ADVERTISEMENT

ದಾಸರ ಕೀರ್ತನೆ ತರ್ಜುಮೆಯಾಗಲಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:39 IST
Last Updated 7 ನವೆಂಬರ್ 2017, 9:39 IST
ತುಮಕೂರಿನಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಧುಗಿರಿಯ ವಿಜಯ ಮೋಹನ್ (ಸಾಹಿತ್ಯ), ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರ ವೆಂಕಟಪ್ಪ(ಸಮಾಜ ಸೇವೆ), ಚಿಕ್ಕನಾಯಕನಹಳ್ಳಿಯ ರಮೇಶ್ (ಗುಡಿ ಕೈಗಾರಿಕೆ), ಕೊರಟಗೆರೆ ತಾಲ್ಲೂಕು ತೋವಿನಕೆರೆಯ ಪದ್ಮರಾಜು( ಕೃಷಿ), ಶಿರಾ ತಾಲ್ಲೂಕು ಬರಗೂರು ವಿರೂಪಾಕ್ಷ( ಪತ್ರಿಕೋದ್ಯಮ), ಕೋರಾದ ಡಿ.ಜಯಲಕ್ಷ್ಮಮ್ಮ (ಶಿಕ್ಷಣ), ತುಮಕೂರಿನ ಟಿ.ಸೀತಾರಾಮಯ್ಯ (ರಂಗಭೂಮಿ) ಅವರಿಗೆ ಜಿಲ್ಲಾ ಕನಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆ.ಪಿ.ಮೋಹನ್‌ ರಾಜ್,ನಂಜರಾಜು, ಭೀಮರಾಜು, ಎನ್.ಮಹೇಶ್, ಶಿವಮೂರ್ತಿ, ಬಿ.ಎಂ.ಕಾಂತರಾಜ್, ಟಿ.ಬಿ.ಜಯಚಂದ್ರ, ಡಾ.ರಫೀಕ್ ಅಹಮ್ಮದ್, ಬಿಂದುಶೇಖರವ ಒಡೆಯರ್ ಸ್ವಾಮೀಜಿ, ಆಯುಕ್ತ ಮಂಜುನಾಥಸ್ವಾಮಿ, ಬಿ.ಕೆ.ಮಂಜುನಾಥ್ ಇದ್ದರು
ತುಮಕೂರಿನಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಧುಗಿರಿಯ ವಿಜಯ ಮೋಹನ್ (ಸಾಹಿತ್ಯ), ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರ ವೆಂಕಟಪ್ಪ(ಸಮಾಜ ಸೇವೆ), ಚಿಕ್ಕನಾಯಕನಹಳ್ಳಿಯ ರಮೇಶ್ (ಗುಡಿ ಕೈಗಾರಿಕೆ), ಕೊರಟಗೆರೆ ತಾಲ್ಲೂಕು ತೋವಿನಕೆರೆಯ ಪದ್ಮರಾಜು( ಕೃಷಿ), ಶಿರಾ ತಾಲ್ಲೂಕು ಬರಗೂರು ವಿರೂಪಾಕ್ಷ( ಪತ್ರಿಕೋದ್ಯಮ), ಕೋರಾದ ಡಿ.ಜಯಲಕ್ಷ್ಮಮ್ಮ (ಶಿಕ್ಷಣ), ತುಮಕೂರಿನ ಟಿ.ಸೀತಾರಾಮಯ್ಯ (ರಂಗಭೂಮಿ) ಅವರಿಗೆ ಜಿಲ್ಲಾ ಕನಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆ.ಪಿ.ಮೋಹನ್‌ ರಾಜ್,ನಂಜರಾಜು, ಭೀಮರಾಜು, ಎನ್.ಮಹೇಶ್, ಶಿವಮೂರ್ತಿ, ಬಿ.ಎಂ.ಕಾಂತರಾಜ್, ಟಿ.ಬಿ.ಜಯಚಂದ್ರ, ಡಾ.ರಫೀಕ್ ಅಹಮ್ಮದ್, ಬಿಂದುಶೇಖರವ ಒಡೆಯರ್ ಸ್ವಾಮೀಜಿ, ಆಯುಕ್ತ ಮಂಜುನಾಥಸ್ವಾಮಿ, ಬಿ.ಕೆ.ಮಂಜುನಾಥ್ ಇದ್ದರು   

ತುಮಕೂರು: ಸಂತಶ್ರೇಷ್ಠ ಕನಕದಾಸರ ಕೀರ್ತನೆಗಳು ಇಂಗ್ಲಿಷ್ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಯಾಗಿ ಹೆಚ್ಚು ಜನರಿಗೆ ತಲುಪುವಂತಾಗಬೇಕು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕಾಳಿದಾಸ ವಿದ್ಯಾವರ್ಧಕ ಸಂಘ, ಜಿಲ್ಲೆಯ ಕುರುಬ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕನಕದಾಸರ 530ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕನಕದಾಸರ ಕೀರ್ತನೆಗಳ ಕೈಪಿಡಿ ಮಾಡಿ ಪ್ರತಿ ಮನೆ ಮನೆಗೂ ಹಂಚುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು. ‘ಕನಕದಾಸರು ಪ್ರತಿಪಾದಿಸಿದ ತತ್ವ ಸಿದ್ಧಾಂತಕ್ಕೆ ಕೆಡುಕನ್ನುಂಟು ಮಾಡುವ ಕೆಲ ದುಷ್ಟ ಶಕ್ತಿಗಳು ಈಗಿನ ಸಮಾಜದಲ್ಲೂ ಇವೆ. ಶೂದ್ರ ಸಮುದಾಯಕ್ಕೆ ಸೇರಿದ ಕನಕದಾಸರು ದಾಸಪರಂಪರೆಯಲ್ಲೇ ಶ್ರೇಷ್ಠ ಸಂತರಾಗಿ ಹೊರಹೊಮ್ಮಿದರು’ ಎಂದರು.

ADVERTISEMENT

‘ಜಾತಿ ಭ್ರಮೆಗೆ ಸಿಲುಕಿದವರು ಈ ಬಗ್ಗೆ ಚಿಂತನೆ ಮಾಡಬೇಕು. ಡಾ.ರಾಜಕುಮಾರ್ ಅವರು ಅಭಿನಯಿಸಿದ ಭಕ್ತ ಕನಕದಾಸ ಚಲನಚಿತ್ರ ಕನಕದಾಸರ ಜೀವನ, ಚಿಂತನೆಗಳ ಬಗ್ಗೆ ಸಮಾಜಕ್ಕೆ ಹೆಚ್ಚಿನ ಬೆಳಕು ಚೆಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯಕ್ಕೆ ಪುರಂದರದಾಸರು ಮತ್ತು ಕನಕದಾಸರು ಹೆಚ್ಚು ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಸದಾ ಜನಮನದಲ್ಲಿ ಉಳಿಯಬೇಕು’ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಲೇಖಕ ಡಾ.ಕೆ.ಪಿ.ನಟರಾಜ್,‘ ಕನಕದಾಸರು ಕವಿ, ದಾರ್ಶನಿಕರು ಆಗಿದ್ದರು. ಹರಿತತ್ವ, ವೈಷ್ಙವ ತತ್ವ ಪ್ರತಿಪಾದಿಸಿದರು’ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಚನ್ನಬಸವಣ್ಣ, ಅಕ್ಕಮಹಾದೇವಿ ಹೀಗೆ ಅನೇಕ ಶರಣರು ಸಮಾನತೆ, ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಆದರೆ, ಕನಕದಾಸರ ಕಾಲಘಟ್ಟದಲ್ಲಿ ಕನಕದಾಸರೊಬ್ಬರೇ ಏಕಾಂಗಿಯಾಗಿ ಸಮಾನತೆ, ಸಮಾಜ ಸುಧಾರಣೆ ಕಾರ್ಯವನ್ನು ನಿರ್ವಹಿಸಿದರು’ ಎಂದು ವಿವರಿಸಿದರು.

‘ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವುದು ಕಷ್ಟವಾಗಿದೆ. ಡಾ.ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರ ಕೃತಿಗಳಲ್ಲೂ ಕನಕದಾಸರ ಚಿಂತನೆಯ ಚೈತನ್ಯವೇ ಇದ್ದರೂ ಅವರು ದುಷ್ಕರ್ಮಿಗಳು ನಡೆಸಿದ ಕೃತ್ಯಕ್ಕೆ ಬಲಿಯಾದರು’ ಎಂದು ವಿಷಾದಿಸಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಡಾ.ರಫೀಕ್ ಅಹಮ್ಮದ್ ಮಾತನಾಡಿ, ‘ಕನಕದಾಸರು ಒಂದು ಸಮಾಜಕ್ಕೆ ಮಾತ್ರ ಸೀಮಿತರಾದವರಲ್ಲ. ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಒಂದೇ ಒಂದು ಕೀರ್ತನೆ ವಿಶ್ವಕ್ಕೆ ಏಕತೆಯ ಸಂದೇಶ ಸಾರಿದೆ. ಇಂತಹ ಅನೇಕ ಕೀರ್ತನೆಗಳಿವೆ ಎಂದರು.

‘ಕನಕದಾಸರು ಜನ್ಮಸ್ಥಳ ಬಾಡ ಗ್ರಾಮವನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಅವರ ಜೀವನ ಕುರಿತು ಅನೇಕ ಸಂಶೋಧನೆಗಳೂ ನಡೆಯುತ್ತಿವೆ’ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಜಿಲ್ಲಾ ಕನಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕನಕದಾಸರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಜಿ.ರಾಧಾ, ದೀಪ್ತಿ, ಪುಷ್ಪಲತಾ, ಆರ್.ಎಸ್.ನಿತಿನ್, ಕೆ.ಕಾವ್ಯಾ ಅವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಡ ಶಿವಮೂರ್ತಿ, ಪಾಲಿಕೆ ಸದಸ್ಯರಾದ ಎನ್.ಮಹೇಶ್, ಟಿ.ಇಂದ್ರಕುಮಾರ್, ಪಿ.ಕೆಂಪರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಂಜರಾಜು, ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಭೀಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.