ADVERTISEMENT

ಪೈಪ್‌ ಒಡೆದು ನೀರು ಪೋಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 10:20 IST
Last Updated 9 ಸೆಪ್ಟೆಂಬರ್ 2017, 10:20 IST

ಮಾಗಡಿ: ಪಟ್ಟಣದ ತಿರುಮಲೆ ರಸ್ತೆಯಲ್ಲಿ ಎರಡು ದಿನಗಳಿಂದಲೂ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ನೀರು ಪೋಲಾ ಗದಂತೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪುರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಯುವ ಮುಂದಾಳು ರಮೇಶ್‌ ತಿಳಿಸಿದ್ದಾರೆ.

ಪಟ್ಟಣದ ಕೆಲವೆಡೆಗಳಲ್ಲಿ ಕುಡಿಯುವ ನೀರಿಲ್ಲದೆ ಜನತೆ ಪರದಾಡ ಬೇಕಿದೆ. ದುರಂತವೆಂದರೆ ಪುರಸಭೆಯ ಸದಸ್ಯರಾಗಲಿ, ಅಧಿಕಾರಿಗಳಾಗಲಿ ವ್ಯರ್ಥವಾಗುತ್ತಿರುವ ನೀರು ನಿಲ್ಲಿಸುವತ್ತ ಗಮನಿಸುತ್ತಿಲ್ಲ. ಮಂಚನಬೆಲೆ ಜಲಾಶಯದಿಂದ ದುಬಾರಿ ಹಣ ಖರ್ಚು ಮಾಡಿ ಮಾಗಡಿಗೆ ತರುತ್ತಿರುವ ನೀರು ಪೋಲಾಗದಂತೆ ಕ್ರಮ ಕೈಗೊಳ್ಳುವಂತೆ ಜಯರಾಮಯ್ಯ ಮನವಿ ಮಾಡಿದ್ದಾರೆ.

ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಡಾಂಬರು ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿಗಳು ಬೀಳುವ ಮುನ್ನ ಪುರಸಭೆ ಅಧಿಕಾರಿ ಗಳು ನೀರು ಹರಿದು ಹೋಗದಂತೆ ಹೊಡೆದು ಹೋಗಿರುವ ಪೈಪ್‌ ದುರಸ್ತಿ ಪಡಿಸುವಂತೆ ಶ್ರೀನಿವಾಸ್‌ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.