ADVERTISEMENT

ಆಸ್ತಿ ನೋಂದಣಿ ಪ್ರಮಾಣ ಕುಸಿತ

ನೋಟು ರದ್ದು: ನೋಂದಣಿ ಇಲಾಖೆಯ ಗುರಿ ಸಾಧನೆ ಕಷ್ಟಸಾಧ್ಯ

ಎಂ.ನವೀನ್ ಕುಮಾರ್
Published 5 ಡಿಸೆಂಬರ್ 2016, 8:27 IST
Last Updated 5 ಡಿಸೆಂಬರ್ 2016, 8:27 IST
ಉಡುಪಿ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇರಿ
ಉಡುಪಿ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇರಿ   

ಉಡುಪಿ: ಕೇಂದ್ರ ಸರ್ಕಾರ ₹500 ಹಾಗೂ ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವು ದರಿಂದ ಹಾಗೂ ಬ್ಯಾಂಕ್‌ಗಳಿಂದ ನಗದು ಪಡೆದುಕೊಳ್ಳುವುದಕ್ಕೆ ಮಿತಿ ಹೇರಿರುವುದರಿಂದ ಆಸ್ತಿ ನೋಂದಣಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮ ಈ ಬಾರಿ ನೋಂದಣಿ ಇಲಾಖೆಯ ಗುರಿ ಸಾಧನೆ ಕಷ್ಟ ಸಾಧ್ಯವಾಗಿದೆ.

ರಾಜ್ಯ ಸರ್ಕಾರದ ಬೊಕ್ಕಸ ತುಂಬಿ ಸುವ ಪ್ರಮುಖ ಇಲಾಖೆಗಳಲ್ಲಿ ನೋಂ ದಣಿ ಇಲಾಖೆ ಒಂದಾಗಿದೆ. ಆದ್ದರಿಂದ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇ ರಿಗೆ ಪ್ರತಿ ವರ್ಷ ಆದಾಯದ ಗುರಿ ನಿಗದಿ ಪಡಿಸಲಾಗುತ್ತದೆ. ಸಾಮಾನ್ಯವಾಗಿ ಹಿಂ ದಿನ ವರ್ಷದ ಆದಾಯಕ್ಕಿಂತ ಶೇ 5ರಷ್ಟು ಹೆಚ್ಚು ನೀಡಲಾಗುತ್ತದೆ.

ಒಮ್ಮೆಗೆ ಐದು ಆಸ್ತಿ ನೋಂದಣಿ ಮಾಡಲು ಅನುಕೂಲವಾಗುವಂತೆ ಐದು ಕಂಪ್ಯೂಟರ್‌ ಹಾಗೂ ಇತರ ಮೂಲ ಸೌಕರ್ಯಗಳನ್ನು ಉಡುಪಿಯ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇರಿಗೆ ಒದಗಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ದಿನ ಸರಾಸರಿ 80 ಆಸ್ತಿ ನೋಂದಣಿ ಯಾಗುತ್ತದೆ. ಆದರೆ, ಗರಿಷ್ಠ ಬೆಲೆಯ ನೋಟುಗಳು ರದ್ದಾದ ಬಳಿಕ ಇದರ ಪ್ರಮಾಣ ಸರಾಸರಿ 40ಕ್ಕೆ ಇಳಿದಿದೆ. ದಿನ ವೊಂದಕ್ಕೆ ಕೇವಲ 19 ನೋಂದಣಿ ಯಾಗುವ ಮೂಲಕ ಕನಿಷ್ಠ ಸಾಧನೆಯೂ ದಾಖಲಾಗಿದೆ. ಆದ್ದರಿಂದ ಈ ಬಾರಿ ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ತಲುಪುವುದು ಅಸಾಧ್ಯ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಅಕ್ಟೋಬರ್ 13ರಿಂದ 28ರವರೆಗೆ ಒಟ್ಟು 612 ನೋಂದಣಿಯಾಗಿತ್ತು. ಆದರೆ, ನವೆಂಬರ್‌ 8ರಿಂದ 24ರ ವರೆಗೆ ಕೇವಲ 521 ಆಸ್ತಿ ನೋಂದಣಿಯಾಗಿದೆ. ಆದ್ದರಿಂದ ಇದು ಗುರಿ ಸಾಧನೆಯ ಮೇಲೆ ಪರಿಣಾಮ ಬೀರಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹49 ಕೋಟಿ ಆದಾ ಯದ ಗುರಿ ನೀಡಲಾಗಿತ್ತು, ಅದರಲ್ಲಿ ಶೇ 98ರಷ್ಟು ಗುರಿ ಸಾಧನೆ ಮಾಡಲಾಗಿತ್ತು. ಈ ವರ್ಷ ₹55 ಕೋಟಿ ಗುರಿ ನೀಡಿದ್ದಾರೆ ಎಂದು ಹಿರಿಯ ಉಪ ನೋಂದಣಾ ಧಿಕಾರಿ ಕೀರ್ತಿ ಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಉಪ ನೋಂದಣಾ ಧಿಕಾರಿ ಕಚೇರಿಯ ಆವರಣ ಜನರಿಂದ ತುಂಬಿರುತ್ತದೆ. ಆದರೆ, ಈಗ ದೃಶ್ಯವೇ ಬದಲಾಗಿ ಹೋಗಿದೆ. ದೊಡ್ಡ ಸಾಲುಗಳು ಕಚೇರಿ ಮುಂದೆ ಕಂಡುಬರುತ್ತಿಲ್ಲ. ಅಲ್ಲದೆ ನೋಂದಣಿಗೆ ಸಂಬಂಧಿಸಿದ ಪತ್ರ ಬರಹ, ಝೆರಾಕ್ಸ್‌ ಮುಂತಾದ ವಹಿ ವಾಟಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ಎಲ್ಲರೂ ಗ್ರಾಹಕರಿಗಾಗಿ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಆಸ್ತಿ ಖರೀದಿಯ ವೇಳೆ ಎಲ್ಲ ಮೊತ್ತ ವನ್ನು ಚೆಕ್‌ ಅಥವಾ ಡಿಡಿ ರೂಪದ ಲ್ಲಿಯೇ ನೀಡುವುದಿಲ್ಲ. ಒಂದಿಷ್ಟು ಪ್ರಮಾಣದ ಹಣವನ್ನು ನಗದಿನ ಮೂಲಕ ನೀಡಲಾಗುತ್ತದೆ. ಗರಿಷ್ಠ ಮುಖ ಬೆಲೆಯ ನೋಟುಗಳು ರದ್ದಾಗಿರು ವುದರಿಂದ ಹಳೆಯ ನೋಟುಗಳನ್ನು ತೆಗೆದುಕೊಳ್ಳಲು ಖರೀದಿದಾರರು ನಿರಾ ಕರಿಸುತ್ತಿದ್ದಾರೆ. ಹೊಸ ನೋಟು ಪಡೆ ಯಲು ಮಿತಿ ಹೇರಿರುವುದರಿಂದ ಅಗತ್ಯ ದಷ್ಟು ನೋಟುಗಳು ಸಿಗುತ್ತಿಲ್ಲ. ಆದ್ದ ರಿಂದ ಆಸ್ತಿ ಖರೀದಿ ಸ್ಥಗಿತಗೊಂಡಿದೆ.

ಸರ್ಕಾರ ಮುಂದೆ ಯಾವ ನಿರ್ಧಾರ ತೆಗೆ ದುಕೊಳ್ಳಬಹುದು ಎಂಬ ಆತಂಕವೂ ಜನರು ಆಸ್ತಿ ಖರೀದಿಗೆ ಮುಂದಾಗ ದಿರುವುದಕ್ಕೆ ಇನ್ನೊಂದು ಕಾರಣ’ ಎನ್ನುತ್ತಾರೆ ಮಹೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.