ADVERTISEMENT

ಗರ್ಭಿಣಿ ಕೊಲೆ ಆರೋಪ– ಸಂಬಂಧಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:10 IST
Last Updated 10 ಏಪ್ರಿಲ್ 2017, 6:10 IST

ಕೋಡಂಬಹಳ್ಳಿ (ಚನ್ನಪಟ್ಟಣ): ಶನಿವಾರ ನೇಣು ಬಿಗಿದು ಗರ್ಭಿಣಿ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಸಂಬಂಧಿಕರು ‘ಇದು ಆತ್ಮಹತ್ಯೆಯಲ್ಲ ಕೊಲೆ’ ಎಂದು ಆರೋಪಿಸಿ ಗ್ರಾಮದಲ್ಲಿ ಭಾನುವಾರ ಮೃತದೇಹದ ಎದುರು ಪ್ರತಿಭಟನೆಗೆ ಮುಂದಾದರು.

ನಂದಿನಿ (32) ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ ಗಂಡನನ್ನು ಸ್ಥಳಕ್ಕೆ ಕರೆಸಿ ಎಂದು ಒತ್ತಾಯಿಸಿ ಸಂಬಂಧಿಕರಾದ ಮಂಡ್ಯ ಜಿಲ್ಲೆಯ ಚಿಕ್ಕಕೊಪ್ಪಲು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.

ಕೆಲವು ಮಹಿಳೆಯರು ಧರಣಿಗೆ ಕುಳಿತರು. ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರ ಮನವೊಲಿಸಲು ಮುಂದಾದರು. ಇದಕ್ಕೆ ಒಪ್ಪದ ಮಹಿಳೆಯರು ಆಕೆಯ ಗಂಡ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿನಾಥ್, ಅಕ್ಕೂರು ಎಸ್‌ಐ ಸದಾನಂದ ಮಹಿಳೆಯರಿಗೆ ತಿಳಿಹೇಳಿ, ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮನವೊಲಿಸಿದರು. ಬಳಿಕ ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.