ADVERTISEMENT

ಒಂದೇ ಕುಟುಂಬದವರಂತೆ ಬಾಳಬೇಕು

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:00 IST
Last Updated 3 ಜುಲೈ 2017, 9:00 IST

ಉಡುಪಿ: ‘ಭಾರತೀಯ ಸಂಸ್ಕೃತಿ ಅತ್ಯಂತ ಪ್ರಾಚೀನವಾಗಿದ್ದು ಇದರ ಆದಿ, ಅಂತ್ಯ, ವ್ಯಾಪ್ತಿಯನ್ನು ತಿಳಿಯುವುದು ಬಹಳ ಕಷ್ಟ ಸಾಧ್ಯ’ ಎಂದು  ಬಾಳೆಕುದ್ರು ಮಠ ನೃಸಿಂಹಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಪುನರ್ ಮುದ್ರಣಾ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾವೆಲ್ಲ ಸೋದರರಂತೆ ಒಂದಾಗಿ ಬಾಳ ಬೇಕು. ರಾಮಯಾಣ ಮಹಾಭಾರತ ಮಹಾಗ್ರಂಥ ಹಾಗೂ ಗತ ಕಾಲದ ಸಂಸ್ಕೃತಿಗಳ ಬಗ್ಗೆ ತಿಳಿದರೆ, ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮ ಪಡುತ್ತೇವೆ’ ಎಂದರು.

ADVERTISEMENT

‘ವರ್ತಮಾನದ ಜೀವನ ಉಜ್ವಲವಾಗಬೇಕಾದರೆ ಗತಕಾಲದ ಇತಿಹಾಸ ಸಾರುವ ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಓದುವುದು ಅಗತ್ಯ. ಈ ಗ್ರಂಥ ಮುಂದಿನ ಯುವ ಪೀಳಿಗೆ, ಪೂರ್ವಿಕರ ಮೂಲಗಳನ್ನು ತಿಳಿಸುವುದರ ಜೊತೆಗೆ, ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತದೆ’ ಎಂದು ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಗುರು ಡಾ.ಎಚ್.ವಿ.ನರಸಿಂಹಮೂರ್ತಿ ತಿಳಿಸಿದರು.

ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗ್ರಂಥ ಪುನರ್ ಮುದ್ರಣಾ ಸಮಿತಿ ಗೌರವಧ್ಯಕ್ಷ ತಾಡಿಚರ್ಲ ವೀರ ರಾಘವ ಶರ್ಮ, ಗ್ರಂಥ ಸಂಪಾದಕ ಡಾ.ಜಿ. ಜ್ಞಾನಾನಂದ, ಡಾ. ರಾಘವ ನಂಬಿಯಾರ್, ಚಂದ್ರಕಾಂತ ಶರ್ಮಾ, ಚಂದ್ರೇಶ್, ಕಾಳಿಕಾಂಬಾ ದೇವಸ್ಥಾನ ಬಾರ್ಕೂರು ಆಡಳಿತಾಧಿಕಾರಿ ಶ್ರೀಧರ್.ವಿ, ಕಾರ್ಕಳ ಹರೀಶ್ ಆಚಾರ್ಯ, ಎ.ಕಟಪಾಡಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.

ಪ್ರಕಾಶ್ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು, ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಪುನರ್ ಮುದ್ರಣಾ ಸಮಿತಿ ಅಧ್ಯಕ್ಷ ವಾದಿರಾಜ್ ಆಚಾರ್ಯ ಸ್ವಾಗತಿಸಿದರು, ಕಾರ್ಯದರ್ಶಿ ಎಸ್. ನಿತ್ಯಾನಂದ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.