ADVERTISEMENT

ಶಿಕ್ಷಕ ಭೋಜಪ್ಪರಿಂದ ಕನ್ನಡ ಸಹಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:24 IST
Last Updated 15 ನವೆಂಬರ್ 2017, 10:24 IST
ಕನ್ನಡ ಸಹಿ ಆಂದೋಲನ ನಡೆಸುತ್ತಿರುವ ರಿಪ್ಪನ್‌ಪೇಟೆ ಸಮೀಪದ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ. ಭೋಜಪ್ಪ
ಕನ್ನಡ ಸಹಿ ಆಂದೋಲನ ನಡೆಸುತ್ತಿರುವ ರಿಪ್ಪನ್‌ಪೇಟೆ ಸಮೀಪದ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ. ಭೋಜಪ್ಪ   

ರಿಪ್ಪನ್‌ಪೇಟೆ: 62ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಮೀಪದ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಬಿ. ಭೋಜಪ್ಪ ಅವರು ನವೆಂಬರ್ 1ರಿಂದ 30ರವರೆಗೆ ಕನ್ನಡ ಸಹಿ ಆಂದೋಲನ ಹಮ್ಮಿಕೊಂಡಿದ್ದಾರೆ.

ತಮ್ಮ ದ್ವಿಚಕ್ರ ವಾಹನಕ್ಕೆ ಕನ್ನಡಮ್ಮನ ಧ್ವಜ ಕಟ್ಟಿ ಶಲ್ಯವನ್ನು ಹೆಗಲಿಗೆ ಹಾಕಿಕೊಂಡು ಸುತ್ತಮುತ್ತಲ ಹಳ್ಳಿ ಜನರಲ್ಲಿ ನೆಲ, ಜಲ, ಭಾಷೆಯ ಕುರಿತು ಅವರು ಜಾಗೃತಿ ಮೂಡಿಸುತ್ತಿದ್ದಾರೆ. ರಜೆಯ ಅವಧಿಯನ್ನು ಅವರು ಕನ್ನಡ ಸೇವೆಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT