ADVERTISEMENT

‘ಸಾಮೂಹಿಕ ವಿವಾಹದಿಂದ ಸಾಮರಸ್ಯ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:17 IST
Last Updated 21 ಏಪ್ರಿಲ್ 2017, 6:17 IST

ಜಾಲಹಳ್ಳಿ: ‘ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕ ಬಹುದು. ಜತೆಗೆ ಸಮಾಜದಲ್ಲಿ ಸಾಮ ರಸ್ಯ ಮೂಡುತ್ತದೆ’ ಎಂದು ಸಂಸದ ಬಿ.ವಿ.ನಾಯಕ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಮುಂಡರಗಿ ಗ್ರಾಮದ ಶಿವರಾಯ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ   ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಡ ಕುಟುಂಬಗಳು  ಮದುವೆಗೆ ಸಾಲ ಮಾಡಿ ಅದನ್ನು ತೀರಿಸಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತವೆ. ಸಾಮೂಹಿಕ ವಿವಾಹಗಳಿಂದ ಕುಟುಂಬ ದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ’ ಎಂದರು.‘ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಮುಂದೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪ್ರಗತಿ ಸಾಧ್ಯ’ ಎಂದು ಹೇಳಿದರು.

ವೀರಗೋಟ್‌ ಅಡವಿಲಿಂಗ ಸ್ವಾಮಿ, ದೋರನಹಳ್ಳಿ ಮಹಾಂತೇಶ್ವರ ವೀರ ಮಹಾಂತ ಸ್ವಾಮಿ, ಶಿವಣ್ಣ ತಾತಾ, ಸಿದ್ದಣ್ಣ ತಾತಾ, ಸುಲ್ತಾನಪುರ ಶಂಭು ಸೋಮನಾಥ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಕೆ.ಶಿವನಗೌಡ ನಾಯಕ, ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಸಹಕಾರಿ ಬ್ಯಾಂಕ್‌ ನಿರ್ದೇಶಕ ರಾಜಶೇಖರ ನಾಯಕ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಜಯಶ್ರೀ ಶರಣಗೌಡ, ವೆಂಕಟೇಶ ಪೂಜಾರಿ ಇದ್ದರು.ಸಾಮೂಹಿಕ ವಿವಾಹದಲ್ಲಿ 151 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.