ADVERTISEMENT

ಕೆ.ಪಿ.ದೊಡ್ಡಿ: ಕಾಡಾನೆಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:25 IST
Last Updated 19 ಮೇ 2017, 6:25 IST
ಆನೆಗಳನ್ನು ವೀಕ್ಷಿಸಲು ಸೇರಿದ್ದ ಗ್ರಾಮಸ್ಥರು
ಆನೆಗಳನ್ನು ವೀಕ್ಷಿಸಲು ಸೇರಿದ್ದ ಗ್ರಾಮಸ್ಥರು   

ಕೈಲಾಂಚ (ರಾಮನಗರ): ಇಲ್ಲಿನ ಕೆ.ಪಿ. ದೊಡ್ಡಿ ಗ್ರಾಮದ ಸಮೀಪ ಗುರುವಾರ ಎರಡು ಕಾಡಾನೆಗಳು ಕಾಣಿಸಿ ಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದವು. ಸಂಜೆ ವೇಳೆಗೆ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯು ನಡೆಯಿತು.

ಬೆಳಿಗ್ಗೆ 6 ಗಂಟೆ ಸುಮಾರಿಗೆ ರಮೇಶ್‌ ಅವರ ತೋಟದಲ್ಲಿ ಗಂಡಾನೆಗಳು ಕಾಣಿಸಿ ಕೊಂಡವು. ಅವರು ತೋಟಕ್ಕೆಂದು ಹೋದ ಸಂದರ್ಭ ಅಲ್ಲಿ ಆನೆಗಳನ್ನು ಕಂಡು ಕೂಡಲೇ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕ್ರಮೇಣ ಆನೆಗಳನ್ನು ಕೆ.ಪಿ. ದೊಡ್ಡಿಯ ರೇಷ್ಮೆ ಸಂಶೋಧನಾ ಕೇಂದ್ರದ ಆವರಣಕ್ಕೆ ಅಟ್ಟಿದರು. ಸಂಜೆ ಬಳಿಕ ಅವುಗಳನ್ನು ಅರ್ಕಾವತಿ ಕಣಿವೆ ಮೂಲಕ ಮತ್ತೆ ಕಾಡಿಗೆ ಕಳುಹಿಸಲಾಯಿತು.

ಜನಜಂಗುಳಿ: ಆನೆ ಊರಿಗೆ ಬಂದಿದ್ದನ್ನು ಕಂಡು ಸುತ್ತಮುತ್ತಲಿನ ಜನರು ದೌಡಾಯಿಸಿ ದರು. ಹೊತ್ತು ಕಳೆದಂತೆ ಜನರ ಗುಂಪು ಹೆಚ್ಚಾಗುತ್ತಲೇ ಹೋಯಿತು.

ADVERTISEMENT

ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ದೇವರಾಜು, ವಲಯ ಅರಣ್ಯಾಧಿಕಾರಿ ನಾಗರಾಜು ಹಾಗೂ ಸಿಬ್ಬಂದಿ ಧಾವಿಸಿದರು. ಹಗಲು ಹೊತ್ತಿನಲ್ಲಿ ಆನೆಗಳನ್ನು ಕಾಡಿಗೆ ಅಟ್ಟಲು ಮುಂದಾದಲ್ಲಿ ಅವು ಸುತ್ತಲಿನ ಜನವಸತಿ ಪ್ರದೇಶ ಇಲ್ಲವೇ ತೋಟಗಳಿಗೆ ನುಗ್ಗುವ ಸಾಧ್ಯತೆಯ ಕಾರಣ ಸಂಜೆ ಅವುಗಳನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿ ದರು, ಸಂಜೆ ನಡೆದ ಕಾರ್ಯಾಚರ ಣೆಯಲ್ಲಿ 15ರಿಂದ 20 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು,
ಇದೇ ಮೊದಲು: ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಓಡಾಟ ಸಾಮಾನ್ಯ ವಾಗಿದ್ದರೂ ಅವು ಕೆ.ಪಿ. ದೊಡ್ಡಿ ಹಾಗೂ ಸುತ್ತಮುತ್ತ ಕಾಣಿಸಿಕೊಂಡಿದ್ದು ಅಪರೂಪ.

ಇದೀಗ ರಾಮನಗರಕ್ಕೆ ಸಮೀಪದ ಗ್ರಾಮಗಳಲ್ಲಿಯೇ ಆನೆಗಳು ಕಾಣಿಸಿ ಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಅಚ್ಚಲು ಮಾರ್ಗ ವಾಗಿ ಬಂದಿರಬಹುದು ಎನ್ನಲಾಗಿದೆ.

‘ನಾಲ್ಕೈದು ದಶಕಗಳ ಹಿಂದೆ ನಮ್ಮೂರಿಗೆ ಕಾಡಾನೆಗಳು ಬಂದಿದ್ದನ್ನು ಕೇಳಿ ತಿಳಿದಿದ್ದೆವು. ಇದೇ ಮೊದಲ ಬಾರಿಗೆ ಕಣ್ಣಾರೆ ಕಾಣುತ್ತಿದ್ದೇವೆ. ಇದ ರಿಂದ ತೋಟಗಳಿಗೆ ಹೋಗುವುದಕ್ಕೂ ಭಯವಾಗುತ್ತಿದೆ. ಆನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು. ಆನೆಗಳ ಉಪಟಳದಿಂದ ನಿಯಂತ್ರಿಸದಿ ದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.