ADVERTISEMENT

ಬೆಳಗರಹಳ್ಳಿ ಕೆರೆ ಅಭಿವೃದ್ಧಿಗೆ ₹ 10 ಲಕ್ಷ ವೆಚ್ಚ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:22 IST
Last Updated 21 ಮೇ 2017, 10:22 IST

ತಿಪಟೂರು: ‘ಕೆರೆ ಕಟ್ಟೆಗಳು ಅಂತರ್ಜಲದ ಮೂಲವಾಗಿದ್ದು, ಕೆರೆಗಳನ್ನು ಅಭಿವೃದ್ದಿ ಪಡಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ದೂರವಾಗುತ್ತದೆ. ನೀರಿನ ಸೆಲೆಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಎ.ಜಿ. ಪ್ರವೀಣ್ ತಿಳಿಸಿದರು.

ತಾಲ್ಲೂಕಿನ ಬೆಳಗರಹಳ್ಳಿ ಗ್ರಾಮದ ಹೊನ್ನನಕಟ್ಟೆಯಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಹೂಳೆತ್ತುವ ಕಾರ್ಯದ ಕಾಮಗಾರಿ ಪರೀಶಿಲಿಸಿದ ಅವರು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆ  ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ರಾಜ್ಯದಾದ್ಯಂತ ನೂರು ಕೆರೆಗಳನ್ನು ಹೂಳುತೆಗೆದು ಪುನಶ್ವೇತನಗೊಳಿಸಲಾಗುತ್ತಿದೆ.. ತುಮಕೂರು ಜಿಲ್ಲೆಯಲ್ಲಿ ಐದು ತಾಲ್ಲೂಕು ಆಯ್ಕೆಮಾಡಲಾಗಿದೆ. ತಿಪಟೂರು ತಾಲ್ಲೂಕಿನ ಬೆಳಗರಹಳ್ಳಿ ಗ್ರಾಮದ ಹೊನ್ನೇನಕಟ್ಟೆಕೆರೆ ಹೂಳು ತೆಗೆಯಲಾಗುತ್ತಿದೆ. ಕೆರೆಯ ಮಣ್ಣನ್ನು ರೈತರ ಜಮೀನುಗಳಿಗೆ ಹಾಕುವುದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ADVERTISEMENT

ಹೊನ್ನೆನಕಟ್ಟೆಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸದಾಶಿವಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಸಾವಿರ ಅಡಿ ಕೊಳವೆಬಾವಿ ಕೊರೆದರು  ನೀರು ಸಿಗುತ್ತಿಲ್ಲ. ಅಂತರ್‌ಜಲ ತೀವ್ರವಾಗಿ ಕುಸಿದಿದೆ. ನಮ್ಮ ಗ್ರಾಮದ ರೈತರ ಸಮಸ್ಯೆಯನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರ ಕೆರೆ ಹೂಳು ತೆಗೆಯುತ್ತಿರುವುದು ಸಂತಸದ ಸಂಗತಿ.

ಈ ಕೆರೆಯಲ್ಲಿ ಹೂಳು ತೆಗೆಯುವುದರಿಂದ ಸುತ್ತಲ ನಾಲ್ಕೈದು ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ತೆಂಗು ಸೇರಿದಂತೆ ರೈತರ ಬೆಳೆಗಳಿಗೂ ಅನುಕೂಲವಾಗುತ್ತದೆ. ಶ್ರೀಕ್ಷೇತ್ರ ಯೋಜನೆಗೆ ಬೆಳಗರಹಳ್ಳಿ ಗ್ರಾಮಸ್ಥರು ಉತ್ತಮವಾಗಿ ಸ್ವಂದಿಸುತ್ತಿದ್ದಾರೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜನಯ್ಯ, ಮುಖಂಡರಾದ ಚಂದ್ರಶೇಖರ್, ಗಂಗಾಧರ್, ಸುರೇಶ್, ಗಣೇಶ, ಅರುಣ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.