸರಾಫ್‌ ಬಜಾರ್‌, ಮಹಾವೀರ ವೃತ್ತದ ಮೂಲಕ ವೀರಶೈವ ಕಲ್ಯಾಣ ಮಂಟಪದವರೆಗೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶಘಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಡಿವೈಎಸ್‌ಪಿ ಚಂದ್ರ ಶೇಖರ ನೀಲಗಾರ,  ಪದಾಧಿಕಾರಿಗ ಳಾದ ರಾಜೇಂದ್ರ ಪಾಟೀಲ ರೆವೂರ, ಶರಣಬಸವ ಅರಳಿ, ಸಿ.ವಿ.ಪಾಟೀಲ, ಕೆ.ಎಂ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.